ಸಚಿವ ಟಿಬಿ ಜಯಚಂದ್ರ ವಿರುದ್ಧ ಕೆರೆ ಅತಿಕ್ರಮಣ ದೂರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01 : ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿದೆ.

ಕೆರೆ ಒತ್ತುವರಿ ಮಾಡಿದ್ರೆ ಆರು ತಿಂಗಳು ಜೈಲು ಶಿಕ್ಷೆ

ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಟ್ರಸ್ಟ್ ಮೂಲಕ ಸರಕಾರಿ ಕೆರೆ ಅತಿಕ್ರಮಣ ಮಾಡಿದ್ದಾರೆಂದು ಸಚಿವ ಜಯಚಂದ್ರ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿಗೌಡ ಎನ್ನುವರು ದೂರು ದಾಖಲಿಸಿದ್ದಾರೆ.

Karnataka Law minister TB Jayachandra faces land grabbing allegations

ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಉಲ್ಲಾಳದಲ್ಲಿ 24 ಎಕರೆ 12 ಗುಂಟೆಯಷ್ಟು ವಿಸ್ತೀರ್ಣವಿರುವ ಸರಕಾರಿ ಕೆರೆಯಲ್ಲಿ 15ಗುಂಟೆಯಷ್ಟು ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

Karnataka Found 300 Tuberculosis New Cases | Oneindia Kannada

ಹಾಸ್ಟೆಲ್ ನಿರ್ಮಿಸಲೆಂದು 15 ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Social activist Ramamurthy Gouda filed complaint against Karnataka Law minister TB Jayachandra. Jayachandra facing government lake land grabbing allegation at Ullal in Yeshwanthpur Hobli in Bangaluru North taluk.
Please Wait while comments are loading...