ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಕಲಿಸದ ಬೆಂಗಳೂರಿನ ಶಾಲೆಗಳಿಗೆ ದಂಡ

By Nayana
|
Google Oneindia Kannada News

Recommended Video

ಕನ್ನಡ ಕಲಿಸದ ಬೆಂಗಳೂರಿನ ಶಾಲೆಗಳಿಗೆ ದಂಡ | Oneindia Kannada

ಬೆಂಗಳೂರು, ಜೂನ್ 14: ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸದ ಬೆಂಗಳೂರು ನಗರ ವ್ಯಾಪ್ತಿ ಶಾಲೆಗಳಿಗೆ ದಂಡ ವಿಧಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ವರ್ಷದಿಂದ ಜಾರಿಗೊಂಡ ಕನ್ನಡ ಭಾಷಾ ಕಲಿಕೆ ಅಧಿನಿಯಮ-2015ರ ಪ್ರಕಾರ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸಬೇಕು. ಆದರೆ ಈ ನಿಯಮದ ಪ್ರಕಾರ ಕನ್ನಡವನ್ನು ಬೋಧಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೂರು ವರ್ಷ ಹೊಸ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ಇಲ್ ಮೂರು ವರ್ಷ ಹೊಸ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ಇಲ್

ಹೀಗಾಗಿ ಮೊದಲ ಹಂತದಲ್ಲಿ ಭಾಷಾ ಅಧಿನಿಯಮಾನುಷ್ಠಾನಗೊಳಿಸದ ಶಾಲೆಗಳಿಗೆ ದಂಡ ವಿಧಿಸುವಂತೆ ಹಾಗೂ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಶಾಲೆಯ ಅನುಮತಿ ರದ್ದುಗೊಳಿಸಲು ಶಿಫಾರಸು ಮಾಡುವಂತೆ ಸೂಚಿಸಲಾಯಿತು.

KDA instructs impose penalty on pvt schools voolating Kannada teaching

ರಾಜ್ಯದಲ್ಲಿ ಕನ್ನಡ ಕಲಿಕೆಗೆ ಒತ್ತು ನೀಡಲು ಸಿದ್ದರಾಮಯ್ಯ ಸರ್ಕಾರ ಭಾಷಾ ಅಧಿನಿಯಮ ಜಾರಿಗೊಳಿಸಿತ್ತು. 2017ರ ಜುಲೈನಲ್ಲಿ ಜಾರಿಗೊಂಡ ನಿಯಮದ ಪ್ರಕಾರ 2017-18ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿ ಹಾಗೂ 2018-19ನೇ ಸಾಲಿನಲ್ಲಿ ಒಂದು ಮತ್ತು ಡೆರನೇ ತರಗತಿಗೆ ಹೀಗೆ 2026ರ ವೇಳೆಗೆ 10ನೇ ತರಗತಿವರೆಗೆ ಪ್ರತಿಯೊಂದು ಶಾಲೆಯಲ್ಲಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು.

ಬೆಂಗಳೂರು ನಗರ, ದಕ್ಷಿಣ, ಗ್ರಾಮಾಂತರ ಭಾಗದ ಖಾಸಗಿ, ಅನುದಾನ, ಅನುದಾನ ರಹಿತ ಶಾಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು

English summary
Kannada Development Authority has given instructions to the state government to impose heavy penalty for violating Kannada teaching as first or second language in private schools in
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X