ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಾತ್ರಿ 'ಬಾರ್' ಅವಧಿ ಹೆಚ್ಚಾಗಲಿದೆ

By Mahesh
|
Google Oneindia Kannada News

ಬೆಂಗಳೂರು, ಜ.22: ದೇಶದ ಪಬ್ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ರಾತ್ರಿ ಅವಧಿ ಇನ್ಮುಂದೆ ಹೆಚ್ಚಾಗಲಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ ಹೊಂದುವ ಮೂಲಕ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ಯಾನ ನಗರಿಯನ್ನು ರಾತ್ರಿ ಎಲ್ಲಾ ಎಚ್ಚರವಿಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳು ರಾತ್ರಿ 1 ಗಂಟೆವರೆಗೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದು ಬಿ ಪ್ಯಾಕ್ ಸ್ವಯಂ ಸೇವಾ ಸಂಸ್ಥೆ ಸಂಸ್ಥೆ ನೀಡಿರುವ ವರದಿಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.[ಎಷ್ಟು ಹೊತ್ತಿನವರೆಗೆ ಪಬ್ ತೆಗೆದಿರಬೇಕು?]

ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಂದಾರ್, ಮಣಿಪಾಲ್ ಎಜುಕೇಷನ್ ಅಕಾಡೆಮಿ ನಿರ್ದೇಶಕ ಮೋಹನ್ ದಾಸ್ ಪೈ ಸೇರಿದಂತೆ ಹಲವಾರು ಗಣ್ಯರು ರಚಿಸಿರುವ ಬಿ ಪ್ಯಾಕ್ ಸಂಸ್ಥೆ ವರದಿ ಬಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಸಿದ್ದರಾಮಯ್ಯ ಮಾತನಾಡಿದರು.

Karnataka Govt wants to extend Bangalore nightlife : BPAC

ರಾತ್ರಿ ಅವಧಿ ವಿಸ್ತರಣೆ ಸಾಧ್ಯವೇ? : ಸದ್ಯಕ್ಕೆ ಬೆಂಗಳೂರಿನಲ್ಲಿ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ರಾತ್ರಿ 11 ಗಂಟೆಗೆ ಬಾಗಿಲು ಮುಚ್ಚಬೇಕಾಗುತ್ತದೆ. ರಾತ್ರಿ 1 ಗಂಟೆ ತನಕ ಬಾರ್ ಅವಧಿ ವಿಸ್ತರಣೆ ಮಾಡಲು ನಗರ ಪೊಲೀಸರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ.[ಕರ್ನಾಟಕದಲ್ಲೇ ಹೆಚ್ಚು ಕುಡುಕ 'ಮಕ್ಕಳು']

ಸಿಎಂ ಸಿದ್ದರಾಮಯ್ಯ ಅವರಿಗೆ ಬಿಪ್ಯಾಕ್ ಸದಸ್ಯರು ಬಾರ್ ಅವಧಿ ರಾತ್ರಿ 11 ಗಂಟೆಯಿಂದ 1 ಗಂಟೆ ತನಕ ವಿಸ್ತರಣೆ ಮಾಡಲು ಮನವಿ ಸಲ್ಲಿಸಿರುವ ಬಗ್ಗೆ ತಿಳಿದು ಬಂದಿದೆ. ಆದರೆ, ನಮ್ಮ ಇಲಾಖೆಗೆ ಈ ಬಗ್ಗೆ ಅಧಿಕೃತ ಆದೇಶ ಇನ್ನೂ ಸಿಕ್ಕಿಲ್ಲ. ಪೊಲೀಸ್ ಇಲಾಖೆ ಅಭಿಪ್ರಾಯದ ಪ್ರಕಾರ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಎಚ್ ಔರಾದ್ ಕರ್ ಹೇಳಿದ್ದಾರೆ.

ಬೆಂಗಳೂರು ನಗರದ ರಾತ್ರಿ ಜೀವನ ಶೈಲಿಯನ್ನು ಮುಂಬೈ ಹಾಗೂ ಚೆನ್ನೈ ನಗರದಲ್ಲಿರುವಷ್ಟು ಪೊಲೀಸ್ ಪಡೆ ನಮ್ಮಲ್ಲಿಲ್ಲ. ಹೊಸ ವರ್ಷಾಚರಣೆ ಅವಧಿಯಲ್ಲಿ ನಡೆಯುವ ಕ್ರೈಂಗಳನ್ನು ಆದಷ್ಟು ಕಡಿಮೆ ಮಾಡಲಾಗಿದೆ. ಕ್ರೈಂ ರೇಟ್ ತಗ್ಗಿದ ಮಾತ್ರಕ್ಕೆ 1 ಗಂಟೆ ತನಕ ಬಾರ್ ಓಪನ್ ಮಾಡಲು ಅನುಮತಿ ನೀಡಲು ಪೊಲೀಸ್ ಇಲಾಖೆ ಸಿದ್ಧವಿಲ್ಲ ಎಂದು ಔರಾದ್ ಕರ್ ಹೇಳಿದ್ದಾರೆ.

ಬೆಂಗಳೂರಿನ ರಾತ್ರಿ ಅವಧಿ ವಿಸ್ತರಣೆಗೆ ಪರ ವಿರೋಧ ಪ್ರತಿಕ್ರಿಯೆಗಳು ಬರುತ್ತಿವೆ ಪೊಲೀಸ್, ಪ್ರವಾಸೋದ್ಯಮ, ಅಬಕಾರಿ ಇಲಾಖೆ ಜತೆ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಲಾಗುವುದು. ಸಾರ್ವಜನಿಕರು, ಮಾಧ್ಯಮದವರ ಸಲಹೆ ಸೂಚನೆಗಳನ್ನು ಗೃಹ ಸಚಿವಾಲಯ ಆಲಿಸಲಿದೆ ಎಂದು ಗೃಹ ಸಚಿವ ಕೆಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.

English summary
The city may stop going to bed early. The state government is open to the idea of extending the 11pm deadline for nightlife to 1am.BPAC members Kiran Mazumdar-Shaw and TV Mohandas Pai met Cm Siddaramaiah and submitted a proposal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X