ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಗೀತೆ ಧಾಟಿ ಹೇಗಿರಬೇಕು? ನವೆಂಬರ್ 14ಕ್ಕೆ ಮಹತ್ವದ ಸಭೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ಅನೇಕ ವರ್ಷಗಳಿಂದ ನಾಡಗೀತೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅದರ ಧಾಟಿ ಹಾಗೂ ಸಮಯದ ಕುರಿತು ಇನ್ನೊಂದು ಚರ್ಚೆ ಶೀಘ್ರ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತು ನವೆಂಬರ್ 14ರಂದು ಆಯೋಜಿಸಿರುವ ಸಭೆಗೆ ಸುಮಾರು 50ಕ್ಕೂ ಹೆಚ್ಚು ಗಣ್ಯರು ಆಗಮಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಕೆಲವು ಸಂಗೀತಗಾರರು ಆಲಾಪ, ಪುನರಾವರ್ತನೆ ಸೇರಿ 7-8 ನಿಮಿಷ ಹಾಡುವುದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ , ಹಿರಿಯ ನಾಗರಿಕರಿಗೆ ಅಷ್ಟು ಹೊತ್ತು ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂಬ ಕೂಗು ಕೇಳಿಬಂದಿದೆ.

ಕುವೆಂಪು, ನಾಡಗೀತೆಯನ್ನು ಟೀಕಿಸಿದ ಸಾಹಿತಿ ಪಾಟೀಲ ಪುಟ್ಟಪ್ಪ ಕುವೆಂಪು, ನಾಡಗೀತೆಯನ್ನು ಟೀಕಿಸಿದ ಸಾಹಿತಿ ಪಾಟೀಲ ಪುಟ್ಟಪ್ಪ

ಹೀಗಾಗಿ ಎರಡರಿಂದ ಎರಡೂವರೆ ನಿಮಿಷದಲ್ಲಿ ಹಾಡಿ ಮುಗಿಸುವಂತಾಗಲು ಈ ಸಭೆ ನಡೆಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ. ಇನ್ನು ಧಾಟಿ ಕುರಿತು ಕಲವರು ಮೈಸೂರು ಅನಂತಸ್ವಾಮಿಯವರದ್ದು ಎಂದರೆ, ಮತ್ತೆ ಕೆಲವರು ಸಿ ಅಶ್ವತ್ಥ್ ಧಾಟಿ ಎನ್ನುತ್ತಾರೆ.

KaSaPa to hold meeting on state anthem on November 14

ಆದರೆ ಸದ್ಯಕ್ಕೆ ಸಮಯದಲ್ಲಿ ನಾಡಗೀತೆ ಹಾಡಿ ತೋರಿಸಲು ಐವರು ಗಾಯಕಿಯರೂ ಸಭೆಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ. ಸಾಹಿತಿಗಳಿ, ವಿದ್ವಾಂಸರು, ಗಾಯಕರನ್ನು ಸಭೆಗೆ ಆಹ್ವಾನಿಸಲಾಗುತ್ತಿದೆ.

English summary
Kannada Sahithya Parishat is holding a meeting of 50 experts to finalise the volume, tune and time of the state anthem on November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X