ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದವಿ ಕಾಲೇಜು ಸಮಯ ಬದಲಾವಣೆ: ತರಗತಿಯೆಲ್ಲ ಖಾಲಿ ಖಾಲಿ!

|
Google Oneindia Kannada News

ಬೆಂಗಳೂರು, ಜುಲೈ 11: ಪ್ರಥಮ ದರ್ಜೆ ಸರ್ಕಾರಿ ಪದವಿ ಕಾಲೇಜುಗಳ ತರಗತಿಗಳನ್ನು ಬೆಳಗ್ಗೆ 8 ಗಂಟೆಗೆ ಆರಂಭಿಸುವಂತೆ ಕರ್ನಾಟಕ ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿರುವ ಸಲುವಾಗಿ, ಜುಲೈ 10 ರಂದು ಆರಂಭವಾದ 2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ತರಗತಿಗಳು ಬೆಳಗ್ಗೆ 8 ಗಂಟೆಗೇ ಶುರುವಾದವು!

ಕಾಲೇಜುಗಳ ಸಮಯ ಬದಲಾವಣೆ, ಇಲಾಖೆ ತೀರ್ಮಾನಕ್ಕೆ ಭಾರೀ ವಿರೋಧಕಾಲೇಜುಗಳ ಸಮಯ ಬದಲಾವಣೆ, ಇಲಾಖೆ ತೀರ್ಮಾನಕ್ಕೆ ಭಾರೀ ವಿರೋಧ

ಆದರೆ ತರಗತಿಗಳಲ್ಲಿ ನಾಲ್ಕೈದು ವಿದ್ಯಾರ್ಥಿಗಳನ್ನು ಬಿಟ್ಟರೆ ಯಾರೂ ಇರಲಿಲ್ಲ! ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ಬೆಳಗ್ಗೆ 8 ಗಂಟೆಗೇ ತರಗತಿಗಳು ಆರಂಭವಾದರೆ ಹಾಜರಾಗುವುದು ಕಷ್ಟ. ಆದ್ದರಿಂದ ಈ ಸಮಯವನ್ನು ಬದಲಾಯಿಸಿ, ಮೊದಲಿನಂತೆ 10 ಗಂಟೆಗೆ ಅಥವಾ 10:30 ಕ್ಕೆ ತರಗತಿ ಆರಂಭಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

Karnataka's government degree colleges starts its day from 8 am!

ಈ ಕುರಿತು ಕಾಲೇಜು ಉಪನ್ಯಾಸಕರೂ ಸಭೆ ಸೇರಿ, 8 ಗಂಟೆಗೆ ಕಾಲೇಜು ಆರಂಭಿಸುವುದರಿಂದ ವಿದ್ಯಾರ್ಥಿಗಳಿಗೇ ತೊಂದರೆಯಾಗಲಿದ್ದು, ಅವರಿಗೆ ಅನುಕೂಲವಾಗುವಂತೆ ಕಾಲೇಜಿನ ಸಮಯ ನಿಗದಿಪಡಿಸಬೇಕೆಂದು ಉನ್ನತ ಶಿಕ್ಷಣ ಸಚಿವರ ಬಳಿ ತೆರಳಿ ಮನವಿ ಸಲ್ಲಿಸಿದ್ದಾರೆ.

ಕೆಲವು ಕಾಲೇಜು ಕಟ್ಟಡಗಳಲ್ಲಿ ಪದವಿ ಪೂರ್ವ ಮತ್ತು ಪದವಿ, ಇನ್ನೂ ಕೆಲವೆಡೆ ಇದೇ ಕಟ್ಟಡದಲ್ಲಿ ಹೈಸ್ಕೂಲೂ ನಡೆಯುವುದರಿಂದ ಕ್ಲಾಸ್ ರೂಮುಗಳ ಕೊರತೆ ಇರುತ್ತದೆ. ಅದಕ್ಕೆಂದೇ ಪದವಿ ವಿದ್ಯಾರ್ಥಿಗಳಿಗೆ ಬೇಗನೇ ತರಗತಿ ಆರಂಭಿಸುವುದರಿಂದ ಬೇರೆ ವಿದ್ಯಾರ್ಥಿಗಳು ಸ್ವಲ್ಪ ತಡವಾಗಿ ಬರಬಹುದು. ಆಗ ಕ್ಲಾಸ್ ರೂಮಿನ ಸಮಸ್ಯೆಯೂ ನಿವಾರಣೆಯಾಗುತ್ತದೆ ಎಂಬುದು ಸರ್ಕಾರದ ಉದ್ದೇಶ.

ವಿದ್ಯಾರ್ಥಿಗಳಿಗೆ ಬೆಳಗ್ಗೆ 8 ಗಂಟೆಗೇ ಕಾಲೇಜು ಆರಂಭಿಸಿ, ಮಧ್ಯಾಹ್ನದ ಹೊತ್ತಿಗೆ ತರಗತಿ ಮುಗಿಸುವುದರಿಂದ, ಬೇರೆ ಕೆಲಸ ಮಾಡಿ ದುಡಿವ ಅಗತ್ಯವಿರುವ ಬಡ ಮಕ್ಕಳಿಗೆ ಸಹಾಯಕವಾಗಲಿದೆ. ಮತ್ತು ವಿದ್ಯಾರ್ಥಿಗಳು ಬೇರೆ ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಕೊಳ್ಳುವುದಕ್ಕೂ ನೆರವಾಗಲಿದೆ ಎಂದು ಸರ್ಕಾರ ಸಮಜಾಯಿಷಿ ಕೊಟ್ಟುಕೊಂಡಿದೆ.

English summary
State department of collegiate education has decided to start degree classes in first grade government colleges in Karnataka, from morning 8 o clock, instead of existing 10 am. Students are opposing the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X