ಬೆಂಗಳೂರು ಅರಮನೆ ಸ್ವತ್ತಿನ ಮೇಲೆ ಸರ್ಕಾರಕ್ಕೆ ಹಕ್ಕಿಲ್ಲ: ಸುಪ್ರೀಂ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 16: ಬೆಂಗಳೂರಿನ ಪ್ರತಿಷ್ಠಿತ ಹಾಗೂ ವಿವಾದಿತ ತಾಣ ಅರಮನೆ ಮೈದಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸ್ವತ್ತಿನ ಮೇಲೆ ಕರ್ನಾಟಕ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಮಾರು 117 ವರ್ಷಗಳ ಹಿಂದೆ ಮೈಸೂರಿನ ದಿವಾನರು ನಡೆಸಿದ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾಡಿದ ಮನವಿ ತಿರಸ್ಕೃತಗೊಂಡಿದೆ.

ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಈ ರೀತಿ ಆದೇಶ ನೀಡಿದೆಸ್ಪಷ್ಟಪಡಿಸಿದೆ. ಪ್ರಥಮ ರಾಜಕುಮಾರನ ಪರವಾಗಿ ಆಗಿನ ಮೈಸೂರು ದಿವಾನರು ಇದನ್ನು ಖರೀದಿ ಮಾಡಿದ್ದರು.

Karnataka has no right over Bengaluru’s ‘Beaulieu’ estate: Supreme Court

ಯುವರಾಜನ ವೈಯಕ್ತಿಕ ಹಣವನ್ನು ಸ್ವತ್ತಿಗೆ ಪ್ರತಿಫಲವಾಗಿ ನೀಡಲಾಗಿತ್ತು. ಕಾನೂನು ಬದ್ದವಾಗಿ ಮತ್ತು ನ್ಯಾಯಸಮ್ಮತವಾಗಿ ಈ ಖರೀದಿ ವ್ಯವಹಾರ ನಡೆದಿದೆ. ಹೀಗಿರುವಾಗ ಈ ಸ್ವತ್ತು ಹಸ್ತಾಂತರ ಒಪ್ಪಂದದಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ಆದ್ದರಿಂದ ಈ ಅಸ್ತಿಯ ಮೇಲೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಹಕ್ಕು ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.[ಪ್ಯಾಲೆಸ್ ಗ್ರೌಂಡ್ಸ್ ಪ್ರಮುಖ ಘಟನಾವಳಿಗಳು]

ಅರಮನೆ ಎಸ್ಟೇಟ್ 24 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪಾರಂಪರಿಕ ಸ್ವತ್ತು ಬೆಂಗಳೂರಿನ ಪ್ರತಿಷ್ಠಿತ ಅರಮನೆ ರಸ್ತೆಯಲ್ಲಿದ್ದು, ಅನೇಕ ವಾಣಿಜ್ಯ ಕಟ್ಟಡಗಳು ಮತ್ತು ಬಂಗಲೆಗಳು ಇಲ್ಲಿ ತಲೆ ಎತ್ತಿವೆ. ಸ್ಥಳದ ಅಧಿಭೋಗದಾರರ (ಸ್ವಾಧೀನದಾರರ) ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಸೆಕ್ಷನ್ 67ರ ಅಡಿ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಈ ಹಿಂದೆ ರಾಜ್ಯ ಸರ್ಕಾರ ಹೊರಡಿಸಿತ್ತು.

ಇದನ್ನು ಕರ್ನಾಟಕ ಹೈಕೋರ್ಟ್‍ನ ಏಕ ಸದಸ್ಯ ಪೀಠವು ರದ್ದುಗೊಳಿಸಿ ಆದೇಶ ನೀಡಿತ್ತು. ಈಗ ಆ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಪುನಃ ಸ್ಥಾಪಿಸಿದ್ದು, ಈ ಸ್ವತ್ತಿನ ಮೇಲೆ ರಾಜ್ಯ ಯಾವುದೇ ಹಕ್ಕು ಹೊಂದಿಲ್ಲ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court has said that Karnataka has “no right” over the historic Beaulieu Estate in the heart of the Bengaluru city as it was purchased nearly 117 years ago by the Dewan of Mysore on behalf of the First Princess.
Please Wait while comments are loading...