ಮಿನರ್ವ-ಹಡ್ಸನ್ ವೃತ್ತ ಉಕ್ಕಿನ ಸೇತುವೆಗೆ ಸರ್ಕಾರದ ಒಪ್ಪಿಗೆ

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 31 : ಮಿನರ್ವ ವೃತ್ತ-ಹಡ್ಸನ್ ವೃತ್ತದ ನಡುವಿನ ಉಕ್ಕಿನ ಸೇತುವೆ ಯೋಜನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಜನವರಿಯಿಂದ ಕಾಮಗಾರಿ ಆರಂಭವಾಗಲಿದೆ.

ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣ ಆರಂಭ

ಸುಮಾರು 139 ಕೋಟಿ ವೆಚ್ಚದಲ್ಲಿ 3 ಕಿ.ಮೀ. ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಶಿವಾನಂದ ಸರ್ಕಲ್‌ ಬಳಿಕ ಮಿನರ್ವ ವೃತ್ತದ ಬಳಿ ಇಂತಹ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

ಮಡಿವಾಳ ಅಂಡರ್ ಪಾಸ್ ಗೆ ಶೀಘ್ರದಲ್ಲೇ ಹೊಸ ಲುಕ್

Karnataka Govt nod for Minerva to Hudson Circle steel flyover

ನಗರೋತ್ಥಾನ ಯೋಜನೆಯಡಿ ನಗರದ ಮೂರು ಭಾಗಗಳಲ್ಲಿ ಸ್ಟೀಲ್ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. 2015ರಲ್ಲಿ ಈ ಬಗ್ಗೆ ಪ್ರಸ್ತಾವನೆ ಸಿದ್ಧಗೊಂಡಿತ್ತು. ಈಗ ಕಾಮಗಾರಿ ಆರಂಭವಾಗುತ್ತಿದೆ.

ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಯೋಜನೆಗೆ ತಡೆ ಇಲ್ಲ

ಶಿವಾನಂದ ವೃತ್ತ, ಮಿನರ್ವ ವೃತ್ತ-ಹಡ್ಸನ್ ವೃತ್ತ ಹಾಗೂ ಈಜಿಪುರ-ಕೇಂದ್ರೀಯ ಸದನ ಫ್ಲೈಓವರ್ ಯೋಜನೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ತಯಾರಾಗಿತ್ತು.

ಮೂರು ಉಕ್ಕಿನ ಸೇತುವೆ

* ಈಜಿಪುರದಿಂದ ಕೇಂದ್ರಿಯ ಸದನ - 2.4ಕಿ.ಮೀ. (214 ಕೋಟಿ ವೆಚ್ಚ)

* ಮಿನರ್ವ-ಹಡ್ಸನ್ ಸರ್ಕಲ್ 3 ಕಿ.ಮೀ. (139 ಕೋಟಿ)

* ಶಿವಾನಂದ ವೃತ್ತದಲ್ಲಿ 700 ಮೀಟರ್ (57 ಕೋಟಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government approved for Minerva Circle to Hudson Circle steel flyover, Bengaluru. Bruhat Bengaluru Palike (BBMP) has finalized the bidder for the project and sent it for approval of the cabinet few months back.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ