ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಮಕ್ಕಳಿಗಾಗಿ ಸಿಬಿಎಸ್ ಸಿ ಪಠ್ಯಕ್ರಮದ ಶಾಲೆ : ಸಿದ್ದರಾಮಯ್ಯ

ಪೊಲೀಸರು ದಿನದ 24 ಗಂಟೆ ದುಡಿಯುವವರು. ಅವರಿಗೆ ಖಾಸಗಿ ಜೀವನ ಕಡಿಮೆ. ಮನೆಯ ಕಡೆ ಗಮನ ಕೊಡುವುದು ಕಷ್ಟ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 21 : ಪೊಲೀಸರು ದಿನದ 24 ಗಂಟೆ ದುಡಿಯುವವರು. ಅವರಿಗೆ ಖಾಸಗಿ ಜೀವನ ಕಡಿಮೆ. ಮನೆಯ ಕಡೆ ಗಮನ ಕೊಡುವುದು ಕಷ್ಟ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸಿಬಿಎಸ್ ಸಿ ಪಠ್ಯಕ್ರಮದ ಶಾಲೆಗಳನ್ನು ಪೊಲೀಸರ ಮಕ್ಕಳಿಗಾಗಿ ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಪೊಲೀಸ್ ಹುತಾತ್ಮ ದಿನವಾದ ಇಂದು ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.[ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸಲಾಗದು : ಸಿದ್ದರಾಮಯ್ಯ]

ಪೊಲೀಸರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಯನಿಮಿತ್ತ ಬೆಂಗಳೂರಿಗೆ ಬರುವ ಸಿಬ್ಬಂದಿಗೆ 15 ಕೋಟಿ ರೂ.ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗುತ್ತಿದೆ. ಪ್ರತಿ ಯೂನಿಟ್ ನಲ್ಲಿ ಕ್ಯಾಂಟೀನ್ ತೆರೆಯಲಾಗುತ್ತಿದೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.

Karnataka Police Children to get CBSE Syllabus School : CM Siddaramaiah

ಇತ್ತೀಚೆಗೆ ಪೊಲೀಸರು ಆತ್ಮಹತ್ಯೆ ಗೆ ಶರಣಾಗುತ್ತಿದ್ದಾರೆ. ಅದು ಹೇಡಿತನ ಎಂದು ನ್ಯಾಯಾಲಯವೇ ಹೇಳಿದೆ. ಆತ್ಮಹತ್ಯೆಗೆ ಮುನ್ನ ಕುಟುಂಬದ ಬಗ್ಗೆ ಯೋಚನೆ ಮಾಡಬೇಕು. ಮಾಡಿದರೆ ಆತ್ಮಹತ್ಯೆಯ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಮುಖ್ಯಮಂತ್ರಿಗಳು ಸಲಹೆ ಮಾಡಿದರು.

ಪೊಲೀಸರು ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಪೊಲೀಸರು, ರೈತರು ಯಾರೇ ಅಗಲಿ, ಆತ್ಮಹತ್ಯೆಗೆ ಶರಣಾಗಬಾರದು ಎಂದು ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.

English summary
Karnataka Police staff's Children will get CBSE Syllabus School said CM Siddaramaiah during the Police Commemoration Day observed today(October 21)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X