ಅಂಬೇಡ್ಕರ್ ಅವರ ಹೆಸರಿನಲ್ಲಿ ವಿಶ್ವದರ್ಜೆಯ ಬಿಸಿನೆಸ್ ಸ್ಕೂಲ್ : ರಾಯರೆಡ್ಡಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 18: ಬೆಂಗಳೂರು ವಿಶ್ವವಿದ್ಯಾಲಯದ ಆವರಣದ 44 ಎಕರೆ ಪ್ರದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ನಿರ್ಮಿಸುತ್ತಿರುವ ವಿಶ್ವದರ್ಜೆ ಮಟ್ಟದ ಬಿಸಿನೆಸ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಪ್ರಸಕ್ತ ಏಪ್ರಿಲ್‍ನಲ್ಲಿ ಉದ್ಫಾಟನೆಗೊಳ್ಳಲಿದೆ ಎಂದು ತಿಳಿಸಿದರು.

ದೇಶದಲ್ಲಿ ಒಟ್ಟು ಒಂದು ಲಕ್ಷ ವಿದೇಶಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಅದರಲ್ಲಿ 36,000 ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ರಾಜ್ಯದ 412 ಪದವಿ ಕಾಲೇಜುಗಳಲ್ಲಿ 101 ಕಾಲೇಜುಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸ್ವಂತ ಕಟ್ಟಡವಿಲ್ಲ, ಕೆಲ ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು ಶಿಕ್ಷಣ ಮಟ್ಟವನ್ನು ಸಹ ಸುಧಾರಿಸುವ ಅಗತ್ಯವಿದೆ.

Higher Education Minister Basavaraj Rayareddy

ಅದಕ್ಕಾಗಿ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸಿದ್ದು, ಶೀಘ್ರದಲ್ಲಿ ಸಚಿವ ಸಂಪುಟದ ಅನುಮೋದನೆ ಪಡೆದು ವಿಶ್ವ ಬ್ಯಾಂಕ್ ಸಹಾಯ ಕೋರಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ತಿಳಿಸಿದರು.

3,000 ದಿಂದ 3,500 ಕೋಟಿ ರೂ ಗಳ ಅಗತ್ಯವಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿದೆ. ಪ್ರಸುತ್ತ ರಾಜ್ಯದಲ್ಲಿ 9,000 ಉಪನ್ಯಾಸಕರ ಹುದ್ದೆಗಳಿದ್ದು ಅದರಲ್ಲಿ 3,000 ಹುದ್ದೆಗಳು ಖಾಲಿ ಇದ್ದವು. ಇತ್ತೀಚೆಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 2,150 ಹುದ್ದೆಗಳನ್ನು ಭರ್ತಿಮಾಡಲಾಗಿದ್ದು, ಉಳಿದ ಹುದ್ದೆಗಳಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದಲ್ಲಿರುವ 412 ಪದವಿ ಕಾಲೇಜುಗಳಲ್ಲಿ 42 ಕಾಲೇಜುಗಳಲ್ಲಿ ಮಾತ್ರ ಖಾಯಂ ಪ್ರಾಂಶುಪಾಲರುಗಳಿದ್ದು, ಉಳಿದ ಕಾಲೇಜುಗಳಲ್ಲಿನ ಪ್ರಾಂಶುಪಾಲ ಹುದ್ದೆಗಳು ಖಾಲಿ ಇವೆ. ನಿಯಮಾವಗಳಿಗಳ ಪ್ರಕಾರ ಕ್ರಮಕೈಗೊಂಡು ಮುಂದಿನ ಶೈಕ್ಷಣಿಕ ವರ್ಷದೊಳಗೆ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಶೇ 94 ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದು, ಪ್ರೌಢ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳುವಷ್ಟರಲ್ಲಿ ಅದು ಶೇ 57 ಕ್ಕೆ ಇಳಿಯುತ್ತದೆ. ಪದವಿ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳುತ್ತಿರುವುದು ಕೇವಲ ಶೇ 27 ಮಾತ್ರ ಎಂಬ ಮಾಹಿತಿ ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka to get a world-class School of Economics soon and it will be named after Dr. BR Ambedkar said: Higher Education Minister Basavaraj Rayareddy
Please Wait while comments are loading...