ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯದ ನಂತರ ಅತಿ ಕೆಟ್ಟ ಸರ್ಕಾರ ಸಿದ್ದರಾಮಯ್ಯನದ್ದು: ಅಮಿತ್ ಶಾ

By Manjunatha
|
Google Oneindia Kannada News

ಬೆಂಗಳೂರು, ಮೇ 10: ಜಾತಿವಾದ, ಕುಟುಂಬವಾದ, ಗೂಂಡಾಗಿರಿ, ಭ್ರಷ್ಟಾಚಾರದಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್‌ ಸರ್ಕಾರವನ್ನು ಜನ ಈ ಬಾರಿ ನಿರಾಕರಿಸಿ ಬಿಜೆಪಿಗೆ ಅವಕಾಶ ನೀಡಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ಭಾರತದ ಅತ್ಯಂತ ನೀಚ ಮತ್ತು ಕಳಪೆ ಸರ್ಕಾರ ಇದ್ದರೆ ಈ ಸಿದ್ದರಾಮಯ್ಯ ಸರ್ಕಾರ ಮಾತ್ರ ಎಂದು ಹರಿಹಾಯ್ದರು.

ನಾನೀಗ ಬಿಜೆಪಿ ಸೊಸೆ ಎನ್ನುತ್ತಾರೆ ನಟಿ ಭಾವನಾ ರಾಮಣ್ಣ ನಾನೀಗ ಬಿಜೆಪಿ ಸೊಸೆ ಎನ್ನುತ್ತಾರೆ ನಟಿ ಭಾವನಾ ರಾಮಣ್ಣ

ಆಯೋಗದ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರ ಪಟ್ಟಿ ತಿದ್ದುವ ಪ್ರಯತ್ನ ಮಾಡಿ, ಬಾದಾಮಿಯಲ್ಲಿ ಕೂಡಾ ಲಕ್ಷಾಂತರ ಹಣ ಸಿಕ್ಕಿದೆ, ಕುಕ್ಕರ್, ಸೀರೆ ಹಂಚಿಕೆ ಹೀಗೆ ಅನೇಕ ಅಕ್ರಮಗಳನ್ನು ಮಾಡಿ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿದೆ. ರಾರಾ ನಗರದಲ್ಲಿ ಕಾಂಗ್ರೆಸ್‌ ಶಾಸಕನ ಮೇಲೆ ಎಫ್‌ಐಆರ್ ಆಗಿದೆ. ಕಾಂಗ್ರೆಸ್ ಕಾರ್ಪೊರೇಟರ್ ಬಂಧನ ಆಗಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಇಂದ ಭಾರತಕ್ಕೆ ಹೊಸ ಪ್ರಕಾಶ

ನರೇಂದ್ರ ಮೋದಿ ಇಂದ ಭಾರತಕ್ಕೆ ಹೊಸ ಪ್ರಕಾಶ

ನರೇಂದ್ರ ಮೋದಿ ಅವರು ಭಾರತವನ್ನು ಮತ್ತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ. ಇಲ್ಲೂ ಸಹ ಮೋದಿ ಅವರ ನೃತೃತ್ವದಲ್ಲಿ ಯಡಿಯೂರಪ್ಪ ಅವರು ಕಾರ್ಯ ಮಾಡಲು ಇಲ್ಲಿನ ಮತದಾರರು ಅವಕಾಶ ನೀಡಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಕರ್ನಾಟಕ ಚುನಾವಣೆ : ಬೆಂಗಳೂರಿನ ಜಿದ್ದಾಜಿದ್ದಿನ 13 ಕ್ಷೇತ್ರಗಳು! ಕರ್ನಾಟಕ ಚುನಾವಣೆ : ಬೆಂಗಳೂರಿನ ಜಿದ್ದಾಜಿದ್ದಿನ 13 ಕ್ಷೇತ್ರಗಳು!

ಬಿಜೆಪಿ 130 ಸೀಟು ಗೆಲ್ಲುತ್ತದೆ

ಬಿಜೆಪಿ 130 ಸೀಟು ಗೆಲ್ಲುತ್ತದೆ

ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, ನಾವು ಯಾರಿಗೂ ಬೆಂಬಲ ನೀಡುವುದಾಗಲಿ ಅಥವಾ ಬೇರೆಯವರ ಬೆಂಬಲ ಪಡೆಯುವ ಕಾರ್ಯವನ್ನಾಗಲಿ ಮಾಡುವುದಿಲ್ಲ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಸಮೀಕ್ಷೆಯಿಂದ ತಿಳಿದುಬಂದಿರುವುದೆಂದರೆ ಬಿಜೆಪಿಗೆ 130ಕ್ಕೂ ಹೆಚ್ಚು ಸೀಟುಗಳು ದೊರೆಯಲಿವೆ ಎಂದರು.

ದಲಿತರ ದಾರಿತಪ್ಪಿಸುವ ಘೋರ ಕೆಲಸದತ್ತ 'ಕೈ': ನರೇಂದ್ರ ಮೋದಿ ದಲಿತರ ದಾರಿತಪ್ಪಿಸುವ ಘೋರ ಕೆಲಸದತ್ತ 'ಕೈ': ನರೇಂದ್ರ ಮೋದಿ

ಯಡಿಯೂರಪ್ಪ ಆತ್ಮವಿಶ್ವಾಸ ಸರಿಯಾಗಿದೆ

ಯಡಿಯೂರಪ್ಪ ಆತ್ಮವಿಶ್ವಾಸ ಸರಿಯಾಗಿದೆ

ಯಡಿಯೂರಪ್ಪ ಅವರು ಪ್ರಮಾಣ ವಚನದ ದಿನಾಂಕ ಸಹ ನಿಗದಿ ಮಾಡಿದ್ದಾರೆ ಇಷ್ಟೋಂದು ಆತ್ಮವಿಶ್ವಾಸ ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಸಿದ್ದರಾಮಯ್ಯ ಅವರ ಕೆಟ್ಟ ಆಡಳಿತ ಹಾಗೂ ಅದರಿಂದ ಬೇಸತ್ತಿರುವ ಜನರ ಆಕ್ರೋಶ ನೋಡಿಯೇ ನಮಗೆ ಈ ಆತ್ಮಿವಿಶ್ವಾಸ ಬಂದಿರುವುದು ಎಂದರು.

ಎಂದಿಗೂ ಪಿಎಫ್‌ಐ, ಎಸ್‌ಡಿಪಿಐ ಜೊತೆ ಕೈಜೋಡಿಸಲ್ಲ

ಎಂದಿಗೂ ಪಿಎಫ್‌ಐ, ಎಸ್‌ಡಿಪಿಐ ಜೊತೆ ಕೈಜೋಡಿಸಲ್ಲ

ರಾಹುಲ್ ಗಾಂಧಿ ಅವರು ಎರಡು ಭಿನ್ನ ವಿಚಾರಧಾರೆಗಳ ಮಧ್ಯೆ ಚುನಾವಣೆ ನಡೆಯುತ್ತಿದೆ, ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಿಚಾರಧಾರೆ ಜನರನ್ನು ಒಡೆಯುವಂತದ್ದು ಎಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ನಾವು ಎಂದೂ ಚುನಾವಣೆ ಗೆಲುವಿಗಾಗಿ ಎಸ್‌ಡಿಪಿಐ, ಪಿಎಫ್‌ಐ ಅಂತಹಾ ಭಯೋತ್ಪಾಧಕ ಸಂಘಟನೆಗಳೊಂದಿಗೆ ಕೈ ಜೋಡಿಸುವುದಿಲ್ಲ ಆದರೆ ಕಾಂಗ್ರೆಸ್‌ ಚುನಾವಣೆ ಗೆಲ್ಲಲು ಭಯೋತ್ಪಾಧಕ ಸಂಘಟನೆ ಜೊತೆ ಕೂಡಾ ಕೈಜೋಡಿಸುತ್ತದೆ ಎಂದಿದ್ದಾರೆ.

ಯಡಿಯೂರಪ್ಪ ಪೂರ್ಣಾವಧಿಯ ಮುಖ್ಯಮಂತ್ರಿ

ಯಡಿಯೂರಪ್ಪ ಪೂರ್ಣಾವಧಿಯ ಮುಖ್ಯಮಂತ್ರಿ

ಯಡಿಯೂರಪ್ಪ ಪೂರ್ಣಾವಧಿಯ ಮುಖ್ಯಮಂತ್ರಿ ಅಭ್ಯರ್ಥಿಯ ಅಥವಾ ಬದಲಾವಣೆ ಆಗಲಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಬಿಜೆಪಿ ಬಹುಮತ್ವ ಪಡೆದ ನಂತರ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ. ಹಾಗೂ ಅವರೇ ಐದು ವರ್ಷದ ಪೂರ್ಣ ಅವಧಿಗೆ ಮುಖ್ಯಮಂತ್ರಿ ಆಗಲಿದ್ದಾರೆ. ಕಳೆದ ಬಾರಿ ಕೇಂದ್ರದಲ್ಲಿ ಸರ್ಕಾರ ಬೀಳಿಸುವ ಪಕ್ಷ ಇತ್ತು ಆದರೆ ಈ ಬಾರಿ ಮೋದಿ ಸರ್ಕಾರ ಇದೆ ಅದು ಯಡಿಯೂರಪ್ಪ ಬೆನ್ನಿಗೆ ಬೆಟ್ಟದಂತೆ ನಿಂತು ಬೆಂಬಲ ನೀಡಲಿದೆ ಎಂದರು.

ವೈಯಕ್ತಿಕ ದಾಳಿ ಆಗಿದೆ ಆದರೆ ಕಡಿಮೆ

ವೈಯಕ್ತಿಕ ದಾಳಿ ಆಗಿದೆ ಆದರೆ ಕಡಿಮೆ

ಮೋದಿ ಸೇರಿದಂತೆ ಎಲ್ಲ ನಾಯಕರ ಭಾಷಣಗಳಲ್ಲೂ ವೈಯಕ್ತಿಕ ದಾಳಿಗಳಾಗಿವೆ ಅಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಭಾಷಣದಲ್ಲಿ ಎರಡು -ಮೂರು ನಿಮಿಷ ಅಷ್ಟೆ ವೈಕ್ತಿಕ ದಾಳಿಗಳಾಗಿರಬಹುದು ಆದರೆ ಟಿಆರ್‌ಪಿಗಾಗಿ ಮಿಡಿಯಾಗಳು ದಿನಗಟ್ಟಲೇ ಅವನ್ನೇ ತೋರಿಸಿವೆ ಎಂದು ಅಮಿತ್ ಶಾ ಹೇಳಿದರು.

ಜನಾರ್ದನ ರೆಡ್ಡಿ ವಿಷಯದಲ್ಲಿ ನನ್ನ ಮಾತೇ ಅಂತಿಮ

ಜನಾರ್ದನ ರೆಡ್ಡಿ ವಿಷಯದಲ್ಲಿ ನನ್ನ ಮಾತೇ ಅಂತಿಮ

ಕರ್ನಾಟಕದ ಈ ಚುನಾವಣೆ ಬಿಜೆಪಿಗೆ ಅತ್ಯಂತ ಮುಖ್ಯವಾಗಿದ್ದು ಬಿಜೆಪಿಗೆ ದಕ್ಷಿಣದ ಪ್ರವೇಶ ದ್ವಾರ ಕರ್ನಾಟಕ ಹಾಗಾಗಿ ಬಿಜೆಪಿಗೆ ಈ ಚುನಾವಣೆ ಮಹತ್ವ ಎಂದ ಅವರು. ಈಗ ಬಿಜೆಪಿ ಟಿಕೆಟ್ ನೀಡುರುವ ಯಾರ ಮೇಲೂ ಮೈನಿಂಗ್ ಸ್ಕಾಮ್ ಈಗ ಇಲ್ಲ. ಜನಾರ್ದನ ರೆಡ್ಡಿ ಬಗ್ಗೆ ಮಾತನಾಡಿದ ಅವರು ರೆಡ್ಡಿ ಬಗ್ಗೆ ನನ್ನ ನಿರ್ಣಯವೇ ಅಂತಿಮ ಎಂದರು.

English summary
BJP National president Amit Shah said, Siddaramiah government is the worst government after the freedom. He also said BJP will get full majority and Yeddyurappa will be Karnataka CM for sure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X