ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21, ಕರ್ನಾಟಕ ಲಲಿತಕಲಾ ಅಕಾಡೆಮಿಯು ಮೊದಲ ಬಾರಿಗೆ ಪ್ರಥಮ ರಾಷ್ಟ್ರೀಯ 'ಕಲಾಸಂಕ್ರಾಂತಿ ಪುರಸ್ಕಾರ' ಕಲಾ ಪ್ರದರ್ಶನದಲ್ಲಿ 14 ಕಲಾವಿದರ ಕಲಾಕೃತಿಗಳನ್ನು ಬಹುಮಾನಕ್ಕಾಗಿ ಹಾಗೂ ಒಂದು ಕಲಾ ಸಾಹಿತ್ಯ ಬಹುಮಾನಕ್ಕಾಗಿ ಜ್ಯೂರಿ ಕಮಿಟಿಯು ಆಯ್ಕೆ ಮಾಡಿದೆ.

ಪ್ರಶಸ್ತಿ ವಿಜೇತ 15 ಕಲಾವಿದರಿಗೆ ತಲಾ 1,00,000 ನಗದು, ಪ್ರಶಸ್ತಿ ಪತ್ರ, ಸುವರ್ಣ ಶಿಲ್ಪ ನೀಡಿ ಗೌರವಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 23ರಂದು ಸಂಜೆ 6ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Karnataka Lalitha Kala Academy awardees list

ಪ್ರಶಸ್ತಿ ವಿಜೇತರ ವಿವರ ಹೀಗಿದೆ. ಭೋಲನಾಥ್ ರುದ್ರ, ಕೋಲ್ಕತ್ತ ಟ್ರಾನ್ಸಿಟ್- ವಾಟರ್ ಕಲರ್ ಆನ್ ಪೇಪರ್, ಆಶಿಷ್ ಕುಶ್ ವಾಹ, ನ್ಯೂ ದೆಹಲಿ ರೆಮಿನಿಸ್ಕೀನ್ಸ್- ವಾಟರ್ ಕಲರ್ ಆನ್ ಪೇಪರ್, ವಿತೇಶ್ ನಾರಾಯಣ ನಾಯ್ಕ್, ಗೋವಾ- ಇಲ್ಯೂಸೀವ್ ವರ್ಡ್ (ಮಿಶ್ರಮಾಧ್ಯಮ), ಶಹಾನ್ ಶಾ ಮಿಠ್ಠಲ್, ನ್ಯೂ ದೆಹಲಿ- ಅನ್ ಟೈಟಲ್ಡ್-1 (ಮಿಶ್ರಮಾಧ್ಯಮ)

ಸುಜಯ್ ಮಲಾಕರ್, ಮುರ್ ಶಾದಾಬಾದ್, ಟೈಂ ಆಫ್ ಲವ್ (ಮಿಶ್ರಮಾಧ್ಯಮ), ವಿಪಿನ್ ಸಿಂಗ್ ರಜಪೂತ್, ಛತ್ತೀಸಗಡ್- ಅನ್ ಟೈಟಲ್ಡ್-2 (ಮಿಶ್ರಮಾಧ್ಯಮ), ವಿ.ಅಂಜಲಿ, ಕರ್ನಾಟಕ- ಟ್ರೈನ್ ಜರ್ನಿ-1- ಪೋಸ್ಟಲ್ ಕಲರ್ ಆನ್ ಪೇಪರ್, ಸಂಕೇತ್ ಕುಮಾರ್ ಜಯಂತಿ ಲಾಲ್ ವಿರಾಂಗಮಿ, ಗುಜರಾತ್- ಅನ್ ಟೈಟಲ್ ಅಕ್ರಾಲಿಕ್ ಆನ್ ಕ್ಯಾನ್ವಸ್

ಜೆ.ಡಿ.ರಾವ್ ತಮ್ಮಿನೇನಿ, ನ್ಯೂ ದೆಹಲಿ, ಸ್ಕ್ರೀಮ್ ಫಾರ್ ಮೀ- ವುಡ್ ಕಟ್, ಸುಚೇತ ಮಾಧವ ರಾವ್ ಗಾಡ್ಗೇ, ಮಹಾರಾಷ್ಟ್ರ, ರಿವರ್ ವಿತ್ ಥೌಸಂಡ್- ವುಡ್ ಕಟ್, ಜಗ ಜೀತ್ ಕುಮಾರ್ ರೈ, ಉತ್ತರ ಪ್ರದೇಶ, ಟುಡೇ- ವುಡ್ ಕಟ್, ವಿಜಯಾ, ಛತ್ತೀಸಗಡ್- ಸ್ಮಾರ್ಟ್ ಅಕೋಸಿಯೇಷನ್ಸ್ ಟೆರಕೋಟಾ, ಸ್ಟೀಲ್, ಜ್ಯೂಟ್ ಮತ್ತು ವುಡ್

ಕಾಂಚನ್ ಕರ್ಜಿ, ವೆಸ್ಟ್ ಬೆಂಗಾಲ್- ವ್ರಾಪಿಂಗ್ ಲೈವ್ ಹುಡ್, ವುಡ್ ಮತ್ತು ವಾಟರ್ ಕಲರ್, ಅಕಿಲ್ ಚಂದ್ರ ದಾಸ್, ವೆಸ್ಟ್ ಬೆಂಗಾಲ್, ಮೈಗ್ರೇಷನ್, ವುಡ್ ಮತ್ತು ಬ್ರಾಂಝ್.

ಕಲಾ ಸಾಹಿತ್ಯದ ಬಹುಮಾನಕ್ಕೆ ಆಯ್ಕೆಗೊಂಡ ಕಲಾವಿದರ ವಿವರ:
ಡಾ.ಶಿವಾನಂದ ಎಚ್.ಬಂಟನೂರ, ಬಳ್ಳಾರಿ- ಸಮಕಾಲೀನ ಕನ್ನಡ ದೃಶ್ಯಕಲಾ ಸಾಹಿತ್ಯ

ಮೆರಿಟ್ ಸರ್ಟಿಫಿಕೇಟ್ ಕಲಾಕೃತಿಗಳ ಬಹುಮಾನಕ್ಕಾಗಿ ಆಯ್ಕೆಗೊಂಡ ಕಲಾವಿದರ ವಿವರ:
ಸೋನಾಲ್ ವರ್ಷಮೇಯ, ಉತ್ತರ ಪ್ರದೇಶ, ಅಂಬುಬಚ್ಚಿ, ಎಚ್ಚಿಂಗ್, ಪಮು ರಾಜೇಶ್ ಕುಮಾರ್, ತೆಲಂಗಾಣ, ಬೆಡ್ ಆಪ್ ಥ್ರಾನ್ಸ್, ಎಚ್ಚಿಂಗ್, ಧನಂಜಯ್ ಸಿಂಗ್ ಚೌಧುರಿ, ಕೈರಾಗರ್, ದಿ ಥ್ರೀ ಪಿಲ್ಲರ್ಸ್ ಆಫ್ ಜಸ್ಟಿಸ್, ಎಚ್ಚಿಂಗ್, ಪಲಾಶ್ ಚಂದ್ರ ಬೈದ್ಯ, ವೆಸ್ಟ್ ಬೆಂಗಾಲ್, ಅಧರ್ ವ್ಯೂವ್ ಪೆನ್ ಮತ್ತು ಇಂಕ್

ಶೇಖರ್ ಮಾರುತಿ ದಹಿವಾಲ್, ಪುಣೆ, ಜರ್ಮಿನೇಟ್ 03, ಬಸಾಲ್ಟ್ ಸ್ಟೋನ್, ರಮ್ಯಾ ಇ.ಎಂ, ಬೆಂಗಳೂರು, ಫಾರೆಸ್ಟ್ ಚೈಲ್ಡ್, ಸೆರಾಮಿಕ್ ಸ್ಟೋನ್ ವೇರ್, ಜಗನ್ ಮೋಹನ್ ಪೆನುಗಂಟಿ, ಆಂಧ್ರಪ್ರದೇಶ, ಅನ್ ಟೈಟಲ್ ಸ್ಯಾಂಡ್, ಸ್ಟೋನ್, ಮಾರ್ಬಲ್ ಮತ್ತು ವಾಟರ್, ಪಾರ್ಥ ದಾಸ್ ಗುಪ್ತ, ವೆಸ್ಟ್ ಬೆಂಗಾಲ್, ಡ್ರಾ ವಿತ್ ಡ್ರಾ, ಹ್ಯಾಂಡ್ ಮೇಡ್ ಪೇಪರ್ ಮತ್ತು ಡ್ರೈ ಲೆಟರ್

ನಿತಿನ್ ಕುಮಾರ್ ಸಿಂಗ್, ಬೆಂಗಳೂರು, ಎ ಗ್ಲೀಮಿಂಗ್ ಸ್ಟ್ರೀಟ್, ವಾಟರ್ ಕಲರ್ ಆನ್ ಪೇಪರ್, ಅನುಪಮ್ ಬೇರ, ಕೋಲ್ಕತ್ತ, ಟೈಮ್ ಚೆಕ್ ನವ್, ಎಗ್ ಟೆಂಪೇರ ಆನ್ ಪೇಪರ್, ಪ್ರದ್ನ್ಯ ಹಿತೇಂದ್ರ ದುರಾಫೆ, ಮಧ್ಯ ಪ್ರದೇಶ, ತಲ್‍ಮೇಲ್-5, ಮಿಶ್ರ, ಮಹೇಶ್ ಪಾಲ್ ಗೋಬ್ರ, ಮಧ್ಯಪ್ರದೇಶ, ಭೋಪಾಲ್ ಗ್ಯಾಸ್ ಟ್ರಾಜಡಿ 33 ಇಯರ್ಸ್, ಅಕ್ರಾಲಿಕ್ ಆನ್ ಕ್ಯಾನ್ವಸ್

ಕಿಶೋರ್ ಕುಮಾರ್, ನ್ಯೂ ದೆಹಲಿ, ಮೈ ವಿಲೇಜ್ ಗಾರ್ಡನ್-2, ಅಕ್ರಾಲಿಕ್ ಆನ್ ಕ್ಯಾನ್ವಸ್, ಶೇಕ್ ಹಿಫ್ಜುಲ್, ನ್ಯೂ ದೆಹಲಿ, ಕಾರ್ನರ್ ಪ್ಲೇಯರ್ಸ್, ಅಕ್ರಾಲಿಕ್ ಆನ್ ಕ್ಯಾನ್ವಸ್, ದೆಬೋಸ್ಮಿತ ಸಮಂತ, ತೆಲಂಗಾಣ, ದಿ ಗಾರ್ಡನ್ ಬಿಟ್ವೀನ್ ಪ್ಯಾರಡೈಸ್ ಮತ್ತು ಮೈ ಹೋಂ, ಗುವಾಚೆ ಆನ್ ಕ್ಯಾನ್ವಸ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Lalitha Kala Academy awardees list announced on March 20th. Here is the list of winners.
Please Wait while comments are loading...