ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮನೆ ಕೊಳ್ಳುವವರಿಗೆ ಸರಕಾರದ ಸಿಹಿಸುದ್ದಿ

|
Google Oneindia Kannada News

ಬೆಂಗಳೂರು. ಜುಲೈ 6: ಮಹಾನಗರದಲ್ಲೊಂದು ಸ್ವಂತ ಮನೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಆದರೆ ಬೆಂಗಳೂರಿನಂಥ ಮಹಾನಗರದಲ್ಲಿ ಅದು ಸಾಧ್ಯವಾಗಬೇಕೆಂದರೆ ಸುಲಭದ ಮಾತಲ್ಲ.

ಇಲ್ಲಿನ ಗಗನಚುಂಬಿ ಕಟ್ಟಡವನ್ನೂ ಮೀರಿಸುವಷ್ಟು ಎತ್ತರಕ್ಕೇರಿದ ಇಲ್ಲಿನ ಸೈಟ್ ಮತ್ತು ಫ್ಲ್ಯಾಟ್ ಗಳ ಬೆಲೆಯನ್ನು ಕೇಳಿದರೆ ಆ ಕನಸಿಗೆ ತಿಲಾಂಜಲಿ ಬಿಟ್ಟು ಬಾಡಿಗೆ ಮನೆಯಲ್ಲೇ ದಿನದೂಡಬೇಕಾದ ಪರಿಸ್ಥಿತಿ ಹಲವರಿಗಿದೆ. ಹೀಗಿರುವಾಗ ಮನೆ ಕೊಳ್ಳುವವರಿಗಾಗಿ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ.

ಬಹುದಿನದಿಂದ ಚರ್ಚೆಯಾಗುತ್ತಿರುವ ರೇರಾ (Real Estate Regulation Act) ನಿಯಮ-2016ಕ್ಕೆ ನಿಯಮಾವಳಿ ರೂಪಿಸಲು ರಾಜ್ಯ ಸಚಿವ ಸಂಪುಟ ನಿನ್ನೆ(ಜು.5) ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಮನೆ ಖರೀದಿಸುವವರಿಂದ ಹಣ ಪಡೆದು, ಕಟ್ಟಡ ನಿರ್ಮಾಣದಲ್ಲಿ ವಿಳಂಬ ಧೋರಣೆ ತೋರುತ್ತಿದ್ದ ಬಿಲ್ಡರ್ ಗಳಿಗೆ ಶಾಸ್ತಿಯಾಗಲಿದೆ.

ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಿಸಿ ಕೊಡದಿರುವುದು, ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದು, ಅಥವಾ ಒಂದು ಯೋಜನೆಯನ್ನು ಅರ್ಧಕ್ಕೇ ಕೈ ಬಿಟ್ಟು ಖರೀದಿ ಮಾಡುವವರಿಗೆ ತೊಂದರೆ ನೀಡುವುದನ್ನು ತಪ್ಪಿಸುವುದಕ್ಕಾಗಿಯೇ ರೇರಾ ಜಾರಿಗೆ ಬರುತ್ತಿದೆ.

ರಾಜ್ಯ ಸರ್ಕಾರದ 'ರಿಯಲ್ ಎಸ್ಟೇಟ್ ಕಾಯ್ದೆ' ಶೀಘ್ರವೇ ಅನುಷ್ಠಾನ?ರಾಜ್ಯ ಸರ್ಕಾರದ 'ರಿಯಲ್ ಎಸ್ಟೇಟ್ ಕಾಯ್ದೆ' ಶೀಘ್ರವೇ ಅನುಷ್ಠಾನ?

ನಿಯಮಾವಳಿ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ರೇರಾ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ. ಬೆಂಗಳೂರಿನಂಥ ಮಹಾನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ಕನಸಿಗೆ ರೇರಾ ಜಾರಿಗೆ ಬರುವುದು ಖಚಿತ ಎಂಬ ಸುದ್ದಿಯಿಂದಾಗಿ ರೆಕ್ಕೆ ಪುಕ್ಕ ಬಂದಿದೆ.

ರಿಯಲ್ ಎಸ್ಟೇಟ್ ಹೂಡಿಕೆಗೆ ಬೆಸ್ಟ್ ನಗರಗಳ ಪಟ್ಟಿಯಲ್ಲಿ ಬೆಂಗಳೂರುರಿಯಲ್ ಎಸ್ಟೇಟ್ ಹೂಡಿಕೆಗೆ ಬೆಸ್ಟ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು

ಏನಿದು ರೇರಾ? ಕಾಯ್ದೆಯಲ್ಲೇನಿದೆ?

ಏನಿದು ರೇರಾ? ಕಾಯ್ದೆಯಲ್ಲೇನಿದೆ?

ಈ ಕಾಯ್ದೆಯಡಿಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಏಜೆಂಟ್ ಗಳ ಮತ್ತು ಮನೆ ನಿರ್ಮಾಣ ಯೋಜನೆಗಳ ನೋಂದಣಿಯನ್ನು ಕಡ್ಡಾಯವಾಗಿ ಮಾಡಬೇಕು. ಯೋಜನೆ ಪ್ರಾರಂಭವಾಗುವ ಮತ್ತು ಮುಕ್ತಾಯವಾಗುವ ದಿನಾಂಕವನ್ನು ಮೊದಲೇ ಅಂದರೆ ನೋಂದಣಿ ವೇಳೆಯಲ್ಲಿಯೇ ಘೋಷಿಸಬೇಕು. ಅಕಸ್ಮಾತ್ ಘೋಷಿಸಿದ ಅವಧಿಯೊಳಗೆ ಕಟ್ಟಡ ನಿರ್ಮಾಣವಾಗದಿದ್ದಲ್ಲಿ ಬಿಲ್ಡರ್ ಗಳು ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ! ರೇರಾ ಪ್ರಮಾಣ ಪತ್ರ, ಹಂಚಿಕೆ ಪತ್ರದ ಪ್ರಸ್ತಾವನೆ, ಯೋಜನೆಯ ದಾಖಲೆ ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನೂ ರೇರಾ ಪ್ರಾಧಿಕಾರಕ್ಕೆ ನೀಡಬೇಕು.

ಶಿಕ್ಷೆಯೇನು?

ಶಿಕ್ಷೆಯೇನು?

ಅಗತ್ಯ ದಾಖಲೆಗಳಲ್ಲಿ ಯಾವುದೇ ದಾಲೆಗಳನ್ನು ನೀಡದೆ ಇದ್ದಲ್ಲಿ, ಅಥವಾ ರೇರಾ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಅಂಥ ಏಜೆಂಟ್ ಗಳಿಗೆ ಮತ್ತು ಡೆವಲಪರ್ಸ್ ಗಳಿಗೆ ನಿರ್ದಿಷ್ಟ ಯೋಜನೆಯ ಶೇ.10% ರಷ್ಟು ದಂಡ ಮತ್ತು ತಲಾ 1 ಮತ್ತು 3 ಮೂರು ವರ್ಷ ಜಅಯಲು ಶಿಕ್ಷೆ ವಿಧಿಸಲಾಗುತ್ತದೆ.

ಯಾರಿಗೆ ಅನ್ವಯ?

ಯಾರಿಗೆ ಅನ್ವಯ?

ಕನಿಷ್ಠ 500 ಚ.ಮೀ. ವಿಸ್ತೀರ್ಣ ಅಥವಾ 8 ಫ್ಲಾಟ್ ಹೊಂದಿರುವ ಎಲ್ಲ ವಸತಿ ಯೋಜನೆಗಳಿಗೂ ರೇರಾ ಅನ್ವಯವಾಗಲಿದೆ. ಕಟ್ಟಡವನ್ನು ಈಗಾಗಲೇ ಶೇ.60ಕ್ಕಿಂತ ಹೆಚ್ಚು ಕಟ್ಟಿ ಮುಗಿದಿದ್ದರೆ ಅಂಥ ಕಟ್ಟಡಗಳಿಗೆ ವಿನಾಯ್ತಿ ನೀಡಲಾಗಿದೆ. ಈಗಾಗಲೇ ಆರಂಭಗೊಂಡಿರುವ ಯೋಜನೆಗಳಿಗೆ, ಇನ್ನು ಮುಂದೆ ಆರಂಭವಾಗುವ ಎಲ್ಲಾ ಯೋಜನೆಗಳಿಗೂ ರೇರಾ ಅನ್ವಯಿಸಲಿದೆ.

ರಾಜ್ಯದಲ್ಲೇ ವಿಳಂಬ

ರಾಜ್ಯದಲ್ಲೇ ವಿಳಂಬ

ಕೇಂದ್ರ ಸರ್ಕಾರ 2016 ರಲ್ಲೇ ರೇರಾ ಕಾಯ್ದೆಗೆ ಸಂಸತ್ತಿನಲ್ಲಿ ಅನುಮತಿ ಪಡೆದಿತ್ತು. ಸಂಸತ್ತಿನಲ್ಲಿ ಅಂಗೀಕಾರಗೊಂಡ ಮೂರರಿಂದ ಆರು ತಿಂಗಳಿನಲ್ಲಿ ಎಲ್ಲಾ ರಾಜ್ಯಗಳೂ ರೇರಾವನ್ನು ತಮ್ಮ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತೆ ಕೇಂದ್ರ ಹೇಳಿತ್ತು. ಈಗಾಗಲೇ ಗುಜರಾತ್, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ರಾಜ್ಯದಲ್ಲಿ ಇದು ಜಾರಿಗೆ ಬಂದಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇದರ ಜಾರಿಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಇದೀಗ ಒಪ್ಪಿಗೆ ದೊರೆತಿದ್ದು, ರೇರಾ ಅಂಗೀಕರಿಸಿದ 14 ನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ.

English summary
The Karnataka government passed the RERA (Real Estate Regulation and Development) Act 2016 on July 5th. RERA protects home-buyers as well as help boost investments in the real estate industry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X