ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಡರಾತ್ರಿ ರಾಜ್ಯಕ್ಕೆ ಬಂದ ಕೆ.ಸಿ.ವೇಣುಗೋಪಾಲ್, ಕೈ ಮುಖಂಡರ ಜತೆ ಚರ್ಚೆ

|
Google Oneindia Kannada News

ಬೆಂಗಳೂರು, ಜನವರಿ 15: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಹಠಾತ್ತನೆ ರಾಜ್ಯಕ್ಕೆ ಬಂದಿದ್ದು, ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಸೇರಿ ಮುಂದಿನ ನಡೆಗಳ ಬಗ್ಗೆ ಚರ್ಚೆಯಲ್ಲಿ ನಿರತರಾಗಿದ್ದಾರೆ.

ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್‌ನ 5 ಶಾಸಕರು ನಾಪತ್ತೆ!ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್‌ನ 5 ಶಾಸಕರು ನಾಪತ್ತೆ!

ರಾಹುಲ್ ಗಾಂಧಿ ಅವರ ಜೊತೆ ದುಬೈ ಪ್ರವಾಸದಲ್ಲಿದ್ದ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ತಡರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ವೇಣುಗೋಪಾಲ್ ಅವರ ಹಠಾತ್‌ ಆಗಮನವೇ ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತಿದೆ.

ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ? ದೆಹಲಿಯಲ್ಲಿರುವ 104 ಬಿಜೆಪಿ ಶಾಸಕರು ನನ್ನವರು: ಏನಿದು ಎಚ್ದಿಕೆ ಮಾತಿನ ಮರ್ಮ?

ವೇಣುಗೋಪಾಲ್ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇನ್ನುಳಿದ ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ವಿವರ ಪಡೆದಿದ್ದಾರೆ.

KC Venugopal came to Bengaluru, meeting with congress leaders

ಕಾಣೆಯಾಗಿರುವ ಶಾಸಕರ ಬಗ್ಗೆ ಮಾಹಿತಿ ಪಡೆದಿರುವ ಅವರು, ಅತೃಪ್ತ ಶಾಸಕರ ಜೊತೆ ಸ್ವತಃ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ. ಕಾಣೆಯಾದ ಶಾಸಕರನ್ನು ಸಂಪರ್ಕಿಸಲು ಈಗಾಗಲೇ ಯತ್ನಗಳು ಪ್ರಾರಂಭವಾಗಿವೆ.

English summary
Karnataka congress in charge KC Venugopal came to Benagluru yesterday night. He had meetings with state congress leaders today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X