ಮೋದಿ ತವರಿಗೆ ಕೇಜ್ರಿವಾಲ್, ಮಾಧ್ಯಮಗಳಿಗೆ ಪ್ರವೇಶ ನಿಷಿದ್ಧ

Written By:
Subscribe to Oneindia Kannada

ಅಹಮದಾಬಾದ್,ಜುಲೈ, 09: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿಯ ತವರು ಗುಜರಾತ್ ಗೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ಸೋಮನಾಥ ದೇವಾಲಯಕ್ಕೆ ತೆರಳಿದ್ದಾರೆ.

ಇದಿಷ್ಟೆ ಆಗಿದ್ದರೆ ಸಣ್ಣ ಸುದ್ದಿಯಾಗುತ್ತಿತ್ತು. ಸೋಮನಾಥ ಟ್ರಸ್ಟ್ ಭದ್ರತೆ ಕಾರಣ ನೀಡಿ ಮಾಧ್ಯಮಗಳಿಗೆ ಪ್ರವೇಶ ನಿಷೇಧ ಮಾಡಿದೆ. ಉಗ್ರರ ಅಟ್ಟಹಾಸದ ಕಾರಣಕ್ಕೆ ಮಾಧ್ಯಮಗಳ ಕವರೇಜ್ ಗೆ ಅವಕಾಶ ನೀಡಲಿಲ್ಲ ಎಂದು ಟ್ರಸ್ಟ್ ಸ್ಪಷ್ಟನೆ ನೀಡಿದೆ.[ಪ್ರಧಾನಿ ಮೋದಿ ವಿದ್ಯಾರ್ಹತೆ: ಕೇಜ್ರಿವಾಲ್ ಸಿಡಿಸಿದ ಬಾಂಬ್]

arvind kejriwal

ಮಾಧ್ಯಮಗಳಿಗೆ ಪ್ರವೇಶ ನಿಷೇಧ ಮಾಡಿದ್ದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. #AKInGujarat ಬೆಳಗ್ಗೆಯಿಂದ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಅರವಿಂದ್ ಕೇಜ್ರಿವಾಲ್ ತಮ್ಮ ಎರಡು ದಿನದ ಭೇಟಿಯಲ್ಲಿ ಗುಜರಾತ್ ನ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ.[ಕನ್ನಡ ಪತ್ರಿಕೆಯಲ್ಲಿ ಕೇಜ್ರಿವಾಲ್ ಸರ್ಕಾರದ ಜಾಹೀರಾತು ಯಾಕೆ?]

2017 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ 21 ವರ್ಷಗಳಿಂದ ಗುಜರಾತ್ ಬಿಜೆಪಿ ಆಡಳಿತದಲ್ಲಿದೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಆಡಳಿತ ನೀಡಿ ದೆಹಲಿ ಗದ್ದುಗೆ ಏರಿ ಕುಳಿತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೆ ಕೇಜ್ರಿವಾಲ್ ಭೇಟಿ ನೀಡಿದ್ದಾರೆ. ಮುಂದಿನ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗುಜರಾತ್ ನ 182 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದೆ.[ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್ ಗೆ ಇಲ್ಲಿದೆ ಉತ್ತರ]

ಗೋವಾ, ಪಂಜಾಬ್ ಮೇಲೂ ಕೇಜ್ರಿ ಕಣ್ಣು
ಗೋವಾ ಮತ್ತು ಪಂಜಾಬ್ ಸಹ ಚುನಾವಣೆಯನ್ನು ಎದುರಿಸಲಿವೆ. ಕೇಜ್ರಿವಾಲ್ ಹೇಳಿರುವಂತೆ ಗೋವಾದ 40 ಸ್ಥಾನಗಳಲ್ಲಿ 35ನ ಸ್ಥಾನಗಳನ್ನು ಎಎಪಿ ಗೆಲ್ಲಲ್ಲಿದೆ. ಜುಲೈ 18 ರಂದು ಕೇಜ್ರಿವಾಲ್ ಗೋವಾ ಪ್ರವಾಸವನ್ನು ನಿಗದಿ ಮಾಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Delhi Chief Minister and Aam Aadmi Party (AAP) chief Arvind Kejriwal on Saturday (July 9) visited Gujarat with his family to pay obeisance at the Somnath Temple. The Somnath Trust banned media coverage of the visit for security reasons, said local sources.
Please Wait while comments are loading...