ಐಟಿ ದಾಳಿ: ಇಬ್ಬರು ಭ್ರಷ್ಟ ಅಧಿಕಾರಿಗಳು ಅಮಾನತು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 2: ಐಟಿ ದಾಳಿಯಿಂದ 152 ಕೋಟಿ ಬೇನಾಮಿ ಆಸ್ತಿಯನ್ನು ಹೊಂದಿದ್ದ ಬೆಂಗಳೂರಿನ ಇಬ್ಬರು ಅಧಿಕಾರಿಗಳನ್ನು ಸರಕಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಬೆಂಗಳೂರು ಮತ್ತು ಗೋವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ನವೆಂಬರ್ 30 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 152 ಕೋಟಿ ಅಸ್ತಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಶುಕ್ರವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.

Karnataka government suspends 2 officials raided by IT in Bengaluru

ಬೆಂಗಳೂರಿನ ಇಬ್ಬರು ಅಧಿಕಾರಿಗಳಾದ ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ, ರಾಷ್ಟ್ರೀಯ ಹೆದ್ದಾರಿ ನಿಗಮದ ಮುಖ್ಯ ಅಧಿಕಾರಿ ಜಯಚಂದ್ರ ಅವರ ಮೆನೆಯನ್ನು ತಪಾಸಣೆ ಮಾಡಿದಾಗ 6 ಕೋಟಿ ಹಣ, ರು 2000 ನೋಟುಗಳ 5.7 ಕೋಟಿ, ಹಳೇ ನೋಟುಗಳ ಒಟ್ಟು ರು 90 ಲಕ್ಷ ಹಣ ಐಟಿ ಕೈವಶವಾಗಿದೆ. 7 ಕೆಜಿ ಚಿನ್ನ, ಆಭರಣ ಸೇರಿ 9 ಕೆಜಿ ಚಿನ್ನ ಪತ್ತೆಯಾಗಿದೆ. ಒಂದು ಐಶಾರಾಮಿ ಕಾರನ್ನು ವಶಕ್ಕೆ ಪಡೆಯಲಾಗಿದೆ.[ಐಟಿ ದಾಳಿ: ಭ್ರಷ್ಟರ ಬಳಿ 152 ಕೋಟಿ ಅಕ್ರಮ ಆಸ್ತಿ]

ಬೆಳಗಾವಿ ಅದಿವೇಶನದಲ್ಲಿ ಇಷ್ಟೊಂದು ಕಪ್ಪುಹಣ ಎಲ್ಲಿಂದ ಬಂತು? ಎಂಬ ವಿಷಯವಾಗಿ ಆಡಳಿತ, ವಿಪಕ್ಷಗಳ ವಿರುದ್ಧ ವಾಗ್ವಾದವೇ ಜರುಗಿತು. ಪ್ರಸ್ತುತ ಕಪ್ಪುಹಣ ಹೊಂದಿರುವ ಇಬ್ಬರು ಅಧಿಕಾರಿಗಳನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government suspends 2 officials raided by IT in Bengaluru. one is Cauvery Irrigation Corporation's MD chikkarayappa, another one person is Chief Officer of the National Highway Development Corporation chandrakanth.
Please Wait while comments are loading...