ಓಲಾ, ಉಬರ್ ಟ್ಯಾಕ್ಸಿ ಪ್ರಯಾಣ ದರ ಪಟ್ಟಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಜನವರಿ 12: ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಉಬರ್ ಸೇರಿದಂತೆ ಹಲವು ಕಂಪನಿಗಳ ಟ್ಯಾಕ್ಸಿಗಳ ಕನಿಷ್ಟ ಪ್ರಯಾಣ ದರವನ್ನು ಸಾರಿಗೆ ಇಲಾಖೆಯು ನಿಗದಿ ಮಾಡಿದ್ದು, ಪೂರ್ಣಪಟ್ಟಿ ಪ್ರಕಟಿಸಲಾಗಿದೆ.

ಕಾರುಗಳ ಮಾರುಕಟ್ಟೆ ಬೆಲೆ ಆಧಾರದ ಮೇಲೆ, ಪ್ರಯಾಣ ದರವನ್ನು ಎ,ಬಿ,ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ನಾಲ್ಕು ಕಿಲೋ ಮೀಟರ್ ಪ್ರಯಾಣಕ್ಕೆ ಕನಿಷ್ಟ 44 ರು ನಿಂದ 80 ರು ತನಕ ಬೆಲೆ ನಿಗದಿಯಾಗಿದೆ.

Karnataka Government releases Fare Chart for Ola, Uber

ಈ ಹಿಂದೆ ಸಣ್ಣ ಕಾರುಗಳ ಪ್ರಯಾಣ ದರ ಕನಿಷ್ಟ 14.50 ರು ಹಾಗೂ ಐಷಾರಾಮಿ ಕಾರುಗಳ ಪ್ರಯಾಣ ದರ 19.50 ರು ನಷ್ಟಿತ್ತು. 2013ರ ನಂತರ ಟ್ಯಾಕ್ಸಿ ಪ್ರಯಾಣ ದರವನ್ನು ಸಾರಿಗೆ ಇಲಾಖೆ ಪರಿಷ್ಕರಿಸಿರಲಿಲ್ಲ.

ಟ್ಯಾಕ್ಸಿ ಪ್ರಯಾಣ ದರ ಪರಿಷ್ಕರಣೆ ವಿವರ :

ವರ್ಗ ವಾಹನದ ಮೌಲ್ಯ 4 ಕಿ.ಮೀ ಕನಿಷ್ಟ ದರ 4 ಕಿ.ಮೀ ನಂತರ ಪ್ರತಿ 1 ಕಿ.ಮೀಗೆ ದರ
ಡಿ ವರ್ಗ
5 ಲಕ್ಷ ರು ತನಕ
44 ರುಪಾಯಿ
ಕನಿಷ್ಟ 11 ರುಪಾಯಿಯಿಂದ ಗರಿಷ್ಠ 22 ರುಪಾಯಿ
ಸಿ ವರ್ಗ
5 ಲಕ್ಷ ರು ನಿಂದ 10 ಲಕ್ಷ ರು 52 ರುಪಾಯಿ
ಕನಿಷ್ಟ 12 ರುಪಾಯಿಯಿಂದ ಗರಿಷ್ಠ 24 ರುಪಾಯಿ
ಬಿ ವರ್ಗ
10 ಲಕ್ಷ ರು ನಿಂದ 16 ಲಕ್ಷ ರು
68 ರುಪಾಯಿ
ಕನಿಷ್ಟ 16 ರುಪಾಯಿಯಿಂದ ಗರಿಷ್ಠ 34 ರುಪಾಯಿ
ಎ ವರ್ಗ
16 ಲಕ್ಷ ರೂಪಾಯಿ ಮೇಲ್ಪಟ್ಟು
88 ರುಪಾಯಿ
ಕನಿಷ್ಟ 20 ರುಪಾಯಿಯಿಂದ ಗರಿಷ್ಠ 45 ರುಪಾಯಿ

ದರ ಏರಿಕೆ ಏಕೆ? : ಟ್ಯಾಕ್ಸಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ, ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದೆ. ಅಲ್ಲದೆ ಟ್ಯಾಕ್ಸಿ ಚಾಲಕರಿಗೂ ಸರಿಯಾದ ಕಮಿಷನ್ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿತ್ತು.

ಓಲಾ-ಊಬರ್ ಟ್ಯಾಕ್ಸಿಗಳಿಗೆ ಸರ್ಕಾರದಿಂದಲೇ ರೇಟ್ ಫಿಕ್ಸ್!

ಈ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು, ಸಚಿವ ಎಚ್. ಎಂ ರೇವಣ್ಣ ಅವರಿಗೆ ವರದಿ ಸಲ್ಲಿಸಿ, ದರ ಪಟ್ಟಿ ನಿಗದಿ ಮಾಡಿದ್ದರು. ಹೊಸ ದರ ಪಟ್ಟಿಗೆ ಸಾರಿಗೆ ಸಚಿವರಿಂದ ಅನುಮತಿ ಸಿಕ್ಕ ಬಳಿಕ ಹೊಸ ದರ ಪಟ್ಟಿ ಪ್ರಕಟಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Government released minimum fare chart for Ola, Uber and other mobile based taxi services across the stare. Here is the Taxi cab full Tariff list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ