ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಬರುವ ಮುಂಚೆ ಅಭಿವೃದ್ಧಿಯೇ ಆಗಿರಲಿಲ್ಲವಾ : ರಾಹುಲ್ ಪ್ರಶ್ನೆ

By Manjunatha
|
Google Oneindia Kannada News

ಬೆಂಗಳೂರು, ಮೇ 09: ಮೋದಿ ಅವರು ಬರುವ ಮುಂಚೆ ಯಾರೂ ಏನನ್ನೂ ಮಾಡಿಯೇ ಇಲ್ಲವಾ, ಮೋದಿ ಬರುವ ಮುಂಚೆಯೇ ಬೆಂಗಳೂರು ಐಟಿ ಹಬ್ ಆಗಿತ್ತು, ಸಿಲಿಕಾನ್ ಸಿಟಿ ಆಗಿತ್ತು ಎಂದು ರಾಹುಲ್ ಗಾಂಧಿ ಆಕ್ರೋಶದಿಂದ ನುಡಿದರು.

ಶಿವಾಜಿನಗರದಲ್ಲಿ ಆಯೋಜಿಸಿದ್ದ ಬೃಹತ್ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಅವರು ಮ್ಯಾಜಿಕ್ ಮಾಡಿ ಬೆಂಗಳೂರನ್ನು ಕಟ್ಟಲಿಲ್ಲ, ಈ ನಗರವನ್ನು ಕಟ್ಟಿದವರು ಇಲ್ಲಿನ ಜನ ಆದರೆ ಮೋದಿ ಅವರು '7೦ ವರ್ಷದಿಂದ ಏನೂ ಕೆಲಸವೇ ಆಗಿಲ್ಲ' ಎನ್ನುವ ಮೂಲಕ ಇಲ್ಲಿನ ಜನರ ಹಿರಿಯರನ್ನು ಅವಮಾನಿಸಿದ್ದಾರೆ ಎಂದು ರಾಹುಲ್ ಹರಿಹಾಯ್ದರು.

ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ

ಇಂದು ಸ್ವಲ್ಪ ಆಕ್ರೋಶದಿಂದಲೇ ಮಾತನಾಡಿದ ರಾಹುಲ್ ಗಾಂಧಿ ಅವರು, ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಅವರಿಗೆ ಮೋದಿ ಅವಮಾನ ಮಾಡಿದ್ದಾರೆ. ನಗರವನ್ನು ಕಟ್ಟಿದ ಇಲ್ಲಿನ ಜನರಿಗೆ ಮೋದಿ ಅವಮಾನ ಮಾಡಿದ್ದಾರೆ. ಇಲ್ಲಿನ ಜನ ರಾಜ್ಯವನ್ನು ಕಟ್ಟಿದರು ಕಾಂಗ್ರೆಸ್ ಅವರಿಗೆ ಸಹಾಯ ಮಾಡಿತಷ್ಟೆ ಎಂದರು ರಾಹುಲ್ ಗಾಂಧಿ.

ಯಡಿಯೂರಪ್ಪ ಬಗ್ಗೆ ಅಮಿತ್ ಶಾ ಒಮ್ಮೆ ಸತ್ಯ ಹೇಳಿದ್ದಾರೆ : ರಾಹುಲ್ಯಡಿಯೂರಪ್ಪ ಬಗ್ಗೆ ಅಮಿತ್ ಶಾ ಒಮ್ಮೆ ಸತ್ಯ ಹೇಳಿದ್ದಾರೆ : ರಾಹುಲ್

ಮೋದಿ ಅವರು ಹೋದಲ್ಲೆಲ್ಲಾ ಬಸವಣ್ಣ ಅವರ ಮುರ್ತಿಗೆ ಕೈ ಮುಗಿಯುತ್ತಾರೆ ಆದರೆ ಬಾಯಿ ತೆರೆದರೆ ಯಾರ ಮೇಲಾದರೂ ವೈಯಕ್ತಿಕ ದಾಳಿ ನಡೆಸುತ್ತಾರೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಿ ವಿಕೃತ ಸಂತೋಷ ಪಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಹುದ್ದೆಗೆ ಗೌರವ ಕೊಡುತ್ತೇನೆ

ಪ್ರಧಾನಿ ಹುದ್ದೆಗೆ ಗೌರವ ಕೊಡುತ್ತೇನೆ

ಮೋದಿ ಅವರು ನನ್ನನ್ನು ಏನಾದರೂ ಅನ್ನಲಿ ಆದರೆ ನಾನು ಅವರ ಸ್ಥಾನಕ್ಕೆ ಬೆಲೆ ಕೊಡುತ್ತೇನೆ, ಇದೇ ಬಿಜೆಪಿ ಸಂಸ್ಕೃತಿ ಮತ್ತು ಕಾಂಗ್ರೆಸ್‌ ಸಂಸ್ಕೃತಿಗೂ ಇರುವ ವ್ಯತ್ಯಾಸ ನೀವು ಜನರನ್ನು ದ್ವೇಷ ಅಸೂಯೆ ಮೂಲಕ ವಿಭಜಿಸಲು ನೋಡುತ್ತೀರಿ ಕಾಂಗ್ರೆಸ್‌ ಜನರನ್ನು ಒಟ್ಟು ಮಾಡಲು ನೋಡುತ್ತದೆ ಎಂದು ಅವರು ಹೇಳಿದರು.

ಕೋಲಾರದಲ್ಲಿ ರಾಹುಲ್ ಗಾಂಧಿ ಸೈಕಲ್ ಸವಾರಿ ಕೋಲಾರದಲ್ಲಿ ರಾಹುಲ್ ಗಾಂಧಿ ಸೈಕಲ್ ಸವಾರಿ

ದಲಿತರ ಮೇಲಿನ ಹಲ್ಲೆ ಬಗ್ಗೆ ಮಾತೇ ಇಲ್ಲ

ದಲಿತರ ಮೇಲಿನ ಹಲ್ಲೆ ಬಗ್ಗೆ ಮಾತೇ ಇಲ್ಲ

ಅಂಬೇಡ್ಕರ್‌ ಅವರ ಜಪ ಮಾಡುವ ಮೋದಿ ಅವರು, ಜಾತಿಯ ಕಾರಣಗಳಿಗೆ ದಲಿತರ ಮೇಲೆ ಹಲ್ಲೆಗಳಾದಾಗ, ಅಲ್ಪ ಸಂಖ್ಯಾತರ ಹತ್ಯೆಗಳಾದ ತುಟಿ ಸಹ ಬಿಚ್ಚುವುದಿಲ್ಲ ಬದಲಿಗೆ ದಲಿತರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂದು ಅವರು ಆರೋಪಿಸಿದರು.

ರಾಹುಲ್ ಗಾಂಧಿ ಜೊತೆ ಮದುವೆ? ವದಂತಿ ಸುಳ್ಳು ಎಂದ ಅದಿತಿ! ರಾಹುಲ್ ಗಾಂಧಿ ಜೊತೆ ಮದುವೆ? ವದಂತಿ ಸುಳ್ಳು ಎಂದ ಅದಿತಿ!

ಬೆಂಗಳೂರಿನ ಬಗ್ಗೆ ನಕಲಿ ಪ್ರೀತಿ

ಬೆಂಗಳೂರಿನ ಬಗ್ಗೆ ನಕಲಿ ಪ್ರೀತಿ

ಬೆಂಗಳೂರಿನ ಬಗ್ಗೆ ನಕಲಿ ಪ್ರೀತಿ ತೋರಿಸುವ ಮೋದಿ ಅವರು, ಬೆಂಗಳೂರಿನ ಅಭಿವೃದ್ಧಿಗೆ ನೀಡಿರುವುದು ಕೇವಲ 550 ಕೋಟಿ ರೂಪಾಯಿಗಳಷ್ಟೆ ಆದರೆ ಹಿಂದಿನ ಯುಪಿಎ ಸರ್ಕಾರ 10000 ಕೋಟಿ ಅನುದಾನ ನೀಡಿತ್ತು ಎಂದು ರಾಹುಲ್ ಲೆಕ್ಕ ನೀಡಿದರು.

ಸಾವಿರಾರು ಕೋಟಿ ಹಣ ರೆಡ್ಡಿ ತಿಂದಿದ್ದಾರೆ

ಸಾವಿರಾರು ಕೋಟಿ ಹಣ ರೆಡ್ಡಿ ತಿಂದಿದ್ದಾರೆ

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ಅವರು ತಮ್ಮ ಪಕ್ಕದಲ್ಲಿ ಜೈಲು ಕೂಳು ತಿಂದು ಬಂದ ಯಡಿಯೂರಪ್ಪ ಅವರನ್ನು ಕೂಡಿಸಿಕೊಂಡಿದ್ದಾರೆ. ಗಣಿ ಲೂಟಿಕೋರನ 8 ಬೆಂಬಲಿಗರಿಗೆ ಟಿಕೆಟ್ ನೀಡಿದ್ದಾರೆ. ಸ್ವತಃ ಅಮಿತ್ ಶಾ ಪುತ್ರ ಅವರು ದೊಡ್ಡ ಭ್ರಷ್ಟರಾಗಿದ್ದಾರೆ ಅವರು ಕೇವಲ 50000 ಹಣ ತೊಡಗಿಸಿ ಅದನ್ನು ಕೆಲವೇ ತಿಂಗಳುಗಳಲ್ಲಿ ಕೋಟ್ಯಾಂತರ ಮಾಡಿಬಿಟ್ಟಿದ್ದಾರೆ. ಇದಾವುದರ ಬಗ್ಗೆಯೂ ಅವರು ಮಾತನಾಡುವುದಿಲ್ಲ. ಕಾಂಗ್ರೆಸ್‌ ಸರ್ಕಾರ ಮನ್‌ರೇಗಾದಲ್ಲಿ ತೊಡಗಿಸಿದ್ದ ಹಣದ ಮೊತ್ತದಷ್ಟು ರೆಡ್ಡಿ ಒಬ್ಬರೇ ತಿಂದು ತೇಗಿದ್ದಾರೆ.

ಸಂವಿಧಾನವನ್ನು ಮುಟ್ಟಿ ನೋಡೋಣ

ಸಂವಿಧಾನವನ್ನು ಮುಟ್ಟಿ ನೋಡೋಣ

ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡಲು ಬಯಸುತ್ತದೆ, ಸಂವಿಧಾನದ ಜಾಗದಲ್ಲಿ ನಾಗಪುರದ (ಆರ್‌ಎಸ್‌ಎಸ್‌) ವಿಚಾರಗಳನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿದೆ. ಆದರೆ ನಾನು ಅವರಿಗೆ ಸವಾಲು ಹಾಕುತ್ತೇವೆ ಸಂವಿಧಾನವನ್ನು ಬದಲಾಯಿಸಿ ನೋಡೋಣ, ನಿಮಗೆ ಶಕ್ತಿ ಇದ್ದರೆ ಸಂವಿಧಾನವನ್ನು ಮುಟ್ಟಿ ನೋಡಿ ಆಮೇಲೆ ನಡೆಯುವುದೇ ಬೇರೆ' ಎಂದು ರಾಹುಲ್ ಗುಡುಗಿದರು.

ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ನ್ಯಾಯವಿಲ್ಲ

ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ನ್ಯಾಯವಿಲ್ಲ

ದೇಶಕ್ಕೆ ಸ್ವತಂತ್ರ ಬಂದು ಇಷ್ಟು ವರ್ಷಗಳಲ್ಲಿ ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶರು ಯಾರೂ ತಮಗೆ ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚಿರಲಿಲ್ಲ. ಅಮಿತ್ ಶಾ ಅವರ ಹೆಸರು ಕೇಳಿಬಂದಿರುವ ನ್ಯಾಯಮೂರ್ತಿ ಲೋಯಾ ಅವರ ಕೊಲೆ ಕೇಸಿನ ಕುರಿತು ಒತ್ತಡಗಳು ಬರುತ್ತಿವೆ ಎಂದು ಅವರು ನೇರವಾಗಿ ಹೇಳಿದ್ದಾರೆ ಆದರೂ ಮೋದಿ ಮಾತನಾಡಿಲ್ಲ ಎಂದು ರಾಹುಲ್ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

ರಫೆಲ್ ಹಗರಣದ ಬಗ್ಗೆ ಮಾತೇ ಆಡರು

ರಫೆಲ್ ಹಗರಣದ ಬಗ್ಗೆ ಮಾತೇ ಆಡರು

ಮೋದಿ ಅವರು ಅಭಿವೃದ್ಧಿಯ ಮಾತನಾಡುತ್ತಾರೆ ಆದರೆ ಬೆಂಗಳೂರಿನ ಎಚ್‌ಎಎಲ್‌ ನಿಂದ ರಫೆಲ್‌ ಗುತ್ತಿಗೆಯನ್ನು ಕಿತ್ತುಕೊಂಡು ಫ್ರಾನ್ಸ್‌ನ ತಮ್ಮ ಗೆಳೆಯರಿಗೆ ಕೊಟ್ಟಿದ್ದಾರೆ. ಇಷ್ಟು ವರ್ಷ ದೇಶಕ್ಕಾಗಿ ವಿಮಾನ ತಯಾರು ಮಾಡುತ್ತಿದ್ದ ಎಚ್‌ಎಎಲ್‌ನಿಂದ ಕಾಂಟ್ರಾಕ್ಟ್‌ ಕಿತ್ತುಕೊಂಡು ಇಲ್ಲಿಯವರೆಗೆ ಒಂದೂ ವಿಮಾನ ಮಾಡಿರದ ಮೋದಿ ಗೆಳೆನಿಗೆ ಕಾಂಟ್ರಾಕ್ಟ್‌ ನೀಡಲಾಗಿದೆ ಇದರ ಬಗ್ಗೆ ಮೋದಿ ಮಾತನಾಡುವುದಿಲ್ಲ. ಮೋದಿ ಅವರು ಅಪನಗದೀಕರಣದಿಂದ ಬಡವರ ಹಣವನ್ನು ಕಸಿದು ತಮ್ಮ ಗೆಳೆಯರಾದ ನೀರವ್ ಮೋದಿ, ಚೋಸ್ಕಿ ಅವರ ಜೇಬು ತುಂಬಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

English summary
Rahul Gandhi today lambasted on Narendra Modi in congress rally in Shivajinagar. He said Modi spreding lie, he is spreding hate every where.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X