ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ, ಊಬರ್ ಪ್ರಯಾಣಿಕರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!

By Mahesh
|
Google Oneindia Kannada News

Recommended Video

ಓಲಾ ಉಬರ್ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರದಿಂದ ಶುಭ ಸುದ್ದಿ | Oneindia Kannada

ಬೆಂಗಳೂರು, ಜುಲೈ 16: ನಗರದಲ್ಲಿ ಸಂಚರಿಸುವ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿ ಗಳಿಗೆ ಸಾರಿಗೆ ಇಲಾಖೆಯು ಕನಿಷ್ಠ ಮತ್ತು ಗರಿಷ್ಠ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಪರಿಷ್ಕೃತ ದರ ಪಟ್ಟಿಯಂತೆ ಕನಿಷ್ಟ ಪ್ರಯಾಣ ದರ ಇಳಿಕೆಯಾಗಲಿದ್ದು, ಓಲಾ- ಊಬರ್ ಪ್ರಯಾಣಿಕರಿಗೆ ಒಳ್ಳೆ ಸುದ್ದಿ ಎನ್ನಬಹುದು.

ನಗರದಲ್ಲಿ ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಟ್ಯಾಕ್ಸಿ ಸೇವಾ ಕಂಪನಿಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂದು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ನೀಡಿದ್ದರು. ಅಂತೆಯೇ ಕಂಪನಿಗಳು ಕಡಿಮೆ ಕಮಿಷನ್ ನೀಡುತ್ತಿವೆ ಎಂದು ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಆರೋಪಿಸಿದ್ದರು.

ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ

ಸಾರಿಗೆ ಇಲಾಖೆ ಸಚಿವರು ಟ್ಯಾಕ್ಸಿಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ನಿಗದಿಗೆ ಸಾರಿಗೆ ಆಯುಕ್ತರಿಗೆ ಸೂಚಿಸಿತ್ತು. ಇದಾದ ಬಳಿಕ ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳ ಕನಿಷ್ಟ ಪ್ರಯಾಣ ದರವನ್ನು ಸಾರಿಗೆ ಇಲಾಖೆಯು ನಿಗದಿಪಡಿಸಿತ್ತು.

ಪ್ರಯಾಣ ದರ ನಿಗದಿ ಹೇಗೆ?

ಪ್ರಯಾಣ ದರ ನಿಗದಿ ಹೇಗೆ?

ಕಾರುಗಳ ಮಾರುಕಟ್ಟೆ ಬೆಲೆ ಆಧಾರದ ಮೇಲೆ, ಪ್ರಯಾಣ ದರವನ್ನು ಎ,ಬಿ,ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ನಾಲ್ಕು ಕಿಲೋ ಮೀಟರ್ ಪ್ರಯಾಣಕ್ಕೆ ಕನಿಷ್ಟ 44 ರು ನಿಂದ 80 ರು ತನಕ ಬೆಲೆ ನಿಗದಿಯಾಗಿತ್ತು. ಈಗ ಕನಿಷ್ಟ ಪ್ರಯಾಣ ದರವನ್ನು 44 ರುನಿಂದ 40 ರುಗಳಿಗೆ ಇಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೇರಿಕೆಯಿಂದ ಇಂಧನ ಬೆಲೆ ಏರಿಕೆಯಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಕ್ಯಾಬ್ ನಿರ್ವಾಹಕರಿಗೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ

ಕ್ಯಾಬ್ ನಿರ್ವಾಹಕರಿಗೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ

ಕ್ಯಾಬ್ ನಿರ್ವಾಹಕರಿಗೆ ರಾಜ್ಯ ಸಾರಿಗೆ ಇಲಾಖೆಗೆ ಪತ್ರ ಕಳಿಸಲಾಗಿದ್ದು, ಹೊಸ ಶುಲ್ಕ ಜುಲೈ 20 ರಿಂದ ಜಾರಿಗೆ ಬರಲಿದೆ. ವರದಿಗಳ ಪ್ರಕಾರ ನಿಯಮಿತ ಏರ್ ಕಂಡೀಷನರ್ ಟ್ಯಾಕ್ಸಿ ಶುಲ್ಕದ ಆಧಾರದ ಮೇಲೆ ಹೊಸ ಶುಲ್ಕವನ್ನು ನಿಗದಿಪಡಿಸಲಾಗುವುದು. ನಿರ್ವಾಹಕರು ಮತ್ತು ಇಲಾಖೆ ಅಧಿಕಾರಿಗಳ ಮಧ್ಯೆ ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತದೆ.

ಕ್ಯಾಬ್ ಪ್ರಯಾಣ ದರ ಏರಿಕೆಯಾಗಿತ್ತು

ಕ್ಯಾಬ್ ಪ್ರಯಾಣ ದರ ಏರಿಕೆಯಾಗಿತ್ತು

ಸಣ್ಣ ಕಾರುಗಳ ಪ್ರಯಾಣ ದರ ಕನಿಷ್ಟ 14.50 ರು ಹಾಗೂ ಐಷಾರಾಮಿ ಕಾರುಗಳ ಪ್ರಯಾಣ ದರ 19.50 ರು ನಷ್ಟಿತ್ತು. 2013ರ ನಂತರ ಟ್ಯಾಕ್ಸಿ ಪ್ರಯಾಣ ದರವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿರಲಿಲ್ಲ.

ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ, ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. ಅಲ್ಲದೆ ಟ್ಯಾಕ್ಸಿ ಚಾಲಕರಿಗೂ ಸರಿಯಾದ ಕಮಿಷನ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿತ್ತು. ಜತೆಗೆ ಇಂಧನ ಬೆಲೆ ಏರಿಕೆಯನ್ನು ಪರಿಗಣಿಸಿ, ಸಾರಿಗೆ ಇಲಾಖೆ ಅಧಿಕಾರಿಗಳು ನೀಡಿದ ವರದಿ ಅನುಸರಿಸಿ ಅಂದಿನ ಸಾರಿಗೆ ಸಚಿವ ಎಚ್ಎಂ ರೇವಣ್ಣ ಅವರು ನಾಲ್ಕು ಭಾಗವಾಗಿ ದರ ನಿಗದಿ ಮಾಡಿದ್ದರು.

 ಎ,ಬಿ,ಸಿ ಮತ್ತು ಡಿ ನಾಲ್ಕು ಮಾದರಿಯ ದರ ನಿಗದಿ

ಎ,ಬಿ,ಸಿ ಮತ್ತು ಡಿ ನಾಲ್ಕು ಮಾದರಿಯ ದರ ನಿಗದಿ

ವರ್ಗ- ವಾಹನದ ಮೌಲ್ಯ -4 ಕಿ.ಮೀ ಕನಿಷ್ಟ ದರ- 4 ಕಿ.ಮೀ ನಂತರ ಪ್ರತಿ 1 ಕಿ.ಮೀಗೆ ದರ
ಡಿ ವರ್ಗ:5 ಲಕ್ಷ ರು ತನಕ- 40 ರುಪಾಯಿ ಕನಿಷ್ಟ- 11 ರುಪಾಯಿಯಿಂದ ಗರಿಷ್ಠ 22 ರುಪಾಯಿ
ಸಿ ವರ್ಗ-5 ಲಕ್ಷ ರು ನಿಂದ 10 ಲಕ್ಷ ರು-48 ರುಪಾಯಿ ಕನಿಷ್ಟ- 12 ರುಪಾಯಿಯಿಂದ ಗರಿಷ್ಠ 24 ರುಪಾಯಿ
ಬಿ ವರ್ಗ-10 ಲಕ್ಷ ರು ನಿಂದ 16 ಲಕ್ಷ ರು-58 ರುಪಾಯಿ-16 ರುಪಾಯಿಯಿಂದ ಗರಿಷ್ಠ 34 ರುಪಾಯಿ
ಎ ವರ್ಗ- 16 ಲಕ್ಷ ರೂಪಾಯಿ ಮೇಲ್ಪಟ್ಟು- 84 ರುಪಾಯಿ ಕನಿಷ್ಟ- 20 ರುಪಾಯಿಯಿಂದ ಗರಿಷ್ಠ 45 ರುಪಾಯಿ

English summary
Karnataka Government released revised minimum fare chart for Ola, Uber and other mobile based taxi services across the stare. Here is the Taxi cab full Tariff list which will be in effective from July 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X