• search

ಹೃದಯಾಘಾತದಿಂದ ವಿಧಾನಪರಿಷತ್ ಸದಸ್ಯ ಅಪ್ಸರ್ ಅಗಾ ನಿಧನ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ತಮ್ಮ ಎಐಸಿಸಿ ಸ್ಥಾನಕ್ಕೆ ರಾಜೀನಾಮೆ ಕೊಡೋ ಸಾಧ್ಯತೆ | Oneindia Kannada

    ಬೆಂಗಳೂರು, ಜೂನ್ 09: ವಿಧಾನಪರಿಷತ್ ಸದ್ಯ ಸಯ್ಯದ್ ಮುದೀರ್ ಅಗಾ(ಅಪ್ಸರ್ ಅಗಾ)(67) ಹೃದಯಾಘಾತದಿಂದ ಜೂನ್ 08 ರ ಮಧ್ಯರಾತ್ರಿ ನಿಧನರಾಗಿದ್ದಾರೆ.

    ನಿನ್ನೆ ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾದರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

    Karnataka MLC Syed Mudeer Aga dies of heart attack

    ರಾಮನಗರದ ದೊಡ್ಡ ಮಸೀದಿ ನಿವಾಸಿಯಾಗಿದ್ದ ಇವರು, ಜೆಡಿಎಸ್ ನಿಂದ ವಿಧಾನಪರಿಷತ್ತಿಗೆ 2012 ಜೂನ್ 18 ರಂದು ಆಯ್ಕೆಯಾಗಿದ್ದರು. ಜೆಡಿಎಸ್​ನ ಟಿ.ಎ. ಶರವಣ ಅವರೊಂದಿಗೆ ಎಂಎಲ್​ಸಿಯಾಗಿ ಆಯ್ಕೆಯಾಗಿದ್ದ ಅವರ ಅಧಿಕಾರಾವಧಿ ಇದೇ ಜೂನ್ 17 ರಂದು ಮುಕ್ತಾಯವಾಗುತ್ತಿತ್ತು.

    ಅವರ ನಿಧನಕ್ಕೆ ನಾಡಿನ ಗಣ್ಯ ವರ್ಗ ಕಂಬನಿ ಮಿಡಿದಿದೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಮನಗರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Syed Mudeer Aga(67), Member of Karnataka Legislative council from JDS died due to heart attack on June 8th midnight.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more