ಬೆಂಗಳೂರಿನ ಪ್ರತಿ ಠಾಣೆಗೂ ಪಿಂಕ್ ಹೊಯ್ಸಳ ವಾಹನ: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 11: ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಯಂತ್ರಣಕ್ಕೆ ತರಲು ನಗರದ ಪ್ರತಿ ಪೊಲೀಸ್ ಠಾಣೆಯಲ್ಲೂ ಪಿಂಕ್ ಹೊಯ್ಸಳ ವಾಹನವನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಪಿಂಕ್ ಹೊಯ್ಸಳ: ಮಹಿಳಾ ರಕ್ಷಣೆಯತ್ತ ದಿಟ್ಟ ಹೆಜ್ಜೆ

ಬೆಂಗಳೂರಿನಲ್ಲಿ ನಡೆದ ಹಿರಿಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ 110 ಪೊಲೀಸ್ ಠಾಣೆಗಳಿಗೂ ಇನ್ನೊಂದು ವಾರದಲ್ಲಿ ಪಿಂಕ್ ಹೊಯ್ಸಳ ವಾಹನ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

Karnataka government decided to arrange Pink Hoysala vehicles in all police stations of Bengaluru

ರಾಜಧಾನಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಯಂತ್ರಣಕ್ಕೆ ತರಲು ಕರ್ನಾಟಕ ಸರ್ಕಾರವು ಏಪ್ರಿಲ್ ತಿಂಗಳಿನಲ್ಲಿ ಆರಂಭಿಸಿದ ಸುರಕ್ಷಾ ಆಪ್ ಮತ್ತು 'ಪಿಂಕ್ ಹೊಯ್ಸಳ' ವಾಹನ ಸೌಲಭ್ಯದ ಕುರಿತು ಬೆಂಗಳೂರಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To control harassment against women, The Karnataka Government has introduced Pink Hoysala vehicles and also Suraksha app in the month of April of this year. Now government has decided to arrange pink hoysala vehicles in all 110 police stations of Bengaluru city, Karnataka chief minister Siddaramaiah told.
Please Wait while comments are loading...