ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆ, ಕ್ಲಿನಿಕ್ ತೆರೆಯಲು ಬೇಕಿದ್ದ ಟ್ರೇಡ್ ಲೈಸನ್ಸ್ ರದ್ದು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23: ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳನ್ನು ಆರಂಭಿಸಲು ಅತ್ಯಗತ್ಯವಾಗಿ ಬೇಕಿದ್ದ ಟ್ರೇಡ್ ಲೈಸನ್ಸ್ ಅನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳನ್ನು ಆರಂಭಿಸಬೇಕಾದರೆ ಸಂಬಂಧಪಟ್ಟ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯ್ತಿ ಹಾಗೂ ಮಹಾನಗರ ಪಾಲಿಕೆಗಳಿಂದ ಟ್ರೇಡ್ ಲೈಸನ್ಸ್ ಪಡೆಯಬೇಕಿತ್ತು.

Karnataka Government abolishes trade license mandatory for private hospitals and clinics

ಇದು ಬಲು ಅಲೆದಾಟದ ಕೆಲಸವಾಗಿದ್ದು, ಅಪಾರ ಪ್ರಮಾಣದಲ್ಲಿ ದುಡ್ಡೂ ಖರ್ಚಾಗುತ್ತಿತ್ತು.

ಇತ್ತೀಚೆಗೆ, ಖಾಸಗಿ ಆಸ್ಪತ್ರೆ ಮಸೂದೆಯನ್ನು ಜಾರಿಗೊಳಿಸುವ ಸಂಬಂಧ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಪ್ರತಿನಿಧಿಗಳೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದಾಗ, ಟ್ರೇಡ್ ಲೈಸನ್ಸ್ ನಿಷೇಧಿಸುವಂತೆ ರಾಜ್ಯ ಸರ್ಕಾರವನ್ನು ಖಾಸಗಿ ಆಸ್ಪತ್ರೆಗಳ ಮಾಲೀಕರು ಒತ್ತಾಯಿಸಿದ್ದರು.

ಅದರಂತೆ, ರಾಜ್ಯ ಸರ್ಕಾರ ಇದೀಗ ಅದನ್ನು ರದ್ದುಗೊಳಿಸಿದೆ. ಸೆ. 23ರ ಸಂಜೆ ವೇಳೆ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.

English summary
The Karnataka State Government has abolished Trade License for which are mandatory to start new private medical hospitals and clinics, says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X