ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರೈತರ ಪಾಲಿನ ಸೌಭಾಗ್ಯ 'ಕೃಷಿ ಭಾಗ್ಯ'

By Manjunatha
|
Google Oneindia Kannada News

Recommended Video

ಸಿದ್ದರಾಮಯ್ಯನವರ ಕೃಷಿ ಭಾಗ್ಯ ಯೋಜನೆ ಕರ್ನಾಟಕ ರೈತರ ಪಾಲಿನ ಸೌಭಾಗ್ಯ | Oneindia Kannada

ಬೆಂಗಳೂರು, ಜನವರಿ 29: ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆಯ ನಂತರ ಹೆಚ್ಚು ಜನಕ್ಕೆ ತಲುಪಿದ ಪರಿಣಾಮಕಾರಿ ಯೋಜನೆ ಎಂದರೆ ಕೃಷಿ ಭಾಗ್ಯ ಯೋಜನೆ.

ಕೃಷಿಭಾಗ್ಯ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಫಲಪ್ರಧ, ಫಲದಾಯಕ ಯೋಜನೆ ಎನ್ನಲಾಗುತ್ತದೆ. ಈ ಯೋಜನೆ ರಾಜ್ಯದ ಕೃಷಿ ಪದ್ಧತಿಯನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಜೊತೆಗೆ, ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವತ್ತ ಹೆಜ್ಜೆ ಇಟ್ಟಿದೆ.

ಕೃಷಿ ವಿವಿಗಳ ಸಂಶೋಧನೆಯ ಫಲ ರೈತರನ್ನೂ ತಲುಪಲಿ: ಸಿಎಂಕೃಷಿ ವಿವಿಗಳ ಸಂಶೋಧನೆಯ ಫಲ ರೈತರನ್ನೂ ತಲುಪಲಿ: ಸಿಎಂ

ಕೃಷಿ ಅಧಿಕಾರಿಗಳೇ ಹೇಳುವ ಪ್ರಕಾರ ಕೃಷಿ ಭಾಗ್ಯ ಯೋಜನೆ ಚಟುವಟಿಕೆಗೆ ಆದ್ಯತೆ ನೀಡುವ ಯೋಜನೆ, ಕೇವಲ ಕೃಷಿಗೆ ಮಾತ್ರವೇ ಒತ್ತು ನೀಡದೆ, ಕೃಷಿಯ ಉಪ ಕಸುಬುಗಳಿಗೂ ಈ ಯೋಜನೆ ಉತ್ತೇಜನ ನೀಡುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಮುಂತಾದ ಕಾರ್ಯಕ್ರಮಗಳ ಮೂಲಕ ದೂರಗಾಮಿ ಕೃಷಿಗೆ ಆದ್ಯತೆ ನೀಡುವ ಕಾರ್ಯ ಮಾಡಲಾಗುತ್ತಿದೆ.

ಮುಖ್ಯಮಂತ್ರಿಗಳ ಆಸ್ಥೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಳೆಯಾಶ್ರಿತ ಪ್ರದೇಶದ ರೈತರ ಕೃಷಿ ಜೀವನವನ್ನು ಉತ್ತಮ ಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವಾಭಾವಿಕ ಸಂಪನ್ಮೂಲಗಳ ಜೊತೆಗೆ ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಹಾಗೂ ಕೃಷಿ ಕಾರ್ಮಿಕರ ಆದಾಯ ಮಟ್ಟ ಹೆಚ್ಚಿಸುವುದು ಈ ಕೃಷಿ ಭಾಗ್ಯ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೆರೆ ಸಂಜೀವಿನಿ

ಕೆರೆ ಸಂಜೀವಿನಿ

ಕಳೆದ ನಾಲ್ಕು ವರ್ಷಗಳಿಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೃಷಿ ವಲಯದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡಿಕೊಂಡು ಬಂದಿದೆ. ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ವಿತರಣೆ, ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನೆರಳು ಪರದೆ ನಿರ್ಮಾಣ ಮಾಡಲಾಗಿದೆ. ಕೆರೆಗಳನ್ನು ಪುನಶ್ಚೇತನಗೊಳಿಸಲು ಕೆರೆ ಸಂಜೀವಿನಿ ಯೋಜನೆ ಹಾಗೂ ಜಲಾನಯನ ಪ್ರದೇಶಗಳನ್ನು ಅಭಿವೃದ್ಧಿ ಮಾಡಿ ಬರನಿರ್ವಹಣೆಯನ್ನು ಮಾಡಿದೆ.

ಬೇಸಿಗೆಯಲ್ಲೂ ಬೆಳೆ

ಬೇಸಿಗೆಯಲ್ಲೂ ಬೆಳೆ

ಕೃಷಿಭಾಗ್ಯ ಯೋಜನೆಯ ಪ್ರಮುಖ ಕಾರ್ಯಕ್ರಮ ಕೃಷಿ ಹೊಂಡ ನಿರ್ಮಾಣ. ಈ ಕಾರ್ಯಕ್ರಮ ರಾಜ್ಯದ ಬಹುತೇಕ ಕೃಷಿಕರ ಜೀವನ ಬದಲಾಯಿಸಿದೆ. ಕೃಷಿ ಹೊಂಡ ನಿರ್ಮಿಸಿ, ನೀರು ಆವಿಯಾಗದಂತೆ ಅಥವಾ ಇಂಗದಂತೆ ನೋಡಿಕೊಂಡು ಬೇಸಿಗೆ ಸಮಯದಲ್ಲಿ ಕೃಷಿಗೆ ಬಳಸಿಕೊಂಡು ಕೃಷಿ ಮಾಡಬಹುದಾಗಿದೆ. ಕೃಷಿ ಹೊಂಡ ನಿರ್ಮಾಣ ಮತ್ತು ಅದಕ್ಕೆ ಹಾಕುವ ಪ್ಲಾಸ್ಟಿಕ್ ಕವರ್, ಫೆನ್ಸ್‌ ಎಲ್ಲದಕ್ಕೂ ಕೃಷಿ ಭಾಗ್ಯ ಯೋಜನೆಯಲ್ಲಿ ಸಹಾಯಧನ ನೀಡಲಾಗುತ್ತದೆ. ಅಷ್ಟೆ ಅಲ್ಲದೆ ಕೃಷಿ ಹೊಂಡದಿಂದ ಬೆಳೆಗೆ ನೀರು ಹಾಯಿಸಲು ಅಗತ್ಯವಾದ ಡೀಸೆಲ್ ಮೋಟಾರ್ ಖರೀದಿಗೆ ಕೃಷಿ ಭಾಗ್ಯ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ.

ಕೃಷಿಭಾಗ್ಯ ಯೋಜನೆಗೆ ಸಾಕಷ್ಟು ಅನುದಾನ

ಕೃಷಿಭಾಗ್ಯ ಯೋಜನೆಗೆ ಸಾಕಷ್ಟು ಅನುದಾನ

ಸರ್ಕಾರವು ಜಾರಿ ತಂದಿರುವ ಕೃಷಿಭಾಗ್ಯ ಯೋಜನೆಯಿಂದ ನೀರನ್ನು ಬಳಸಿ ರೈತರು ಕೃಷಿಯನ್ನು ಮಾಡುತ್ತಿದ್ದಾರೆ. ಒಣಭೂಮಿ ರೈತರಿಗೆ ಕೃಷಿಭಾಗ್ಯ ಯೋಜನೆ ವರದಾನವಾಗಿದ್ದು. ಕೃಷಿಭಾಗ್ಯ ಯೋಜನೆಗಾಗಿ ಸರ್ಕಾರ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಕೃಷಿಹೊಂಡ ಮಾಡಿಕೊಂಡಿರುವ ರೈತರು ನೀರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಯೋಜನೆಯ ಫಲವನ್ನು ಪಡೆದುಕೊಂಡ ರೈತರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಯೋಜನೆಯಿಂದ ಮನಸೂರೆಗೊಂಡಿದ್ದೇವೆ ಎಂದು ಸ್ವತಃ ರೈತರೆ ಹೇಳಿಕೊಂಡಿದ್ದಾರೆ.

English summary
Karnataka government gave cores of grant to its important scheme 'Krushi Bhagya'. Krushi Bagya is a effective scheme many farmers in Karnataka made use of this scheme and doing productive agriculture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X