ಬ್ರೇಕಿಂಗ್ - ಒಕ್ಕಲಿಗರ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ಪದಚ್ಯುತಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 06: ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅಪ್ಪಾಜಿ ಗೌಡ ಅವರ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನದಿಂದ ಡಾ. ಅಪ್ಪಾಜಿ ಗೌಡ ಪದಚ್ಯುತಿಗೊಂಡಿದ್ದಾರೆ. ಒಕ್ಕಲಿಗರ ಸಂಘಕ್ಕೆ ಜನವರಿ 18ರಂದು ಮತ್ತೊಮ್ಮೆ ಚುನಾವಣೆ ನಡೆಯಲಿದೆ.

ನಿರ್ದೇಶಕರ ಸಭೆ ಅನೂರ್ಜಿತ, ಅಸಿಂಧು, ಅವಿಶ್ವಾಸ ನಿರ್ಣಯ ಮಂಡನೆ ವೀಕ್ಷಕರ ನೇಮಕವೂ ಅಸಿಂಧು ಈ ನಿರ್ಣಯದ ವಿರುದ್ಧ ಕೋರ್ಟಿಗೆ ಹೋಗುತ್ತೇನೆ ಎಂದು ಪದಚ್ಯುತ ಅಧ್ಯಕ್ಷ ಡಾ. ಅಪ್ಪಾಜಿ ಗೌಡ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

Dr Appaji Gowda

ಅವಿಶ್ವಾಸ ನಿರ್ಣಯಕ್ಕೆ ಗೆಲುವು : ಡಾ. ಅಪ್ಪಾಜಿ ಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮಂಡಿಸಲಾದ ಅವಿಶ್ವಾಸ ನಿರ್ಣಯಕ್ಕೆ 18 ಮಂದಿ ಸದಸ್ಯರು ಸಹಿ ಹಾಕಿದ್ದಾರೆ.

ಡಾ. ಅಪ್ಪಾಜಿ ಗೌಡ ಅವರ ಜತೆಗೆ ಉಪಾಧ್ಯಕ್ಷರಾದ ಎನ್ ಪ್ರಸನ್ನ, ಸಿಎನ್ ಶಶಿಕಿರಣ್, ಖಜಾಂಚಿಯಾದ ಡಿ.ಸಿ ಕಾಳೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಜನವರಿ 18ರಂದು ಮತ್ತೊಮ್ಮೆ ಚುನಾವಣೆ ನಡೆಯಲಿದ್ದು ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಗುವುದು ಎಂದು ಒಕ್ಕಲಿಗರ ಸಂಘ ಪ್ರಕಟಿಸಿದೆ.

ಜುಲೈ ತಿಂಗಳಿನಲ್ಲಿ ನಡೆದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಡಾ. ಅಪ್ಪಾಜಿ ಗೌಡ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದರು.ಒಕ್ಕಲಿಗರ ಸಂಘದ ನಿಬಂಧನೆ 7(3) (ಆ) ಪ್ರಕಾರ ಎರಡನೇ 30 ತಿಂಗಳ ಅವಧಿಗೆ ಅಪ್ಪಾಜಿ ಗೌಡ ಅವರ ಬಣ ಆಯ್ಕೆಯಾಗಿತ್ತು. [ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಡಾ.ಅಪ್ಪಾಜಿ ಗೌಡ ಆಯ್ಕೆ]

ಆಯ್ಕೆಗೆ ಮೊದಲಿನಿಂದಲೂ ವಿರೋಧ: ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ.ಅಪ್ಪಾಜಿ ಗೌಡ ಅವರು ಮರು ಆಯ್ಕೆ ಆಗಿರುವುದಕ್ಕೆ ಸಂಘದಲ್ಲಿಯೇ ಅಸಮಾಧಾನ ವ್ಯಕ್ತವಾಗಿತ್ತು.

Karntaka Vokkaliga Sangha: No Trust Motion against Dr Appaji Gowda

ಎಚ್.ಡಿ.ದೇವೇಗೌಡ, ಆರ್.ಅಶೋಕ್, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮುಂತಾದ ನಾಯಕರ ಸೂಚನೆಯನ್ನು ಧಿಕ್ಕರಿಸಿ ಅಪ್ಪಾಜಿ ಗೌಡ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಒಂದು ಬಣ ಆಕ್ರೋಶ ವ್ಯಕ್ತಪಡಿಸಿತ್ತು. ಈ ಆಕ್ರೋಶದ ಕಿಡಿ ಜನವರಿ 6ರಂದು ಕಿಮ್ಸ್ ಆವರಣದಲಿ ಭುಗಿಲೆದ್ದಿತು. ಒಕ್ಕಲಿಗರ ಸಂಘದ ಸಭೆಯಲ್ಲಿ ಅಪ್ಪಾಜಿ ಗೌಡ ಅವರನ್ನು ಕೆಳಗಿಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Vokkaliga Sangha's Board of directors today moved no confidence motion, topple President Dr.Appaji Gowda. Fresh elections on 18 Jan. Directors allege Appaji Gowda didnt bother to take senior leaders of Community in to confidence.
Please Wait while comments are loading...