ಐಸಿಯು ರೋಗಿಗಳಿಗೆ ಸರ್ಕಾರದ ಟ್ಯಾಕ್ಸ್ ಟ್ರೀಟ್‌ಮೆಂಟ್

Subscribe to Oneindia Kannada

ಬೆಂಗಳೂರು, ಜನವರಿ, 18: ಅತ್ಯಾಧುನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಗೆ ದಾಖಲಾಗಿ ಚಿಕಿತ್ಸೆ ಪಡೆಯುವ ರೋಗಿಗಳು ಇನ್ನು ಮುಂದೆ ಹೆಚ್ಚಿನ ಬಿಲ್ ತೆರಬೇಕಾಗುತ್ತದೆ. ಐಸಿಯು ವಾರ್ಡ್ ಅಥವಾ ಹಾಸಿಗೆಗೆ ಹೆಚ್ಚುವರಿ ಶೇ. 8 ರಷ್ಟು ಹೆಚ್ಚುವರಿ ತೆರಿಗೆ ತುಂಬಬೇಕಿದೆ.

ವಾಣಿಜ್ಯ ತೆರಿಗೆ ಇಲಾಖೆ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದು ಬೆಂಗಳೂರು ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಿಗೆ ನಿಯಮ ಅನ್ವಯವಾಗಲಿದೆ. ದಿನವೊಂದಕ್ಕೆ ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚಿಗೆ ನೀಡಬೇಕಾದ ಐಸಿಯು ವಾರ್ಡ್ ಗಳನ್ನು ಐಷಾರಾಮಿ ಎಂದು ಪರಿಗಣಿಸಲಾಗುತ್ತದೆ. ಇವರು ಹೆಚ್ಚುವರಿ ತೆರಿಗೆ ಪಾವತಿ ಮಾಡಬೇಕು ಎಂದು ಕರ್ನಾಟಕದ ತೆರಿಗೆ ಕಾಯ್ದೆ 1979 ರ ಅನ್ವಯ ಆದೇಶ ನೀಡಲಾಗಿದೆ.[ ಪಾನ್ ಕಾರ್ಡ್ ಬಳಸುವವರು ಈ ನಿಯಮ ಓದಿಕೊಳ್ಳಿ]

karnataka

ಸಾಮಾನ್ಯವಾಗಿ ಐಸಿಯು ವಾರ್ಡ್ ನ ಹಾಸಿಗೆಯೊಂದಕ್ಕೆ 2,500 ದಿಂದ 5000 ರು. ಪಾವತಿ ಮಾಡಬೇಕಿದೆ. ಹಾಗಾಗಿ ಇನ್ನು ಮುಂದೆ ರೋಗಿಯ ಕಡೆಯಿಂದ 200 ರು ನಿಂದ 400 ರು. ಹೆಚ್ಚುವರಿ ಸಂದಾಯವಾಗಬೇಕಾಗುತ್ತದೆ.

ಅತ್ಯಾಧುನಿಕ ಆಸ್ಪತ್ರೆಗಳ ಡಿಲೆಕ್ಸ್ ಮತ್ತು ಸೂಪರ್ ಡಿಲೆಕ್ಸ್ ರೂಮ್ ಗಳಿಗೆ ತೆರಿಗೆ ನೀತಿ ಅನ್ವಯವಾಗುತ್ತದೆ. ಅಲ್ಲದೇ ರೋಗಿಗಳಿಗೆ ನೀಡುವ ಹೆಚ್ಚುವರಿ ಸೌಲಭ್ಯಗಳಿಗೂ ತೆರಿಗೆ ಅನ್ವಯವಾಗುತ್ತದೆ ಎಂದು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಹವಾನಿಯಂತ್ರಿತ ವ್ಯವಸ್ಥೆ, ದೂರವಾಣಿ ಸಂಪರ್ಕ, ದೂರದರ್ಶನ ವ್ಯವಸ್ಥೆ, ರೆಡಿಯೋ, ಸಂಗೀತ, ಹೆಚ್ಚುವರಿ ಹಾಸಿಗೆ ಎಲ್ಲವೂ ತೆರಿಗೆ ನೀತಿಗೆ ಒಳಪಡಲಿವೆ. ಹೊಸ ಕ್ರಮದಿಂದ ಸರ್ಕಾರ 20 ಕೋಟಿ ರು. ಸಂಗ್ರಹ ಗುರಿಯನ್ನು ಹೊಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The state government has imposed an eight per cent luxury tax on each bed in an ICU. The department of commercial taxes sent a directive to all hospitals across Bengaluru stating.
Please Wait while comments are loading...