ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯ್ ಮಲ್ಯರ ಯುಬಿಎಚ್‌ಎಲ್ ಆಸ್ತಿ ಮಾರಾಟಕ್ಕೆ ಜಾಹೀರಾತು: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಸಾಲದ ಸುಳಿಯಲ್ಲಿ ಸಿಲುಕಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಯುನೈಟೆಡ್ ಬ್ರೀವೆರೀಸ್ ಹೋಲ್ಡಿಂಗ್ ಲಿಮಿಟೆಡ್‌ನ ಆಸ್ತಿಗಳ ಮಾರಾಟಕ್ಕೆ ಜಾಹೀರಾತಿ ನೀಡಲು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಷರತ್ತುಬದ್ಧ ಅನುಮತಿ ನೀಡಿದೆ.

ಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯಭಾರತಕ್ಕೆ ನನ್ನ ಹಣಕ್ಕಿಂತ ನನ್ನ ಮೇಲೆಯೇ ಹೆಚ್ಚು ಗಮನ: ಮಲ್ಯ

ಹೀಗಾಗಿ ಯುಬಿಎಚ್ಎಲ್‌ಗೆ ಸೇರಿದ ಫ್ಲ್ಯಾಟ್‌ಗಳನ್ನು ಮತ್ತು ಇತರೆ ಖಾಲಿ ಸ್ಥಳಗಳನ್ನು ಮಾರಾಟ ಮಾಡುವ ಸಲುವಾಗಿ ಬರಖಾಸ್ತುದಾರರು ಜಾಹೀರಾತುಗಳನ್ನು ನೀಡಲು ಅನುಮತಿ ನೀಡಲಾಗಿದೆ. ಆದರೆ, ಅವುಗಳನ್ನು ಜಾರಿಗೆ ನೀಡಲು ನ್ಯಾಯಾಲಯದ ಆದೇಶದವರೆಗೂ ಈ ಅಧಿಕಾರಿ ಕಾಯಬೇಕಾಗುತ್ತದೆ.

 karnataka high court vijay mallya ubhl properties advertise bank debts

2017ರಲ್ಲಿ ಕಂಪೆನಿಯನ್ನು ಮುಟ್ಟುಗೋಲು ಹಾಕಲು ನ್ಯಾಯಾಲಯ ಆದೇಶ ನೀಡಿದ ಬಳಿಕ ಮಲ್ಯ ಅವರಿಂದ ಹಣ ವಸೂಲಿ ಮಾಡಿ ಬ್ಯಾಂಕ್‌ಗಳಿಗೆ ಮತ್ತು ಇತರರಿಗೆ ನೀಡಲು ಅಧಿಕಾರಿಯನ್ನು ನೇಮಿಸಲಾಗಿದೆ.

ಆದರೆ, ಬರಖಾಸ್ತುದಾರರ ನೇಮಕವನ್ನು ವಿರೋಧಿಸಿದ್ದ ಯುಬಿ ಎಚ್ ಎಲ್, ಮಲ್ಯ ಅವರ ಸಾಲವನ್ನು ಸಂಪೂರ್ಣವಾಗಿ ತೀರಿಸಲು ಕಂಪೆನಿ ಬಳಿ ಸಾಕಷ್ಟು ಆಸ್ತಿ ಇದೆ ಎಂದು ವಾದಿಸಿತ್ತು.

ಸುಸ್ತಿದಾರ ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ : ಗಡ್ಕರಿ ಸುಸ್ತಿದಾರ ಮಲ್ಯರನ್ನು ಕಳ್ಳ ಎನ್ನುವುದು ಸರಿಯಲ್ಲ : ಗಡ್ಕರಿ

'ಬ್ಯಾಂಕುಗಳಿಗೆ ಸುಮಾರು 10 ಸಾವಿರ ಕೋಟಿ ಸಾಲ ವಾಪಸಾಗಬೇಕಿದೆ. ಇದರಲ್ಲಿ ಅದರಲ್ಲಿ ಬಡ್ಡಿ ಮತ್ತಿತರ ವೆಚ್ಚವೂ ಸೇರಿದೆ. ಇತರೆ ಸಾಲದಾರರಿಗೆ ಸುಮಾರು 2,500 ಕೋಟಿ ರೂ ಮರಳಿಸಬೇಕು. ಯುಬಿಎಚ್ ಎಲ್ ಪ್ರಸ್ತುತ 7,500 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದೆ.

ಜೊತೆಗೆ 7,500 ಕೋಟಿ ರೂ ಷೇರುಗಳ ಮಾರಾಟದಿಂದ ದೊರಕಲಿದೆ. ನಾವು ಸಾಲದ ಹಣವನ್ನು ಪಾವತಿಸಿ ಉಳಿದ ಮೊತ್ತದಲ್ಲಿ ಕಂಪೆನಿಯನ್ನು ನಡೆಸಬಹುದು' ಎಂದು ಯುಬಿಎಚ್ ಎಲ್ ಪರ ವಕೀಲ ಸಜನ್ ಪೂವಯ್ಯ ವಾದಿಸಿದ್ದರು.

ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!ಗಡಿಪಾರು ಆದೇಶ ಬಂದರೂ ಮಲ್ಯ ಭಾರತಕ್ಕೆ ಸದ್ಯಕ್ಕಂತೂ ಬರಲ್ಲ!

ಆರೋಪಿತ ವಂಚಕನ ಜೊತೆ ಯುಬಿಎಚ್ ಎಲ್ ಯಾವುದೇ ಸಂಪರ್ಕ ಹೊಂದಿಲ್ಲ. ಆದರೆ, ಕಿಂಗ್ ಫಿಶರ್ ಏರ್ ಲೈನ್ಸ್‌ಗೆ ಕಾರ್ಪೊರೇಟ್ ಖಾತರಿದಾರನಾಗಿ ಸಹಿ ಹಾಕಿದ್ದೇ ತಾವು ಮಾಡಿದ ಏಕೈಕ ತಪ್ಪು ಎಂದು ಕಂಪೆನಿ ಹೇಳಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬ್ಯಾಂಕುಗಳ ಪರ ವಕೀಲ ಎಸ್ ಎಸ್ ನಾಗಾನಂದ್, ಮಲ್ಯ ಅವರು ಸ್ವಂತವಾಗಿ ಹೊಂದಿರುವ ಯಾವುದೇ ಆಸ್ತಿ ಇಲ್ಲ. ಅವರು ದಿವಾಳಿಯಾಗಿದ್ದಾರೆ. ಯುಬಿಎಚ್ ಎಲ್ ಕಾನೂನು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರ ಕೆಲವರು ಜಾರಿ ನಿರ್ದೇಶನಾಲಯದ ಪ್ರಕರಣ ಎದುರಿಸುತ್ತಿದ್ದಾರೆ ಎಂದು ಕೋರ್ಟ್‌ಗೆ ವಿವರಿಸಿದ್ದರು.

English summary
Karnataka high court division bench granted conditional permission to advertise the properties of Vijay Mallya linked UBHL to pay back loan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X