ಜನತಾ ಥಿಯೇಟರ್ ಇರ್ಲಿ, ಮೊದ್ಲು ಟಿಕೆಟ್ ರೇಟ್ ಫಿಕ್ಸ್ ಮಾಡಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಏಕರೂಪದ ಟಿಕೆಟ್ ದರ ನಿಗದಿಪಡಿಸಲು ಆಗ್ರಹಿಸಿ ಚಿತ್ರಕರ್ಮಿ ದಯಾಳ್ ಪದ್ಮನಾಭನ್ ಹಾಗೂ ಸಮಾನ ಮನಸ್ಕರು ಆನ್ ಲೈನ್ ಅರ್ಜಿ ಹಾಕಿರುವುದು ಗೊತ್ತಿರಬಹುದು. ರಾಜ್ಯದಲ್ಲಿ ಚಲನಚಿತ್ರ ನೀತಿ ಪರಿಷ್ಕರಿಸುವ ಬಗ್ಗೆಯೂ ತಾನು ಚಿಂತನೆ ನಡೆದಿದೆ. ಹೊಸ ನೀತಿ ಜಾರಿಗೊಂಡರೆ ಮಲ್ಟಿಪ್ಲೆಕ್ಸ್ ನಲ್ಲಿ 120 ರು ಗೆ ಸಿನಿಮಾ ನೋಡ್ಬಹುದು.

ರಾಜ್ಯದಲ್ಲಿನ ಎಲ್ಲಾ ಜನಸಾಮಾನ್ಯರೂ ಚಲನ ಚಿತ್ರವನ್ನು ವೀಕ್ಷಿಸಲು ಅನುಕೂಲವಾಗುವಂತೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿನ ಟಿಕೆಟ್ ದರವನ್ನು ಕಡಿಮೆ ಮಾಡುವ ಸಂಬಂಧ ಸರಕಾರ ಚಿಂತನೆ ನಡೆಸಿದೆ. [ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರ 120ರುಗೆ ನಿಗದಿ ಪಡಿಸಿ]

Karnataka government may plan to cap movie ticket prices at Rs 120 Multiplex

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದು ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ ಹಾಗೂ ಹಜ್ ಖಾತೆ ಸಚಿವ ರೋಷನ್ ಬೇಗ್ ಮತ್ತೊಮ್ಮೆ ಹೇಳಿದ್ದಾರೆ. ಆದರೆ, ಈ ಹೇಳಿಕೆ ನೀಡಿ ವರ್ಷ ಕಳೆದರೂ ನಿಯಮ ಕಾರ್ಯರೂಪಕ್ಕೆ ತರಲು ಆಗುತ್ತಿಲ್ಲ.

ರಾಜ್ಯದಲ್ಲಿ ಚಲನಚಿತ್ರ ನೀತಿ ಪರಿಷ್ಕರಿಸುವ ಬಗ್ಗೆಯೂ ತಾನು ಚಿಂತನೆ ನಡೆಸಿದೆ. ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿನ ಚಲನಚಿತ್ರ ನೀತಿಯನ್ನು ಅಧ್ಯಯನ ಮಾಡಿ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಸ್ಥಳೀಯ ಭಾಷಾ ಚಲನಚಿತ್ರ ವೀಕ್ಷಣೆ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಗೊಂದು 200-300 ಆಸನ ಸಾಮರ್ಥ್ಯದ 'ಜನತಾ ಥಿಯೇಟರ್' ಸ್ಥಾಪಿಸುವ ಉದ್ದೇಶ ಸರಕಾರದ ಮುಂದಿದೆ ಎಂದು ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಟಿಕೆಟ್ ದರ ನಿಗದಿಯಾಗಿದೆ ಎಂದು ಟಿಎ ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಒಂದು ವರದಿ ತಯಾರಿಸಿದೆ. ಕನ್ನಡ ಪ್ರೇಕ್ಷಕರ ಬೇಡಿಕೆಗಳು ಇದರಲ್ಲಿವೆ. ಈ ವರದಿ ಜೊತೆಗೆ ಕನ್ನಡ ಚಿತ್ರರಂಗದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾರ್ಚ್ 11ರಂದು ಭೇಟಿ ಮಾಡುವ ಸಾಧ್ಯತೆಯಿದೆ. ರಾಜ್ಯ ಬಜೆಟ್ ಮಂಡನೆಗೂ ಮುನ್ನ ಪೂರ್ವಭಾವಿ ಸಭೆಯಲ್ಲೇ ಈ ಬಗ್ಗೆ ತೀರ್ಮಾನ ಹೊರ ಬೀಳುವ ಸಾಧ್ಯತೆಯೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka government is likely to fix the movie tickets in multiplexes to Rs 120 according media report. Karnataka film policy likely to be revised soon.Karnataka film Industry will soon meet Chief minister of Karnataka, Siddaramaiah for pre-budget meeting on Friday, March 11.
Please Wait while comments are loading...