ವಿಡಿಯೋ : ತಮಿಳುನಾಡಿಗೆ ನೀರು ಬಿಡಬೇಡಿ, ಜನರ ಕಿಡಿನುಡಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ಗಾಯದ ಮೇಲೆ ಉಪ್ಪು ಸುರಿದರು ಅನ್ನೋ ಹಾಗೆ ಆಗಿದೆ ಕರ್ನಾಟಕದ ಪರಿಸ್ಥಿತಿ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮೇಲ್ಮನವಿಯ ಹಿನ್ನೆಲೆಯಲ್ಲಿ ಬಂದ ಆದೇಶವೂ ರಾಜ್ಯಕ್ಕೆ ಪೂರಕವಾಗಿಲ್ಲ. -ಇದು ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುವ ಜನ ಸಾಮಾನ್ಯರ ಆಕ್ರೋಶವಾಗಿದೆ.

ಪರಿಸ್ಠಿತಿ ವಿವರಿಸೋದು ಹೇಗೆ?

ಪರಿಸ್ಠಿತಿ ವಿವರಿಸೋದು ಹೇಗೆ?

"ನಮಗೆ ಕುಡಿಯುವುದಕ್ಕೆ ನೀರಿಲ್ಲ. ನಮ್ಮ ಸಮಸ್ಯೆ ಹೇಳಿಕೊಂಡರೆ ಸುಪ್ರೀಂ ಕೋರ್ಟ್ ನಿಂದ ಪರಿಹಾರ ದೊರೆಯಬಹುದು ಅಂದುಕೊಂಡರೆ, ಆ ನಿರೀಕ್ಷೆಯೂ ಸುಳ್ಳಾಗಿದೆ. ಈ ಪರಿಸ್ಥಿತಿಯನ್ನು ಹೇಗೆ ವಿವರಿಸೋದು ಹೇಳಿ' -ಗಣೇಶ್

ಪ್ರತೀಕಾರದ ಕ್ರಮಕ್ಕೆ ಉತ್ತೇಜಿಸಬೇಡಿ

ಪ್ರತೀಕಾರದ ಕ್ರಮಕ್ಕೆ ಉತ್ತೇಜಿಸಬೇಡಿ

"ಸುಪ್ರೀಂ ಕೋರ್ಟ್ ನ ಆದೇಶ ಖೇದಕರ. ಕರ್ನಾಟಕದ ವಾಹನ, ಜನರ ಮೇಲೆ ಆಗುತ್ತಿರುವ ತಮಿಳುನಾಡಿನಲ್ಲಿ ಹಲ್ಲೆಗಳಾಗುತ್ತಿವೆ, ಇದು ತಕ್ಷಣವೇ ನಿಲ್ಲಬೇಕು. ಬೆಂಗಳೂರಿನಲ್ಲಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪ್ರತೀಕಾರದ ಕ್ರಮ ತೆಗೆದುಕೊಳ್ಳುವಂತೆ ಮಾಡಬಾರದು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು" -ರಾಮಚಂದ್ರ

ತಮಿಳುನಾಡಿನ ಪರ ತೀರ್ಪು ಯಾಕೆ?

ತಮಿಳುನಾಡಿನ ಪರ ತೀರ್ಪು ಯಾಕೆ?

ಸುಪ್ರೀಂ ಕೋರ್ಟ್ ನಲ್ಲಿ ಪ್ರತಿ ಸಲವೂ ತಮಿಳುನಾಡಿನ ಪರವೇ ಯಾಕೆ ತೀರ್ಪು ಬರುತ್ತೆ ಗೊತ್ತಾಗ್ತಿಲ್ಲ. ಒಟ್ಟಿನಲ್ಲಿ ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು -ಬಿ.ಮಂಜುನಾಥ್

ಪ್ರಧಾನಿ ಮಧ್ಯಪ್ರವೇಶಿಸಲಿ

ಪ್ರಧಾನಿ ಮಧ್ಯಪ್ರವೇಶಿಸಲಿ

ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪರವಾಗಿ ವಾದ ಮಂಡಿಸುವುದಕ್ಕೆ ಪದೇ ಪದೇ ವಿಫಲರಾಗ್ತಿದೀವಿ. ಪ್ರಧಾನಿಮಂತ್ರಿಗಳೇ ಮಧ್ಯಸ್ಥಿಕೆ ವಹಿಸಬೇಕು ಅಥವಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೂತು ಮಾತನಾಡಿ ಸಮಸ್ಯೆ ಬಗೆಹರಿಸಬೇಕು. -ಕೃಷ್ಣಮೂರ್ತಿ

ಈ ವಿಡಿಯೋ ನೋಡಿ : ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರು ಇಲ್ಲದಿದ್ದರೂ, ಸುಪ್ರೀಂ ಕೋರ್ಟ್ ಆಜ್ಞೆಗೆ ಕಟ್ಟುಬಿದ್ದು ರಾಜ್ಯ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಬಗ್ಗೆ ಬೆಂಗಳೂರಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಥದೇ ಪರಿಸ್ಥಿತಿ ಉದ್ಭವಿಸಿದರೂ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಬೆಂಗಳೂರಿನ ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ. ಅವರು ಏನು ಹೇಳುತ್ತಾರೆ ಈ ಕೆಳಗಿನ ವಿಡಿಯೋ ನೋಡಿರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government should not release water to Tamilnadu, Bangaloreans express their anger against supreme court direction to release water till september 20.
Please Wait while comments are loading...