ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 30 ಕೋಟಿ ರೂ. ನಿವ್ವಳ ಲಾಭ

Subscribe to Oneindia Kannada

ಬೆಂಗಳೂರು, ಜುಲೈ 28: 2016-17ರ ವರ್ಷದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‍ಎಫ್‍ಸಿ) ಯು 30 ಕೋಟಿ ರೂ. ನಿವ್ವಳ ಲಾಭಗಳಿಸಿದೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ಘಟಕಗಳಿಗೆ ಸಂಸ್ಥೆಯಿಂದ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. 2016-17ರಲ್ಲಿ ಸಂಸ್ಥೆಗೆ ಒಟ್ಟಾರೆ ರೂ. 733.43 ಕೋಟಿ ಮಂಜೂರಾಗಿದೆ. ಇದರಲ್ಲಿ ಶೇ. 55 ರಷ್ಟು ಅಂದರೆ ರೂ. 405.39 ಕೋಟಿ ಮೊತ್ತವನ್ನು ಮಹಿಳಾ ಉದ್ದಿಮೆದಾರರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಶೇ. 4 ರ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ನೀಡಲಾಗಿದೆ.

Karnataka State Financial Institution Got Rs 30 Crore Net profit in 2016-17

ಇನ್ನು ಮೊದಲ ಪೀಳಿಗೆ ಉದ್ದಿಮೆದಾರರಿಗೆ ಶೇ. 8ರ ಬಡ್ಡಿ ಸಹಾಯ ಧನ ಯೋಜನೆಯಡಿಯಲ್ಲಿ ಸಂಸ್ಥೆಯಿಂದ ಸಾಲ ಮಂಜೂರು ಮಾಡಲಾಗಿದೆ. ಇನ್ನುಳಿದ ಶೇ. 45 ರಷ್ಟು ಮೊತ್ತವನ್ನು ಸಾಮಾನ್ಯ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ.

ಹೀಗೆ ಸಂಸ್ಥೆ ಸಾಲ ನೀಡಿ 30 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಆದರೆ, ಹಣಕಾಸಿನ ವರ್ಷದ ಪ್ರಾರಂಭದಲ್ಲಿದ್ದ ರೂ. 245.12 ಕೋಟಿ ಮೊತ್ತದ ಅನುತ್ವಾದಕ ಆಸ್ತಿಗಳ ಮೌಲ್ಯದಲ್ಲಿಇಳಿಕೆ ಕಂಡು ಬಂದಿದ್ದು ಅದು 31-03-2017 ರವರೆಗೆ ರೂ. 217.80 ಕೋಟಿಗಳಿಗೆ ಇಳಿಕೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka State Finance Organization (KSFC) achieved Rs. 30 crore net profit in 2016-17.
Please Wait while comments are loading...