ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!

By Prasad
|
Google Oneindia Kannada News

ಬೆಂಗಳೂರು, ಏಪ್ರಿಲ್ 17 : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದಂತೆ, ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್ ಹಂಚುವಂಥ ಅನೈತಿಕ ಚಟುವಟಿಕೆಯ ಪ್ರಕರಣಗಳು ಕೂಡ ತಾರಕಕ್ಕೇರುತ್ತಿವೆ.

ಆದರೆ, ಈ ಎಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಫ್ಲೈಯಿಂಗ್ ಸ್ಕ್ವಾಡ್ ಗಳು, ಸ್ಟಾಟಿಕ್ ಸರ್ವೆಲನ್ಸ್ ಟೀಮ್ ಗಳು, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆಗಳು ಸನ್ನದ್ಧವಾಗಿವೆ. ಇಷ್ಟೆಲ್ಲ ಇದ್ದರೂ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಅನೈತಿಕ ಚಟುವಟಿಕೆಗಳು ಎಗ್ಗುಸಿಗ್ಗಿಲ್ಲದಂತೆ ನಡೆಯುತ್ತಿವೆ.

ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಜಾರಿ ಕುರಿತಾದ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.

Karnataka Elections : Model Code of Conduct violation and Law & Order

ಮಾದರಿ ನೀತಿ ಸಂಹಿತೆ

1,156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12,537 ಗೋಡೆಬರಹಗಳು, 17,693 ಪೋಸ್ಟರ್‍ಗಳು ಮತ್ತು 7,711 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲಾಗಿದೆ ಹಾಗೂ Karnataka Open Places (Provision of Disfigurement) Act 1981 ಪ್ರಕಾರ 6 ಪ್ರಕರಣಗಳನ್ನು ನೋಂದಾಯಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಒಟ್ಟಾರೆ 6,866 ಗೋಡೆ ಬರಹ, 7,949 ಪೋಸ್ಟರ್‍ಗಳು ಮತ್ತು 2,543 ಬ್ಯಾನರ್‍ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದುಹಾಕಲಾಗಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಕಳೆದ 24 ಗಂಟೆಗಳಲ್ಲಿ 11,02,680 ರು. ನಗದು, 18,00,000 ರು. ಮೌಲ್ಯದ 1 ವಾಹನ ಮತ್ತು 3,66,000 ರು. ಮೌಲ್ಯದ 18 ಪ್ಲಾಸ್ಟಿಕ್ ಬ್ಯಾಗ್ಸ್ (ಎಂಇಪಿ ಪಾರ್ಟಿ), 1,20,000 ರು. ಮೌಲ್ಯದ 3,000 ಶಾಲ್‍ಗಳು, 3,40,000 ರು. ಮೌಲ್ಯದ 340 ಕುಕ್ಕರ್‍ಗಳು, 1,08,900 ರು. ಮೌಲ್ಯದ 242 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Karnataka Elections : Model Code of Conduct violation and Law & Order

ಒಟ್ಟಾರೆ 21,35,71,660 ರು. ನಗದು, 1,76,80,000 ರು. ಮೌಲ್ಯದ 7 ಕೆ.ಜಿ. 503 ಗ್ರಾಂ ಚಿನ್ನ, 11,47,200 ರು. ಮೌಲ್ಯದ ಬೆಳ್ಳಿ, 4.5 ಲೀಟರ್ ಮದ್ಯ, ವಾಹನಗಳು ಮತ್ತಿತರ ವಸ್ತುಗಳು ಸೇರಿದಂತೆ 1,63,92,072 ರು. ಮೌಲ್ಯದ ವಸ್ತುಗಳನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಮುಟ್ಟುಗೋಲು ಹಾಕಿಕೊಂಡಿವೆ.

ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗಳು 2,38,380 ರು. ನಗದು, 2766 ರು. ಮೌಲ್ಯದ 8.01 ಲೀ. ಮದ್ಯ , 5,00,000 ರು. ಮೌಲ್ಯದ 2 ವಾಹನಗಳು, 8,210 ರು. ಮೌಲ್ಯದ 4 ಗ್ಯಾಸ್ ಸ್ಟೌವ್ ಮತ್ತು 6 ಪಾತ್ರೆ ಸಾಮಗ್ರಿ, 100 ಪ್ಲಾಸ್ಟಿಕ್ ತಟ್ಟೆಗಳು, 81,000 ರು. ಮೌಲ್ಯದ 43 ಅಲ್ಯುಮಿನಿಯಂ ಬಕೆಟ್‍ಗಳು, 32 ಇಡ್ಲಿ ಪಾತ್ರೆ ಇತ್ಯಾದಿ, 2,000 ರು. ಮೌಲ್ಯದ ಮರಳು, 2,00,000 ರು. ಮೌಲ್ಯದ 85 ಇಳಕಲ್ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟಾರೆ 1,71,35,357 ರು. ನಗದು, 13,12,14,670 ರು. ಮೌಲ್ಯದ 601.217 ಲೀ ಮದ್ಯ ಮತ್ತಿತರ ವಸ್ತುಗಳನ್ನು, 1,53,88,060 ರು. ಮೌಲ್ಯದ 78 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರೆ ಪೊಲೀಸ್ ಪ್ರಾಧಿಕಾರಿಗಳು 7,00,000 ರು. ನಗದು, 10 ಸೀರೆ, 160 ಲ್ಯಾಪ್‍ಟಾಪ್ ಮತ್ತು 509.02 ಲೀ. ಮದ್ಯವನ್ನು ವಶಪಡಿಸಿಕೊಂಡಿದೆ. ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ, ಎಸ್‍ಎಸ್‍ಟಿ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು 23,14,07,017 ರು. ನಗದನ್ನು ವಶಪಡಿಸಿಕೊಂಡಿವೆ.

Karnataka Elections : Model Code of Conduct violation and Law & Order

ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 15 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಫ್ಲೈಯಿಂಗ್ ಸ್ಕ್ವಾಡ್‍ಗಳು 330 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಎಸ್‍ಎಸ್‍ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 1 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ. ಒಟ್ಟು 71 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ, ಅಬಕಾರಿ ಇಲಾಖೆಯು 12,022.4 ಲೀ. ಗಳಷ್ಟು ಐಎಂಎಲ್ ಮದ್ಯವನ್ನು ಮತ್ತು 62,06,040 ರು. ಮೌಲ್ಯದ ಇತರೆ ಮದ್ಯವನ್ನು ವಶಪಡಿಸಿಕೊಂಡು 47 ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 38 ಪ್ರಕರಣಗಳನ್ನು ದಾಖಲಿಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 66 ಪ್ರಕರಣಗಳನ್ನು ದಾಖಲಿಸಿದೆ.

ಒಟ್ಟಾರೆ 3,00,61,772 ರು. ಮೌಲ್ಯದ ಐಎಂಎಲ್ ಹಾಗೂ ಇತರೆ ಮದ್ಯ ಸೇರಿ 87,138.882 ಲೀ.ಗಳಷ್ಟು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಪರವಾನಿಗೆಯನ್ನು ಉಲ್ಲಂಘಿಸಿದ 1,230 ಪ್ರಕರಣಗಳು, ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ 1888 ಪ್ರಕರಣಗಳನ್ನು ಹಾಗೂ ಎನ್‍ಡಿಪಿಎಸ್ ಕಾಯ್ದೆಯಡಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 352 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Karnataka Elections : Model Code of Conduct violation and Law & Order

ಕಾನೂನು ಮತ್ತು ಸುವ್ಯವಸ್ಥೆ

1,063 ಪರವಾನಗಿ ಹೊಂದಿದ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ 156 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 141 ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿದೆ. ಸಿಆರ್‍ಪಿಸಿ ಕಾಯ್ದೆಯಡಿ 363 ಪ್ರಕರಣಗಳನ್ನು, 879 ನಾಕಾಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. 69,951 ಶಸ್ತ್ರಾಸ್ರ್ತಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ.

ಒಟ್ಟು 97,037 ಶಸ್ತ್ರಾಸ್ತ್ರಗಳ ಪೈಕಿ 95,408 ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. 50 ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಒಟ್ಟು 6 ಶಸ್ತ್ರಾಸ್ತ್ರದ ಪರವಾನಗಿಯನ್ನು ರದ್ದುಪಡಿಸಲಾಗಿದೆ, ಸಿಆರ್‍ಪಿಸಿ ಕಾಯ್ದೆಯಡಿಯಲ್ಲಿ 13,759 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 13100 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 24,858 ಜಾಮೀನು ರಹಿತ ವಾರೆಂಟ್‍ಗಳನ್ನು ಈವರೆಗೆ ಹೊರಡಿಸಲಾಗಿದೆ.

English summary
Karnataka Assembly Elections 2018 : Based on the information gathered from District Election Officers and Superintendent of Police, the following information on Model election Code of Conduct violation and Law & Order enforcement is provided
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X