ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕಡಿಮೆ ಮತದಾನವಾದ 10 ಕ್ಷೇತ್ರಗಳು!

|
Google Oneindia Kannada News

ಬೆಂಗಳೂರು, ಮೇ 14 : ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಮತದಾನ ಶನಿವಾರ ಮುಕ್ತಾಯಗೊಂಡಿದೆ. ಶೇ 70ಕ್ಕೂ ಅಧಿಕ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಬೆಂಗಳೂರು ನಗರದಲ್ಲಿ ಅಧಿಕ ಮತದಾನವಾಗಿಲ್ಲ.

ರಾಜ್ಯದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಈ ಪೈಕಿ 14 ಕ್ಷೇತ್ರಗಳು ಬೆಂಗಳೂರು ನಗರದ ವ್ಯಾಪ್ತಿಯಲ್ಲಿವೆ. ಬೆಂಗಳೂರು ನಗರದ ಜನರು ಮತದಾನ ಮಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಅಂತಿಮವಾಗಿ ಕರ್ನಾಟಕದಲ್ಲಿ 70.91 % ಮತದಾನ, ಬೆಂಗಳೂರು ಕನಿಷ್ಠಅಂತಿಮವಾಗಿ ಕರ್ನಾಟಕದಲ್ಲಿ 70.91 % ಮತದಾನ, ಬೆಂಗಳೂರು ಕನಿಷ್ಠ

ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಹಲವು ಕ್ಷೇತ್ರಗಳಲ್ಲಿ ಕಡಿಮೆ ಮತದಾನ ನಡೆದಿದೆ. ಬೆಂಗಳೂರು ನಗರದಲ್ಲಿ ಈ ಬಾರಿ 57.33ರಷ್ಟು ಮತದಾನ ವಾಗಿದೆ. ನಗರ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನ ನಡೆದಿದೆ.

ಕರ್ನಾಟಕ ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ಸ್ ನಾಳೆ ನಿರೀಕ್ಷಿಸಿಕರ್ನಾಟಕ ಚುನಾವಣೆ ಫಲಿತಾಂಶದ ಲೈವ್ ಅಪ್ಡೇಟ್ಸ್ ನಾಳೆ ನಿರೀಕ್ಷಿಸಿ

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬೆಂಗಳೂರಿನ ದಾಸರಹಳ್ಳಿ, ಪದ್ಮನಾಭನಗರ, ಮಲ್ಲೇಶ್ವರಂ, ಯಶವಂತಪುರ, ಸಿ.ವಿ.ರಾಮನ್‌ ನಗರ ಮುಂತಾದ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಎಲ್ಲಿ, ಎಷ್ಟು ಮತದಾನವಾಗಿದೆ? ಇಲ್ಲಿವೆ ವಿವರಗಳು... ಮೆ 15ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

48.03 ರಷ್ಟು ಮತದಾನ

48.03 ರಷ್ಟು ಮತದಾನ

ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದಲ್ಲಿ ಶೇ 50ರಷ್ಟು ಮತದಾನವೂ ಆಗಿಲ್ಲ. 2018ಚುನಾವಣೆಯಲ್ಲಿ ಕೇವಲ 48.03ರಷ್ಟು ಮತದಾನವಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದಲ್ಲಿ ಶೇ 7.37ರಷ್ಟು ಕಡಿಮೆ ಮತದಾನವಾಗಿದೆ.

ದಾಸರಹಳ್ಳಿ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ 55.40ರಷ್ಟು ಮತದಾನವಾಗಿತ್ತು. ಬಿಜೆಪಿಯ ಎಸ್.ಮುನಿರಾಜು ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 6.60ಯಷ್ಟು ಕಡಿಮೆ ಮತದಾನ

ಶೇ 6.60ಯಷ್ಟು ಕಡಿಮೆ ಮತದಾನ

ನಗರದ ಮಹದೇವಪುರದಲ್ಲಿಯೂ ಕಡಿಮೆ ಮತದಾನವಾಗಿದೆ. ಈ ಬಾರಿ ಶೇ 55ರಷ್ಟು ಮತದಾನವಾಗಿದೆ. 2013ರ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಮತದಾನದ ಪ್ರಮಾಣ ಶೇ 6.60ಯಷ್ಟು ಕಡಿಮೆಯಾಗಿದೆ.

2013ರ ಚುನಾವಣೆಯಲ್ಲಿ ಶೇ 61.60 ರಷ್ಟು ಮತದಾನ ನಡೆದಿತ್ತು. ಬಿಜೆಪಿಯ ಅರವಿಂದ ಲಿಂಬಾವಳಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 60.19ರಷ್ಟು ಮತದಾನ

ಶೇ 60.19ರಷ್ಟು ಮತದಾನ

ಯಶವಂತಪುರ ಕ್ಷೇತ್ರದಲ್ಲಿ ಈ ಬಾರಿ 60.19ರಷ್ಟು ಮತದಾನವಾಗಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಶೇ 6.01 ರಷ್ಟು ಕಡಿಮೆ ಮತದಾನವಾಗಿದೆ.

2013ರ ಚುನಾವಣೆಯಲ್ಲಿ ಶೇ 66.20ಯಷ್ಟು ಮತದಾನ ಯಶವಂತಪುರ ಕ್ಷೇತ್ರದಲ್ಲಿ ನಡೆದಿತ್ತು. ಕಾಂಗ್ರೆಸ್‌ನ ಎಸ್‌.ಟಿ.ಸೋಮಶೇಖರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 6.01ರಷ್ಟು ಕಡಿಮೆ ಮತದಾನ

ಶೇ 6.01ರಷ್ಟು ಕಡಿಮೆ ಮತದಾನ

ಮಲ್ಲೇಶ್ವರಂ ಕ್ಷೇತ್ರದಲ್ಲಿ ಈ ಬಾರಿ ಶೇ 56.29ರಷ್ಟು ಮತದಾನವಾಗಿದೆ. ಕಳೆದ ಬಾರಿಯ ಚುನಾವಣೆಗೆ ಹೀಲಿಕೆ ಮಾಡಿದರೆ ಶೇ 6.01ರಷ್ಟು ಕಡಿಮೆ ಮತದಾನ ದಾಖಲಾಗಿದೆ.

2013ರ ಚುನಾವಣೆಯಲ್ಲಿ ಶೇ 62.30ಯಷ್ಟು ಮತದಾನವಾಗಿತ್ತು. ಬಿಜೆಪಿಯ ಡಾ.ಅಶ್ವಥ್ ನಾರಾಯಣ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 53.08ರಷ್ಟು ಮತದಾನ

ಶೇ 53.08ರಷ್ಟು ಮತದಾನ

ಕೆ.ಆರ್‌.ಪುರ ಕ್ಷೇತ್ರದಲ್ಲಿ ಈ ಬಾರಿ ಕೇವಲ 53.05ರಷ್ಟು ಮತದಾನವಾಗಿದೆ. 2013ರ ಚುನಾವಣೆಯಲ್ಲಿ 58.90ಯಷ್ಟು ಮತದಾನವಾಗಿತ್ತು.

2013ರ ಚುನಾವಣೆಗೆ ಹೋಲಿಕೆ ಮಾಡಿದರೆ ಕ್ಷೇತ್ರದಲ್ಲಿ 5.82ರಷ್ಟು ಮತದಾನ ಕಡಿಮೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನ ಭೈರತಿ ಬಸವರಾಜು ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಶೇ 54.72ರಷ್ಟು ಮತದಾನ

ಶೇ 54.72ರಷ್ಟು ಮತದಾನ

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಈ ಬಾರಿ ಶೇ 54.72ರಷ್ಟು ಮತದಾನವಾಗಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 5.48ರಷ್ಟು ಕಡಿಮೆ ಮತದಾನವಾಗಿದೆ.

2013ರ ಚುನಾವಣೆಯಲ್ಲಿ ಶೇ 60.20ಯಷ್ಟು ಮತದಾನ ನಡೆದಿತ್ತು. ಜೆಡಿಎಸ್ ಪಕ್ಷದ ಕೆ.ಗೋಪಾಲಯ್ಯ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 5.40 ಕಡಿಮೆ ಮತದಾನ

ಶೇ 5.40 ಕಡಿಮೆ ಮತದಾನ

ಪದ್ಮನಾಭ ನಗರ ಕ್ಷೇತ್ರದಲ್ಲಿ ಈ ಬಾರಿ ಶೇ 53ರಷ್ಟು ಮತದಾನ ನಡೆದಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 5.40ಯಷ್ಟು ಕಡಿಮೆ ಮತದಾನವಾಗಿದೆ.

2013ರ ಚುನಾವಣೆಯಲ್ಲಿ 58.40ಯಷ್ಟು ಮತದಾನವಾಗಿತ್ತು. ಬಿಜೆಪಿಯ ಆರ್.ಅಶೋಕ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 5.71ರಷ್ಟು ಕಡಿಮೆ ಮತದಾನ

ಶೇ 5.71ರಷ್ಟು ಕಡಿಮೆ ಮತದಾನ

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಶೇ 57.39ರಷ್ಟು ಮತದಾನ ನಡೆದಿದೆ. 2013ರ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 5.71ರಷ್ಟು ಕಡಿಮೆ ಮತದಾನವಾಗಿದೆ.

2013ರ ಚುನಾವಣೆಯಲ್ಲಿ ಶೇ 63.10ರಷ್ಟು ಮತದಾನವಾಗಿತ್ತು. ಕಾಂಗ್ರೆಸ್‌ನ ಕೃಷ್ಣಬೈರೇಗೌಡ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

5.12ರಷ್ಟು ಕಡಿಮೆ ಮತದಾನ

5.12ರಷ್ಟು ಕಡಿಮೆ ಮತದಾನ

ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ 2013ರಲ್ಲಿ ಶೇ 54.10ಯಷ್ಟು ಮತದಾನವಾಗಿತ್ತು. ಈ ಬಾರಿ ಕೇವಲ 48.98ರಷ್ಟು ಮತದಾನವಾಗಿದೆ.

ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಶೇ 5.12ರಷ್ಟು ಕಡಿಮೆ ಮತದಾನವಾಗಿದೆ. ಕಳೆದ ಬಾರಿ ಬಿಜೆಪಿಯ ರಘು ಅವರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಶೇ 4.91ರಷ್ಟು ಕಡಿಮೆ ಮತದಾನ

ಶೇ 4.91ರಷ್ಟು ಕಡಿಮೆ ಮತದಾನ

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ 63.99ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಶೇ 68.90ಯಷ್ಟು ಮತದಾನವಾಗಿತ್ತು.

ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ 4.91ರಷ್ಟು ಮತದಾನವಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನ ಬಿ.ಶಿವಣ್ಣ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

English summary
Here are the list of top 10 Bengaluru city assembly constituencies which witness less voting percentage in the Karnataka assembly elections 2018 voting held on May 12, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X