ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧಕ್ಕೆ 60: ಸಂಭ್ರಮಕ್ಕೆ ಅಣಿಯಾಗಿ, ಸಿದ್ದರಾಮಯ್ಯ

ಬೆಂಗಳೂರಿನ ವಿಧಾನಸೌಧದ ಕಟ್ಟಡವು 60 ವಸಂತಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಧಾನ ಪರಿಷತ್ತು ಹಾಗೂ ರಾಜ್ಯ ವಿಧಾನ ಸಭೆಯ ಸಹಯೋಗದೊಡನೆ ರಾಜ್ಯ ಸರ್ಕಾರವು ಸಧ್ಯದಲ್ಲಿಯೇ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸಲಿದೆ

By Mahesh
|
Google Oneindia Kannada News

ಬೆಂಗಳೂರು, ಜನವರಿ 22: ಷಷ್ಠಿಪೂರ್ತಿ ಸಮಾರಂಭಕ್ಕೆ ತಯಾರಿ ನಡೆಸುವಂತೆ ರಾಜ್ಯ ವಿಧಾನ ಪರಿಷತ್ತು ಹಾಗೂ ರಾಜ್ಯ ವಿಧಾನ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ 68 ವರ್ಷ ವಯಸ್ಸಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರದಂದು ಕರೆ ನೀಡಿದರು.

ಸಿದ್ದರಾಮಯ್ಯ ಅವರು ಮಾತನಾಡಿದ್ದು, ಜನತೆಯ ಅರಮನೆ ಎನಿಸಿಕೊಂಡ ವಿಧಾನಸೌಧದ ಬಗ್ಗೆ, ಈ ಭವ್ಯ ಸೌಧಕ್ಕೆ 60 ವರ್ಷ ತುಂಬಿರುವ ಹಿನ್ನಲೆಯಲ್ಲಿ ಅದ್ದೂರಿಯಾಗಿ ವಜ್ರಮಹೋತ್ಸವ ಆಚರಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರಿನ ವಿಧಾನಸೌಧದ ಕಟ್ಟಡವು 60 ವಸಂತಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ರಾಜ್ಯ ವಿಧಾನ ಪರಿಷತ್ತು ಹಾಗೂ ರಾಜ್ಯ ವಿಧಾನಸಭೆಯ ಸಹಯೋಗದೊಡನೆ ರಾಜ್ಯ ಸರ್ಕಾರವು ಸಧ್ಯದಲ್ಲಿಯೇ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ರಾಜ್ಯ ವಿಧಾನಮಂಡಲದ ಉಭಯ ಸದನಗಳ ಪೀಠಾಧಿಪತಿಗಳೊಂದಿಗೆ ಚರ್ಚಿಸಿ ವಿಧಾನಸೌಧದ ವಜ್ರ ಮಹೋತ್ಸವ ಸಂಭ್ರಮಾಚರಣೆಗೆ ಶೀಘ್ರವೇ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

ರಾಮಚಂದ್ರ ಅವರು ಬರೆದಿರುವ ಪುಸ್ತಕ

ರಾಮಚಂದ್ರ ಅವರು ಬರೆದಿರುವ ಪುಸ್ತಕ

ವಿಧಾನ ಸೌಧದ ವಿಶೇಷತೆಗಳನ್ನು ತಿಳಿಹೇಳುವ ಈ ಪುಸ್ತಕದ ಮುಖ ಬೆಲೆ 395 ರೂಪಾಯಿಗಳು. ಇದನ್ನು ಸರ್ಕಾರ ಖರೀದಿಸಬೇಕು ಎಂದು ಮನವಿ ಮಾಡಿರುವ ರಾಮಚಂದ್ರ ಅವರು ಆದರೆ, aರಿಯಾಯಿತಿಯನ್ನು ಕೇಳ ಬೇಡಿ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಅಂಶವನ್ನು ಮುಖ್ಯಮಂತ್ರಿಯವರು ಗಮನಕ್ಕೆ ತಂದಾಗ ಇಡೀ ಸಭಿಕರ ಸಮೂಹವೇ ನಗೆಗಡಲಲ್ಲಿ ಮುಳುಗಿತು. ಈ ಪುಸ್ತಕದ ಕನ್ನಡ ಅವತರಣಿಕೆಯೂ ಪ್ರಕಟಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಯಸಿದರು.

ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ

ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ

ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ತಮ್ಮ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಕೆಂಪು ಕಟ್ಟಡ ಅಠಾರಾ ಕಚೇರಿಯಿಂದ ಹೊರಟು ಪ್ರತಿದಿನವೂ ವಿಧಾನಸೌಧದ ನಿರ್ಮಾಣ ಕಾಮಗಾರಿಗಳನ್ನು ಖುದ್ಧು ಪರಿಶೀಲಿಸುತ್ತಿದ್ದರು. ಮುಖ್ಯಮಂತ್ರಿಯವರ ಭೇಟಿ ಮತ್ತು ಪರಿಶೀಲನೆಯನ್ನು ವರದಿ ಮಾಡಲು ಹಾಜರಾಗುತ್ತಿದ್ದ ಬೆರಳೆಣಿಕೆಯ ಪತ್ರಕರ್ತರಲ್ಲಿ ತಾವೂ ಒಬ್ಬರು. ಕೆಂಗಲ್ ಹನುಮಂತಯ್ಯ ಅವರು ಅದ್ಭುತ ವ್ಯಕ್ತಿ ಹಾಗೂ ವಿಧಾನ ಸೌಧ ಕೆಂಗಲ್ ಅವರ ಅತ್ಯಧ್ಭುತ ಪರಿಕಲ್ಪನೆ ಎಂದು ಬಣ್ಣಿಸಿದರು.

ವಿಧಾನಸೌಧದ ನಿರ್ಮಾಣದಲ್ಲಿ ಭ್ರಷ್ಟಾಚಾರ

ವಿಧಾನಸೌಧದ ನಿರ್ಮಾಣದಲ್ಲಿ ಭ್ರಷ್ಟಾಚಾರ

ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ತಮ್ಮ ಕನಸಿನ ಕಟ್ಟಡದ ಉದ್ಘಾಟನೆಯವರೆಗೆ ಅಧಿಕಾರದಲ್ಲಿ ಉಳಿಯಲಿಲ್ಲ. ಅಂದು ಪ್ರತಿಪಕ್ಷಗಳು ಬಲಯುತವಾಗಿ ಇಲ್ಲದಿದ್ದರೂ, ಕೆಂಗಲ್ ಹನುಮಂತಯ್ಯ ಅವರ ಏಳಿಗೆಯನ್ನು ಸಹಿಸದ ಪಕ್ಷದೊಳಗಿನ ವ್ಯಕ್ತಿಗಳೇ ಸೃಷ್ಟಿಸಿದ ಆರೋಪಗಳ ಸುರಿಮಳೆಗೆ ಕೆಂಗಲ್ ಹನುಮಂತಯ್ಯ ಅವರು ತಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

ಯಾವುದೇ ತಪ್ಪು ಮಾಡದೇ ಇದ್ದರೂ ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸಬೇಕಾಯಿತು.

ವಿಧಾನಸೌಧ ನಿರ್ಮಾಣಕ್ಕೆ ತಗುಲಿದ ವೆಚ್ಚ

ವಿಧಾನಸೌಧ ನಿರ್ಮಾಣಕ್ಕೆ ತಗುಲಿದ ವೆಚ್ಚ

'ನನ್ನನ್ನು ಪ್ರಶ್ನಿಸಲು ನಿಮಗೆ ಅಧಿಕಾರ ಕೊಟ್ಟವರಾರು ?' ಎಂದು ಮರು ಪ್ರಶ್ನಿಸಿದ್ದು ಹಾಗೂ ಶಾಸನ ಸಭೆಯಲ್ಲಿ ಒಕ್ಕೊರಲಿನಿಂದ ಅನುಮೋದಿಸಿದ ವೆಚ್ಚಕ್ಕಿಂತಲೂ ಕಟ್ಟಡದ ಕಾಮಗಾರಿಗಳಿಗೆ ಒಂದು ರೂಪಾಯಿ ಕೂಡಾ ಹೆಚ್ಚಾಗಿ ವೆಚ್ಚ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಾಗಿ ಬಂದದ್ದು ಇದೀಗ ಇತಿಹಾಸ. ಆಗಿನ ಕಾಲದಲ್ಲಿ ವಿಧಾನಸೌಧ ನಿರ್ಮಾಣಕ್ಕೆ ತಗುಲಿದ ವೆಚ್ಚ ಎರಡು ಕೋಟಿ ರೂ ಗಳಿಗಿಂತಲೂ ಕಡಿಮೆ. ನಿಖರವಾಗಿ ತಿಳಿಸಬೇಕೆಂದರೆ 1.99 ಕೋಟಿ ರೂ. ಮಾತ್ರ" ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಮಚಂದ್ರ ಅವರ ಈ ಮೌಲ್ಯಯುತ ಕೃತಿ

ರಾಮಚಂದ್ರ ಅವರ ಈ ಮೌಲ್ಯಯುತ ಕೃತಿ

ಮೊದ ಮೊದಲು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ ಹಾಗೂ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಅವರಲ್ಲಿ ಸ್ವಾತಂತ್ರ್ಯ ಹೋರಾಟದ ರಕ್ತ ಹರಿಯುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮೌಲ್ಯಗಳಲ್ಲಿ ಕುಸಿತ ಉಂಟಾಗಿದೆ. ರಾಜಕಾರಣಿಗಳಲ್ಲಿ ದೂರದೃಷ್ಠಿಯೂ ಕ್ಷೀಣಿಸುತ್ತಿದೆ. ರಾಮಚಂದ್ರ ಅವರ ಈ ಮೌಲ್ಯಯುತ ಕೃತಿ ಹಲವಾರು ಸ್ವಾರಸ್ಯಕರ ಅಂಶಗಳತ್ತ ಬೆಳಕು ಚೆಲ್ಲುತ್ತದೆ ಎಂದರು.

ಯಾರು ಯಾರು ಪಾಲ್ಗೊಂಡಿದ್ದರು?

ಯಾರು ಯಾರು ಪಾಲ್ಗೊಂಡಿದ್ದರು?

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಕೆ. ಜೆ. ಜಾರ್ಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್. ಕೆ. ಪಾಟೀಲ್, ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್. ರೋಷನ್ ಬೇಗ್, ರಾಜ್ಯ ಸಭಾ ಸದಸ್ಯ ಕೆ. ರಹಮಾನ್ ಖಾನ್, ಲೋಕೋಪಯೋಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ್

English summary
Siddaramaiah led Karnataka government is gearing up to celebrate the diamond jubilee of the Vidhana Soudha in a grand manner. The foundation stone was laid by the then Prime Minister of India, Jawaharlal Nehru, on July 13, 1951 and construction completed in 1956.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X