ಬಿಬಿಎಂಪಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕೆಎಎಸ್ ಅಧಿಕಾರಿ ಮಥಾಯಿ!

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 10 : ಕೆಎಎಸ್ ಅಧಿಕಾರಿ ಕೆ.ಮಥಾಯಿ ಬಿಬಿಎಂಪಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೇತನದಿಂದ ಕಡಿತ ಮಾಡಿದ ಸಾಮಾನ್ಯ ಭವಿಷ್ಯ ನಿಧಿ ಹಣವನ್ನು ಭವಿಷ್ಯ ನಿಧಿ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸೈಕಲ್ ಏರಿ ಕಚೇರಿಗೆ ಬಂದ ಕೆಎಎಸ್ ಅಧಿಕಾರಿ ಕೆ.ಮಥಾಯ್!

2014ರ ನವೆಂಬರ್‌ನಿಂದ 2016ರ ಏಪ್ರಿಲ್ ತನಕ ಕೆ.ಮಥಾಯಿ ಪಾಲಿಕೆಯ ಸಹಾಯಕ ಆಯುಕ್ತ (ಜಾಹೀರಾತು ವಿಭಾಗ)ರಾಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ ಅವರ ವೇತನದಿಂದ ಪ್ರತಿ ತಿಂಗಳು ಜಿಪಿಎಫ್ ರೂಪದಲ್ಲಿ 15 ಸಾವಿರ ರೂ. ಕಡಿತ ಮಾಡಲಾಗಿತ್ತು.

ಇನ್ನು ಉದ್ಯೋಗದ ಜತೆಗೆ ಪಿಎಫ್‌ ಖಾತೆ ಅಟೊಮ್ಯಾಟಿಕ್ ವರ್ಗಾವಣೆ

KAS officer K. Mathai files complaint against BBMP

ಆದರೆ, ಬಿಬಿಎಂಪಿ ಭವಿಷ್ಯ ನಿಧಿ ಖಾತೆಗೆ ಆ ಹಣವನ್ನು ಜಮಾ ಮಾಡಿಲ್ಲ. ಇದರ ಬಗ್ಗೆ ವಿಚಾರಿಸಿದರೆ ಪಾಲಿಕೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ, ದೂರು ನೀಡಲಾಗಿದೆ.

ಪಿಎಫ್ ಖಾತೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ

'ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಹಾಗೆಯೇ ನನ್ನ ವೇತನದಿಂದ ಕಡಿತ ಮಾಡಿರುವ 2.50 ಲಕ್ಷದ ಜೊತೆ ಶೇ 8ರಷ್ಟು ಬಡ್ಡಿ ಮೊತ್ತ 60 ಸಾವಿರವನ್ನು ತ್ವರಿತವಾಗಿ ಜಮೆ ಮಾಡಬೇಕು' ಎಂದು ಕೋರಿದ್ದಾರೆ.

ದೂರನ್ನು ಸ್ವೀಕಾರ ಮಾಡಿರುವ ಹಲಸೂರು ಗೇಟ್ ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ದಡಿ ಎಫ್‌ಐಆರ್ ದಾಖಲು ಮಾಡಿದ್ದು, ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior KAS officer K. Mathai filed a complaint against BBMP financial department officials for not transforming PF amount to his account.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ