ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರ ಬದ್ಧ: ಜಯಚಂದ್ರ

Written By:
Subscribe to Oneindia Kannada

ಬೆಂಗಳೂರು, ಜೂನ್. 04: ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ರೀತಿಯ ಸಹಕಾರಕ್ಕೂ ನಾನು ಸಿದ್ದನಿದ್ದೇನೆ' ಎಂದು ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ರಾಜ್ಯ ಉಪಕುಲಪತಿಗಳ ವೇದಿಕೆ ಹಾಗೂ ಗಾರ್ಡನ್ ಸಿಟಿ ಸಮೂಹ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಗಾಂಧಿಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಸಕ್ತ ವಿದ್ಯಾರ್ಥಿ ಹಾಗೂ ಪೋಷಕರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಪಾತ್ರ ರಾಷ್ಟ್ರ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.[ಗಾರ್ಡನ್ ಸಿಟಿ ಪದವಿ ಪೂರ್ವ ಕಾಲೇಜು ಲೋಕಾರ್ಪಣೆ]

bengaluru

ವಿಶ್ವವಿದ್ಯಾಲಯಗಳ ಅಂಕಿಅಂಶಗಳ ವರದಿಯ ಪ್ರಕಾರ ಭಾರತದಲ್ಲಿ ಒಟ್ಟು 272 ವಿವಿಗಳ ಪೈಕಿ 245 ಖಾಸಗಿ ವಿವಿ ಹಾಗೂ 137 ಮುಖ್ಯ ವಿವಿಗಳು ಹೊಂದಿವೆ. ಈ ಎಲ್ಲಾ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ತಿಳಿಸಿದರು.

ಶೇ.40 ರಷ್ಟು ವಿವಿಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅವುಗಳಲಗಲಿ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥಹ ಸಮ್ಮೇಳನಗಳು ನಡೆಯುವುದರಿಂದ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗುತ್ತವೆ ಎಂದು ಹೇಳಿದರು.

bengaluru

ರಾಜ್ಯ ಉಪಕುಲಪತಿಗಳ ವೇದಿಕೆಯ ಅಧ್ಯಕ್ಷ ಪದ್ಮಭೂಷಣ ಡಾ.ಎಂ. ಮಹದೇವಪ್ಪ ಮಾತನಾಡಿ, ಎಲ್ಲಾ ವಿವಿಗಳಲ್ಲೂ ಸಿಬ್ಬಂದಿ ಹಾಗೂ ಬೋಧಕರೆ ಕೊರತೆ ಇದೆ ಆದರೆ ರಾಜ್ಯದಲ್ಲಿ ಶಿಕ್ಷಣದ ವ್ಯವಸ್ಥೆ ಸುಧಾರಿಸಿದ್ದರೂ, ಇಲ್ಲಿ ಹೆಚ್ಚು ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರಿಂದ ಹಲವು ವಿಷಯಗಳನ್ನು ಚರ್ಚಿಸಲು ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಎಂ.ಐ ಸವದತ್ತಿ ಮಾತನಾಡಿ, ಕೆಲವು ವಿಶ್ವವಿದ್ಯಾಲಯಗಳನ್ನು ನಮ್ಮ ಬೆನ್ನೆಲುಬು ಎಂದು ಪರಿಗಣಿಸಲಾಗುತ್ತದೆ. ಆದರೆ, ನಿರ್ವಾಹಣೆಗೆ ಸೂಕ್ತ ಮಾರ್ಗದರ್ಶನ ಹಾಗೂ ಹಣದ ಕೊರತೆಯೊಂದಾಗಿ ಶಕ್ತವಾಗುತ್ತಿಲ್ಲ ಎಂದರು.[ಮೇ 25ರಂದು ಪಿಯು ಫಲಿತಾಂಶ ಒಮ್ಮೆ ನೋಡಿಕೊಂಡು ಬನ್ನಿ]

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಸಮಾವೇಶದಲ್ಲಿ ವಿವಿಧ ವಿಷಯಗಳ ಕುರಿತು ಗಣ್ಯರು ಮಾತನಾಡಿದರು. ಮಂಗಳೂರು ವಿವಿ ನಿವೃತ್ತ ಉಪಕುಲಪತಿ ಡಾ. ಎಂ.ಐ.ಸವದತ್ತಿ "ಉನ್ನತ ಶಿಕ್ಷಣ ಅಭಿವೃದ್ಧಿಯಲ್ಲಿ ವಿವಿಗಳ ಪಾತ್ರ" ವಿಷಯದ ಕುರಿತು ಮಾತನಾಡಿದರು.

ಐಎಎಸ್ ಅಧಿಕಾರಿ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ "ವಿದ್ಯಾರ್ಥಿಗಳು ಹಾಗೂ ಪೋಷಕರು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವ ಅನುಭವ"ದ ಕುರಿತು ಚರ್ಚಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಇ.ಎಸ್.ದ್ವಾರಕಾದಾಸ್, ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಧ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಬೆಂಗಳೂರು ಸಮುದ್ರ ಫೌಂಡೇಷನ್ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ ಸಹ ಇದೇ ವಿಷಯವಾಗಿ ಮಾತನಾಡಿದರು.

ಯಶವಂತರಾವ್ ಚೌವಾಣ್, ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯ ನಿವೃತ್ತ ಉಪಕುಲಪತಿ ಡಾ.ಸುಧೀರ್ ಗವ್ವಾನೆ, "ಕೈಗಾರಿಕಾ ಸಂಭಾವ್ಯ ಮಾಲೀಕರ ಉದ್ಯೋಗಾರ್ಹತೆಯ ನಿರೀಕ್ಷೆ"ಗಳ ಕುರಿತು ಮಾತನಾಡಿದರು.

"ನಂಬಿಕೆಯ ಗುಣಮಟ್ಟವನ್ನು ಕಾಪಾಡು"ವ ಬಗ್ಗೆ ಉದ್ದೇಶಿಸಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಡಾ.ಎಂ.ಕೆ.ಸೂರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗಾರ್ಡನ್ ಸಿಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿ.ಜಿ.ಜೋಸೆಫ್, ಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಸ್.ಎನ್.ಹಿಂಚಿಗೇರಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿದ್ದರಾಮಯ್ಯ ಪೂಜಾರ್, ಕಾಲೇಜಿನ ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಮಂಜುನಾಥ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Karnataka State Government ready to give good education for all students said by T.B Jayachandra Minister for Higher education at Garden City College Bengaluru on June 4, 2016.
Please Wait while comments are loading...