ಅವರೇ: ಅಡುಗೆಗೆ ಬೇಕಿಲ್ಲ, ಕೋತಿನಾಷ್ಟಕ್ಕೆ ಇರದಿರೇ ಆಗಲ್ಲ

By: ಮನಸ್ವಿನಿ, ನಾರಾವಿ
Subscribe to Oneindia Kannada

ಭಾರತೀಯ ಆಹಾರ ಪದ್ಧತಿಯಲ್ಲಿ ಋತುವಿಗೆ ತಕ್ಕಂತೆ ತರಕಾರಿ ಬಳಕೆ ಜಾಣ್ಮೆ ಮನೆ ಹೆಂಗಸರಿಗೆ ಯಾರೂ ಹೇಳಿಕೊಡದ ಪಾಠವಾಗಿ ಬೆಳೆದು ಬಂದಿದೆ. ಚುಮು ಚುಮು ಚಳಿಗಾಲದಲ್ಲಿ ಅವರೇಕಾಯಿ ಖಾದ್ಯ ತಿಂದರೆ ಸಾಕು ಎಂದು ಎಲ್ಲರೂ ಬಾಯಿ ಚಪ್ಪರಿಸುವವರೇ. ಚಳಿಗಾಲದ ಧಾನ್ಯ ಅವರೇಕಾಳು ಎಲ್ಲರ ಮನೆಗಳಲ್ಲೂ ಖಾಯಂ ಅತಿಥಿಯಾಗಿ ಸಂಕ್ರಾಂತಿ ತನಕ ಅಡುಗೆ ಮನೆ, ಸ್ಟೋರ್ ರೂಮ್ ನಲ್ಲಿ ನೆಲೆಸುವುದು ಅನಾದಿ ಕಾಲದಿಂದ ಬೆಳೆದು ಬಂದಿದೆ.

ಅವರೇಕಾಯಿಗೆ ಇಂಗ್ಲೀಷಿನಲ್ಲಂತೂ ತರಾವರಿ ಹೆಸರುಗಳಿವೆ. ಭಾರತದಲ್ಲಿ ಜನಿಸಿ ಏಷ್ಯಾ ಖಂಡದ ಇತರ ಭಾಗಗಳು, ಆಫ್ರಿಕಾ, ಅಮೆರಿಕಕ್ಕೂ ತನ್ನ ಸೊಗಡನ್ನು ಹಬ್ಬಿಸಿದೆ. ಪೊದೆಯಂಥ ಚಿಕ್ಕಗಿಡ ಹಾಗೂ ಬಳ್ಳಿಯಂತೆ ಚಪ್ಪರದಲ್ಲಿ ಬೆಳೆಯ ವಿವಿಧ ತಳಿಗಳಿವೆ.

'ಈಗ ಮುಂಚೆ ಇದ್ದಂತೆ ಸವಡಿಲ್ಲ, ಹೈಬ್ರೀಡ್ ಬೆಳೆ, ಎಲ್ಲಾ ಕಮರ್ಷಿಯಲ್' ಎಂದು ಬಸವನಗುಡಿಯ ನಿವಾಸಿ ರಾಮಪ್ಪ ಆ ದಿನಗಳನ್ನು ನೆನೆಯುತ್ತಾರೆ. [ಗ್ಯಾಲರಿ: ಅವರೇಬೇಳೆ ಮೇಳದಲ್ಲಿ ಬಗೆ ಬಗೆ ಭಕ್ಷ್ಯ]

ಅವರೇ ಆರೋಗ್ಯಕರ : ಈ ಸಸ್ಯದ ಬೇರುಗಳು ಅತಿಸಾರ ಭೇದಿ, ಅಪ್ತಾಲ್ಮಿಯಾ ಮತ್ತು ಚರ್ಮ ರೋಗ ನಿವಾರಣೆಗೆ ಉಪಯೋಗಕಾರಿ. ಬೀಜಗಳ ಕಷಾಯವು ವಾಯುವಿಗೆ ಒಳ್ಳೆಯದು. ಅನೇಕ ಕಡೆ ಇದನ್ನು ಮಣ್ಣು ಸುರಕ್ಷಿತ ಬೆಳೆಯಾಗಿ ಮತ್ತು ಹಸಿರೆಲೆ ಗೊಬ್ಬರಕ್ಕಾಗಿಯೂ ಬೆಳೆಸುತ್ತಿದ್ದಾರೆ.

ಆದರೂ, ಅವರೇ ಅತಿಯಾದ ಬಳಕೆ ಅಪಾಯಕಾರಿ, ಸಂಜೆ ವೇಳೆ ಚಹಾ, ಕಾಫಿ ಜೊತೆ ಅವರೇಕಾಯಿ ತಿಂಡಿ ತಿನಿಸು ಮೆಲ್ಲಲು ಅಡ್ಡಿಯಿಲ್ಲ. ಅವರೇಕಾಯಿ ಹುಟ್ಟು, ಬೆಳವಣಿಗೆ, ಅದರಲ್ಲಿರುವ ಪೋಷಕಾಂಶ, ಬಗೆ ಬಗೆ ತಿಂಡಿ ತಿನಿಸಿನ ಬಗ್ಗೆ ವಿವರ ಮುಂದೆ ಓದಿ...

ಅವರೇಕಾಯಿಯ ಹುಟ್ಟು, ಬೆಳವಣಿಗೆ

ಅವರೇಕಾಯಿಯ ಹುಟ್ಟು, ಬೆಳವಣಿಗೆ

ಈ ಅವರೇಕಾಯಿಯ ಹುಟ್ಟು, ಬೆಳವಣಿಗೆ, ಉಪಯೋಗಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ ಭಾರತದಲ್ಲಿ ಜನಿಸಿ ಏಷ್ಯಾ ಖಂಡದ ಇತರ ಭಾಗಗಳು, ಆಫ್ರಿಕಾ, ಅಮೇರಿಕಾಗಳಲ್ಲೂ ಅವರೇ ಕಾಯಿ ಬಳಕೆಯಲ್ಲಿದೆ. ಇದು ಪೊದೆಯಂತೆ ಚಿಕ್ಕ ಗಿಡವಾಗಿ ಬೆಳೆಯುವ ವಿಧಕ್ಕೆ ದಾಲಿಖಾಸ್ ಲ್ಯಾಬ್ ಲ್ಯಾಬ್ ತಳಿ ರಿಗ್ನೋಸಸ್ ಎಂದೂ, ಬಳ್ಳಿಯಂತೆ ಚಪ್ಪರದವರೆಗೆ ಹಬ್ಬುವ ತಳಿಗೆ ದಾಲಿಖಾಸ್ ಲ್ಯಾಬ್ ಲ್ಯಾಬ್ ಟಿಪಿಕಸ್ ಎಂದೂ ಶಾಸ್ತ್ರೀಯ ಹೆಸರಿದೆ. ಭಾರತದಲ್ಲಿರುವ ಅವರೆ ವಿಧಗಳು ಅನೇಕ

100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ

100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ

100 ಗ್ರಾಂ ಅವರೇ ಕಾಳಿನಲ್ಲಿರುವ ಪೋಷಕಾಂಶ : ಪಿಷ್ಟ 60.1 ಗ್ರಾಂ, ಕಬ್ಬಿಣ 520 ಎಂ.ಸಿ.ಜಿ., ಸಸಾರಜನಕ 24.9 ಗ್ರಾಂ, ನಯಾಸಿಸ್ 1.8 ಮಿ. ಗ್ರಾಂ, ಕೊಬ್ಬು 0.8 ಗ್ರಾಂ ಪೊಟ್ಯಾಷಿಯಂ 402 ಮಿ. ಗ್ರಾಂ, ಸುಣ್ಣ 70 ಮಿ.ಗ್ರಾಂ, ಸೋಡಿಯಂ 89 ಮಿ. ಗ್ರಾಂ., ರಂಜಕ 455 ಮಿ. ಗ್ರಾಂ.

ಅವರೇಕಾಯಿ, ಕಾಳು, ಬೇಳೆ ಔಷಧೀಯ ಗುಣಗಳು

ಅವರೇಕಾಯಿ, ಕಾಳು, ಬೇಳೆ ಔಷಧೀಯ ಗುಣಗಳು

ಇದು ಉತ್ತಮ ಪ್ರಮಾಣದ ಅಮೈನೋ ಆಮ್ಲಗಳನ್ನು ಒಳಗೊಂಡಿದೆ. ಇದರಲ್ಲಿರುವ ಪಿಷ್ಟದ ಪ್ರಮಾಣ ಗಮನಿಸಿದರೆ ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸುವುದಕ್ಕಾಗಿ ಸೃಷ್ಟಿಯಾದಂತಿದೆ. ಈ ಕಾಯಿ ಸಮೃದ್ಧಿಯಾಗಿ ದೊರೆತರೆ ಚಳಿಗಾಲದಲ್ಲಿ ಬೇರೆ ಯಾವ ತರಕಾರಿಯೂ ಇಚ್ಛೆಯಾಗದು. ಇದರಲ್ಲಿರುವ ಪೋಷಕಾಂಶಗಳಿಂದ ರಕ್ತ ಪುಷ್ಟಿಯಾಗಿ ದೇಹದ ತೂಕ ಹೆಚ್ಚುತ್ತದೆ. ಇದರ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಕಾಳಿನಿಂದಾಗುವ ಮಲಬದ್ಧತೆ ಮತ್ತು ಅಜೀರ್ಣಗಳನ್ನು ನಿವಾರಣೆ ಮಾಡುತ್ತದೆ.

ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ

ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ

ಅವರೇಕಾಯಿ ಬಳಸಿ ಹಿಚುಕಿದ ಬೇಳೆ ಹುಳಿ ತಿನ್ನುವುದು ಚಳಿಗಾಲದಲ್ಲಿ ಮಾಮೂಲಿ. ಆದರೆ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಅಡುಗೆಯಲ್ಲ. ಕೆಲವರಿಗೆ ಅವರೇ ಕಾಯಿ ಸೊಗಡು ಸೋಕಿದರೆ ಚರ್ಮ ಕೆರಳುತ್ತದೆ. ಅಂತಹವರು ಇದನ್ನು ಬಿಡಿಸದಿರುವುದೇ ಲೇಸು. ಉಸುಳಿ, ಸಾರು, ಹುಳಿ, ಕೂಟು, ಇಡ್ಲಿ, ಉಪ್ಪಿಟ್ಟು, ರೊಟ್ಟಿ, ಚಕ್ಕುಲಿ, ಸೊಪ್ಪು ಕಾಳು ಸೇರಿಸಿ ಬಸಿದ ಸಾರು, ಮಸೊಪ್ಪಿನಲ್ಲಿ ಸೊಪ್ಪು ಅರೆದ ಮೇಲೆ ಬೇಯಿಸಿದ ಕಾಳು, ಹಿಸುಕಿದ ಅವರೇ ಕಾಳು, ಮಸಾಲೆ ಹಾಕಿದ ಬೇಳೆ ಇವೆಲ್ಲಾ ಅವರೆಯ ಸ್ಪೆಷಲ್ ಐಟಂಗಳು.

ಅವರೇಬೇಳೆ ಮೇಳಕ್ಕೆ ಹೋಗಿ ಬನ್ನಿ

ಅವರೇಬೇಳೆ ಮೇಳಕ್ಕೆ ಹೋಗಿ ಬನ್ನಿ

ಡಿಸೆಂಬರ್ ಕೊನೆಗೆ ಆರಂಭಗೊಳ್ಳಬೇಕಿದ್ದ ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಬಳಿಯ ಫುಡ್ ಸ್ಟ್ರೀಟ್ ಅವರೇಮೇಳ ಕೊಂಚ ತಡವಾಗಿ ಆರಂಭವಾಗಿದೆ. ಬೆಂಗಳೂರಿನ ಬನಶಂಕರಿ, ಗಾಂಧಿಬಜಾರ್, ವಿವಿಪುರಂ, ಮಲ್ಲೇಶ್ವರದಲ್ಲಿ "ಅವರೇಬೇಳೆ ಮೇಳ" ನಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಬಿಡುವಿದ್ದಾಗ ಹೋಗಿ ಬನ್ನಿ [ವಿವರ ಇಲ್ಲಿ ಓದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka winter Season Special: Hyacinth Beans (AvareKalu) is called by many names such as Val Bean, Wild Field Bean, Flat Bean and Indian bean. Indian bean is specially used to make variety of dishes and snacks but one shouldn't over consume it suggests health experts
Please Wait while comments are loading...