ಮಯ್ಯಾಸ್ 'ಊಟದ ಹಬ್ಬ'ಕ್ಕೆ ನೀವಿನ್ನೂ ಹೋಗಿಲ್ವಾ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 5: ಮಯ್ಯಾಸ್ ಹಬ್ಬ ನಡೆಯುತ್ತಿದೆ, ನಿಮಗೆ ಈ ಸುದ್ದಿ ಗೊತ್ತಾಯ್ತಾ? ನವೆಂಬರ್ 1ರಿಂದಲೇ ಶುರುವಾಗಿದೆ. 6ನೇ ತಾರೀಕಿನವರೆಗೆ ನಡೆಯುತ್ತದೆ. ಇನ್ನು ಬಾಕಿ ಇರೋದು ಎರಡು ದಿನ ಮಾತ್ರ (ಶನಿವಾರ, ಭಾನುವಾರ). ಏನಿದು ಮಯ್ಯಾಸ್ ಹಬ್ಬ ಅಂತೀರಾ? ಮಯ್ಯಾಸ್ ಹೋಟೆಲ್ ನಲ್ಲಿ ಕರ್ನಾಟಕದ ಖಾದ್ಯಗಳ ಹಬ್ಬ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಜೋಳದ ರೊಟ್ಟಿ, ಬೆಣ್ಣೆ, ಎಣ್ಣೆಗಾಯಿ, ಪಲ್ಯ, ಪುಟಾಣಿ ಚಟ್ನಿಪುಡಿ, ಮುದ್ದೆ, ಸೊಪ್ಪಿನ ಸಾರು, ಖಾರ ಕಡುಬು, ಬನ್ಸ್-ಚಟ್ನಿ, ಬೇಸನ್ ಲಾಡು ಅನ್ನ-ಸಾರು, ಸಾಂಬಾರು, ಸಂಡಿಗೆ-ಹಪ್ಪಳ, ಉಪ್ಪಿನಕಾಯಿ, ಸೊಗಸಾದ ಮಜ್ಜಿಗೆ, ಮೊಸರು, ಐಸ್ ಕ್ರೀಮ್, ಬೀಡಾ, ಬಾಳೆಹಣ್ಣು..ಅಬ್ಬಾ ಇವೆಲ್ಲವನ್ನೂ ಉಣಬಡಿಸಲಾಗುತ್ತದೆ. [ಜೆ.ಪಿ. ನಗರದ 'ನಮ್ಮ ಅಡ್ಡ'ದಲ್ಲಿ ಸಾವಯವ ತಿಂಡಿ ಸಿಗತ್ತೆ ಕಣ್ರೀ]

Food

ಅಂದಹಾಗೆ ಇವೆಲ್ಲ ಅನ್ ಲಿಮಿಟೆಡ್ ಕಣ್ರೀ. ನಾವು ಹೋಗಿದ್ದು ಶುಕ್ರವಾರ, ಇವೆಲ್ಲವೂ ಇದ್ದವು. ಶನಿವಾರ-ಭಾನುವಾರ ಇನ್ನೊಂದಿಷ್ಟು ಸೇರಬಹುದು. ಇಬ್ಬರು ಊಟಕ್ಕೆ ಹೋಗಿದ್ವಿ. ಬಿಲ್ ಆಗಿದ್ದು 458 ರುಪಾಯಿ ಮಾತ್ರ. ಮಯ್ಯಾಸ್ ಹೋಟೆಲ್ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿ ಒಂದು ಕಡೆ ಇದೆ, ಇದೇ ಆಫರ್ ಮಲ್ಲೇಶ್ವರಂನ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ನಲ್ಲೂ ಇದೆ. [ಫುಡ್ ವೇಸ್ಟೇಜ್ ಸೆನ್ಸ್, ಮತ್ತ ದೊಡ್ಡಸ್ತಿಕಿ ನಾನ್ ಸೆನ್ಸ್!]

ಜಯನಗರದಲ್ಲಿರುವ ಹೋಟೆಲ್ ನ ದೂರವಾಣಿ ಸಂಖ್ಯೆ 080-43311111 ಹಾಗೂ ಶ್ರೀನಿಧಿ ಕಾಂಪ್ಲೆಕ್ಸ್ ನಲ್ಲಿರುವ ಹೋಟೆಲ್ ನ ಸಂಪರ್ಕ ಸಂಖ್ಯೆ 080-40907332 ಯಾವುದಕ್ಕೂ ಒಮ್ಮೆ ಫೋನ್ ಮಾಡಿ ಹೋಗೋದೇ ಉತ್ತಮ. ಜನ ಜಾಸ್ತಿ ಅಂತ ಕಾಯುವ ಹಾಗೆ ಆಗಬಹುದು. ಅಥವಾ ನಿಮಗೇ ಇನ್ನೊಂದಿಷ್ಟು ಮಾಹಿತಿ ಬೇಕು ಅನ್ನಿಸಿದರೆ, ಅದ್ದರಿಂದ ಯಾವುದಕ್ಕೂ ಒಮ್ಮೆ ಫೋನ್ ಮಾಡಿಕೊಂಡು ಬಿಡಿ.[ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...]

ನಿಮಗೆ ಊಟದ ಸಮಯವೇ ಹೇಳಲ್ಲಿಲ್ಲವಲ್ಲಾ, ಮಧ್ಯಾಹ್ನ 12.30ರಿಂದ 3ರವರೆಗೆ ಹಾಗೂ ರಾತ್ರಿ 7ರಿಂದ 10ರವರೆಗೆ ಮಾತ್ರ. ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಿ. ಇದು ವಿಶೇಷವಾಗಿ ಮಯ್ಯಾಸ್ ಅವರು ಆಯೋಜಿಸಿರುವ 'ಊಟದ ಹಬ್ಬ' ಪದೇಪದೇ ಹೀಗೆ ಮಾಡೋದಿಲ್ಲ ಅವರು. ನಾವು ಹೋಗಿದ್ದಾಗ ಮಯ್ಯಾಸ್ ಅವರ ಎರಡು ನಿಮಿಷದಲ್ಲಿ ರಸಂ ತಯಾರು ಮಾಡುವ ಒಂದು ಪುಟ್ಟ ಪ್ಯಾಕ್ ಕೂಡ ಪುಕ್ಕಟೆ ಕೊಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka's cuisine festival celebrating in Maiyas restaurants, Bengaluru. This festival celebrating between November 1st to 6th.
Please Wait while comments are loading...