ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ಸರ್ಕಾರ ವಿರೋಧ

By Manjunatha
|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ನಿನ್ನೆ ಪ್ರಕಟವಾಗಿರುವ ಸುಪ್ರಿಂ ತೀರ್ಪು ರಾಜ್ಯದ ಜನರಿಗೆ ಅಲ್ಪ ಸಮಾಧಾನ ತಂದಿದೆಯಾದರೂ. ನದಿ ನೀರು ನಿರ್ವಹಣಾ ಮಂಡಳಿ ರಚನೆ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ.

ಸುಪ್ರಿಂಕೋರ್ಟ್‌ ನಿನ್ನೆಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಈ ಅಧಿಕಾರವನ್ನು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿತ್ತು. ಕೇಂದ್ರವು ಕಾವೇರಿ ನಿರ್ವಹಣಾ ಸಮಿತಿ ರಚನೆ ಬಗ್ಗೆ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ನಿರ್ವಹಣಾ ತಂಡದ ರಚನೆಗೆ ವಿರೋಧ ವ್ಯಕ್ತಪಡಿಸಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು? ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೇಂದ್ರದ ಅಂಗಳದಲ್ಲಿ ಚೆಂಡು, ಮುಂದೇನು?

ನಿರ್ವಹಣಾ ಕಾವೇರಿ ನದಿ ಪಾತ್ರದ ಎಲ್ಲಾ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸುಪ್ರೀಂ ತೀರ್ಪಿನ ಬಗ್ಗೆ ಕೇಂದ್ರವು ನಿರ್ಣಯ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ.

Karnataka government oppose to forming of cauvery executive Board

ಕಾವೇರಿ ವಿವಾದದಲ್ಲಿ ಈಗಾಗಲೇ ಮೇಲುಸ್ತುವರಿ ಸಮಿತಿ ಇದೆ. ನಿರ್ವಹಣಾ ಮಂಡಳಿ ರಚನೆ ಮಾಡ ಬೇಕೆಂದು ತೀರ್ಪಿನಲ್ಲಿ ಹೇಳಿರುವುದು ನಿಜ. ಆದರೆ ಯಾವುದೇ ಕಾಲಮಿತಿ ಹಾಕಿಲ್ಲ. ಸುಪ್ರೀಂಕೋರ್ಟ್ ಕಾವೇರಿ ವಿವಾದಲ್ಲಿ ನಾವು ಸಲ್ಲಿಸಿದ್ದ ಮನವಿಯಲ್ಲಿ ಭಾಗಶಃ ಅಂಶಗಳನ್ನು ಒಪ್ಪಿದೆ. ನಾವು ಕಾವೇರಿ ತೀರ್ಪನ್ನು ಸ್ವಾಗತಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕಾವೇರಿ ನಿರ್ವಹಣಾ ಸಮಿತಿ ರಚನೆಯಾದರೆ ಕೆಆರ್‌ಎಸ್‌ ಸೇರಿದಂತೆ ಹಲವು ಅಣೆಕಟ್ಟೆಗಳ ಮೇಲಿನ ಸರ್ಕಾರದ ಹಿಡಿತ ಕೈತಪ್ಪಲಿದೆ. ಹೀಗಾಗಿ ಈ ನಿರ್ಣಯವನ್ನು ರಾಜ್ಯವು ವಿರೋಧಿಸುತ್ತಿದೆ.

English summary
CM Siddaramaiah strongly oppose to forming of Karnataka government oppose to forming of cauvery executive Board. He said central government should consult all cauvery catchment area states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X