ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಬಗ್ಗೆ ಅಮಿತ್ ಶಾ ಒಮ್ಮೆ ಸತ್ಯ ಹೇಳಿದ್ದಾರೆ : ರಾಹುಲ್

|
Google Oneindia Kannada News

ಬೆಂಗಳೂರು, ಮೇ 07 : 'ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒಮ್ಮೆ ಬಿ.ಎಸ್.ಯಡಿಯೂರಪ್ಪ ಬಗ್ಗೆ ಸತ್ಯ ಹೇಳಿದ್ದಾರೆ. ಯಡಿಯೂರಪ್ಪ ರಾಜ್ಯದ ಅತಿ ಭ್ರಷ್ಟ ಮುಖ್ಯಮಂತ್ರಿ ಎಂದು ಅವರು ಒಮ್ಮೆ ಹೇಳಿದ್ದಾರೆ' ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿದ್ದಾರೆ. ಸೋಮವಾರ ಅವರು ಹೊಸಕೋಟೆಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ಷೇತ್ರ ಪರಿಚಯ : ಬೆಂಗಳೂರು ನಗರಕ್ಕೆ ಸೇರಿ ಹೋಗಿರುವ ಹೊಸಕೋಟೆ!ಕ್ಷೇತ್ರ ಪರಿಚಯ : ಬೆಂಗಳೂರು ನಗರಕ್ಕೆ ಸೇರಿ ಹೋಗಿರುವ ಹೊಸಕೋಟೆ!

Karnataka elections : Rahul Gandhi address rally in Hoskote

ರಾಹುಲ್ ಭಾಷಣದ ಮುಖ್ಯಾಂಶಗಳು

* ಈ ಬಾರಿಯ ಚುನಾವಣೆ ಎರಡು ಸಿದ್ದಾಂತಗಳ ನಡುವೆ ನಡೆಯುವ ಹೋರಾಟ. ಒಂದು ಕಡೆ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ಕಾಂಗ್ರೆಸ್‌ನ ವಿಚಾರಗಳು ಮತ್ತೊಂದು ಕಡೆ ಆರ್‌ಎಸ್‌ಎಸ್‌, ಬಿಜೆಪಿ ವಿಚಾರಗಳು.

ಹೊಸಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋಹೊಸಕೋಟೆಯಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

* ಬಸವಣ್ಣ ಅವರು ನುಡಿದಂತೆ ನಡೆ ಎಂದು ಹೇಳಿದ್ದಾರೆ. ಎಲ್ಲರ ಜೊತೆಗೆ ಎಲ್ಲರ ಅಭಿವೃದ್ಧಿಯಾಗಬೇಕು ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಈ ತತ್ವವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದೆ.

* ಕರ್ನಾಟಕದ ಶಕ್ತಿ ಬಡವರಲ್ಲಿದೆ, ಕಾರ್ಮಿಕರಲ್ಲಿದೆ, ರೈತರಲ್ಲಿದೆ, ಮಹಿಳೆಯರಲ್ಲಿದೆ, ಯುವಕರಲ್ಲಿದೆ. ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎಂದರೆ ಈ ಜನರ ಕೈಗೆ ಶಕ್ತಿ ತುಂಬಬೇಕು.

* ಬಡ ವ್ಯಕ್ತಿಗೆ ಮನೆ ಸಿಕ್ಕದಿದ್ದರೆ, ರೈತರಿಗೆ ಸಹಾಕಾರ ಸಿಗಲಿಲ್ಲ ಎಂದರೆ ರಾಜ್ಯಕ್ಕೆ ನಷ್ಟ ಉಂಟಾದಂತೆ. ಯಾರು ಈ ರಾಜ್ಯದ ಅಭಿವೃದ್ಧಿಗೆ ಬೆವರು ಹರಿಸುತ್ತಾರೋ ಅವರಿಗೆ ನ್ಯಾಯ ಸಿಗಬೇಕು. ದಳ್ಳಾಳಿಗಳು ಮತ್ತು ಕಳ್ಳರಿಗಾಗಿ ಸರ್ಕಾರ ನಡೆಯಬಾರದು.

* ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇದಿಕೆಯನ್ನು ನೋಡಿ. ಭ್ರಷ್ಟಾಚಾರದ ವಿರುದ್ಧ ಹೋರಾಡುವೆ ಎನ್ನುತ್ತಾರೆ ಅವರು. ಆದರೆ, ಅವರ ಪಕ್ಕದಲ್ಲಿ ಜೈಲಿನ ಊಟ ಸವಿದು ಬಂದ ಯಡಿಯೂರಪ್ಪ ಕುಳಿತಿರುತ್ತಾರೆ.

* ಬಿಜೆಪಿಯ ಅಧ್ಯಕ್ಷರಾದ ಅಮಿತ್ ಶಾ ಅವರು ಒಂದು ಬಾರಿ ಬಹಿರಂಗವಾಗಿ ಸತ್ಯ ಹೇಳಿದರು. ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಎಲ್ಲರ ಮುಂದೆಯೇ ಹೇಳಿದರು.

* ಮೋದಿ ಕಾರ್ಯಕ್ರಮದ ವೇದಿಕೆ ಮತ್ತೊಂದು ಕಡೆ ಕೆಲವು ನಾಯಕರು ಕುಳಿತಿರುತ್ತಾರೆ. ಅವರೆಲ್ಲ ಯಡಿಯೂರಪ್ಪ ಅವರ ಜೊತೆ ಜೈಲಿಗೆ ಪಿಕ್ ನಿಕ್ ಹೋಗಿ ಬಂದವರು.

* ಮೋದಿ ಅವರ ವೇದಿಕೆಯ ಮತ್ತೊಂದು ಸಾಲಿನಲ್ಲಿ 8 ಜನ ರೆಡ್ಡಿ ಬ್ರದರ್ಸ್ ಕುಳಿತಿರುತ್ತಾರೆ. ಬಿಜೆಪಿ 8 ಜನ ರೆಡ್ಡಿ ಸಹೋದರರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡಿದೆ.

* ಕರ್ನಾಟಕವನ್ನು ಲೂಟಿ ಮಾಡಲಿ, ದಳ್ಳಾಳಿ ಕೆಲಸವನ್ನು ಮಾಡಲಿ ಎಂದು ರೆಡ್ಡಿ ಸಹೋದರರಿಗೆ ಪಕ್ಷ ಟಿಕೆಟ್ ನೀಡಿದೆ. 35 ಸಾವಿರ ಕೋಟಿ ರೂ.ಗಳನ್ನು ರೆಡ್ಡಿ ಸಹೋದರರು ಲೂಟಿ ಮಾಡಿದ್ದಾರೆ. ನರೇಂದ್ರ ಮೋದಿ ಅವರು ರಾಜ್ಯದ ಜನರಿಗೆ ಹೇಳಬೇಕು. ಯಾವ ಆಧಾರದ ಮೇಲೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದರು ಎಂದು.

* ಯಡಿಯೂರಪ್ಪ ಅವರಿಗೆ ಇರುವ ಅರ್ಹತೆ ಏನು ಎಂದು ನಾನು ಹೇಳುವೆ. ಯಡಿಯೂರಪ್ಪ, ರೆಡ್ಡಿಗಳು, ನಾಲ್ಕು ಮಂತ್ರಿಗಳು ಕರ್ನಾಟಕದಿಂದ ಹಣವನ್ನು ದೋಚಿ ಮೋದಿ ಅವರ ಮಾರ್ಕೆಟಿಂಗ್‌ಗಾಗಿ ನೀಡುತ್ತಾರೆ.

* 2014ರ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನಾನು ಪೆಟ್ರೋಲ್ ಬೆಲೆಯನ್ನು ಕಡಿಮೆ ಮಾಡುವೆ ಎಂದು ಹೇಳಿದ್ದರು. ಪ್ರಚಂಚದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆಗುತ್ತಿಲ್ಲ.

* ಸಿದ್ದರಾಮಯ್ಯ ಸರ್ಕಾರ 8 ಸಾವಿರ ಕೋಟಿ ರೈತರ ಸಾಲವನ್ನು ಮನ್ನಾ ಮಾಡಿದೆ. ಆದರೆ, ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಏಕೆ ರೈತರ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

English summary
AICC president Rahul Gandhi in Karnataka. On May 7, 2018 he addressed election campaign rally in Hoskote, Bengaluru Rural district. Karnataka elections will be held on May 12, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X