ಬೆಂಗಳೂರು 'ಸೇಫ್ ' ಆಗಿಲ್ಲ ಎಂದು ಬಿಂಬಿಸಬೇಡಿ: ಪರಂ

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಹೊಸವರ್ಷಾಚರಣೆ ವೇಳೆಯಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. ಇಂಥ ಘಟನೆ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಬೆಂಗಳೂರು ಅತ್ಯಂತ ಸುರಕ್ಷಿತವಾಗಿದೆ ಎಂದು ಗೃಹಸಚಿವ ಜಿ ಪರಮೇಶ್ವರ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಹೇಳಿದರು.

Karnataka home minister on Bengaluru molestation allegations

ಮಹಿಳೆಯರು, ಮಕ್ಕಳಿಗೆ ಬೆಂಗಳೂರು ಸುರಕ್ಷಿತವಾಗಿದೆ. ನಾನು ಡಿಸೆಂಬರ್ 31ರ ಘಟನೆ ಬಗ್ಗೆ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ಇಂಥ ಘಟನೆಗಳು ಸ್ವಾಭಾವಿಕ ಎಂದು ನಾನು ಹೇಳಿದ್ದೆ. ಆದರೆ, ಯಾವ ಉದ್ದೇಶದಿಂದ ಈ ಹೇಳಿಕೆ ನೀಡಿದೆ ಎಂಬುದನ್ನು ಮಾಧ್ಯಮಗಳಿಂದ ತೋರಿಸಿಲ್ಲ. ಹಿರಿಯ ಅಧಿಕಾರಿಗಳ ಅನುಪಸ್ಥಿತಿಯೇ ಇದಕ್ಕೆ ಕಾರಣವಾಗಿತ್ತು.

Karnataka home minister on Bengaluru molestation allegations

ಆದ್ದರಿಂದ ಮಾಧ್ಯಮಗಳಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಿ. ಘಟನೆ ಬಗ್ಗೆ ನಿಮ್ಮ ಬಳಿ ಫುಟೇಜ್ ಇದ್ದರೆ ದಯವಿಟ್ಟು ಕೊಡಿ, ಪೊಲೀಸರ ತನಿಖೆಗೆ ನೆರವಾಗಿ ಎಂದು ಈ ಮೂಲಕ ಕೋರುತ್ತೇನೆ.[ಯುವತಿಯರೇ ನೀವೇ ಎಚ್ಚರದಿಂದಿರಿ ಎಂದಿದ್ದು ಸರಿಯಾ?]

Karnataka home minister on Bengaluru molestation allegations

* ಕನ್ನಡಿಗರು ಎಂದಿಗೂ ಇಂಥ ಘಟನೆಗಳನ್ನು ಉತ್ತೇಜಿಸುವುದಿಲ್ಲ.
* ಈ ಘಟನೆಗೆ ಸಂಬಂಧಿಸಿದಂತೆ ಶಂಕಿತರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
* ಬೆಂಗಳೂರಿನಲ್ಲಿ ಹೆಚ್ಚುವರಿ 5 ಸಾವಿರ ಸಿಸಿಟಿವಿ ಕೆಮೆರಾ ಅಳವಡಿಸಲಾಗುತ್ತಿದೆ.
* ಮಹಿಳಾ ಆಯೋಗದಿಂದ ನೋಟಿಸ್ ಬಂದಿದೆ. ರಾಜ್ಯಪಾಲರು ವರದಿ ಕೇಳಿದ್ದಾರೆ.
* ನನ್ನ ಹೇಳಿಕೆ ಹಾಗೂ ಬೆಂಗಳೂರು ಬಗ್ಗೆ ಅಪಪ್ರಚಾರ ಮಾಡುವುದನ್ನು ಬಿಡಿ
* ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಕಾಂಗ್ರೆಸ್ ಸರ್ಕಾರ ಬದ್ಧ
* ಬೆಂಗಳೂರು ಪೊಲೀಸರು 24/7 ಕಾರ್ಯಾಚರಣೆ ಮಾಡುತ್ತಿದ್ದಾರೆ.
* ಡಯಲ್ 100 ಕರೆಗೆ ಈಗ ಇರುವ 15ಲೈನ್ ಗಳಿಗೆ ಬದಲಾಗಿ 100 ಲೈನ್ ಗೆ ಹೆಚ್ಚಿಸಲಾಗುವುದು. ಇದಕ್ಕಾಗಿ 14 ಕೋಟಿ ರು ನೀಡಲಾಗಿದೆ.
* ಮಹಿಳಾ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಶೇ5 ರಿಂದ ಶೇ20ಕ್ಕೇರಿಸಲಾಗಿದೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru has been shown in bad light on New Year's eve. Whatever happened in 31st night was unfortunate and should not have happened said Home Minister G Parameshwara today.
Please Wait while comments are loading...