ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಅಧಿಕಾರಿಗಳ ಕಾರು ಬಳಕೆ: ವಿಜಯ್‌ಭಾಸ್ಕರ್ ಹೊಸ ಆದೇಶವೇನು?

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಐಎಎಸ್‌ ಅಧಿಕಾರಿಗು ಸೇರಿದಂತೆ ಸರ್ಕಾರಿ ಹಿರಿಯ ಅಧಿಕಾರಿಗಳು ಇನ್ನುಮುಂದೆ ಓಲಾ ಕ್ಯಾಬ್ ಗಳನ್ನು ಬಳಸಿ ಎಂದು ಹೇಳುವ ಮೂಲಕ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್‌ಭಾಸ್ಕರ್ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

ಐಎಎಸ್‌ ಅಧಿಕಾರಿಗಳು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಇನ್ನುಮುಂದೆ ಸರ್ಕಾರಿ ಕಾರು ಬಿಟ್ಟು ಓಲಾದಲ್ಲೇ ತೆರಳಬೇಕಿದೆ. ಕೆಲವು ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಸ್ವಂತ ಕೆಲಸಗಳಿಗೆ ಬಳಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಯವರು ಈ ಆದೇಶ ಹೊರಡಿಸಿದ್ದು ಸರ್ಕಾರಿ ಕಾರುಗಳನ್ನು ಬಿಟ್ಟು ಬಾಡಿಗೆ ಓಲಾದಲ್ಲಿ ಕಚೇರಿಗೆ ಬನ್ನಿ ಎಂದಿದ್ದಾರೆ.

ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ! ಸರ್ಕಾರಿ ಕಾರು ಬೇಡವೆಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ!

ಬಾಡಿಗೆ ಆಧಾರದ ಮೇಲೆ ಸರ್ಕಾರಿ ಕಾರುಗಳನ್ನು ಬಾಡಿಗೆ ಪಡೆದಿರುವ ಅಧಿಕಾರಿಗಳು ಇನ್ನುಮುಂದೆ ಓಲಾ, ಊಬರ್ ಕ್ಯಾಬ್ ಗಳನ್ನು ಬಳಸುವಂತೆ ಸೂಚಿಸಿದ್ದಾರೆ.

Karnataka CS directs officers to use app based taxis rather hired one

ಸುಖಾಸುಮ್ಮನೆ ಸರ್ಕಾರಿ ವಾಹನಗಳ ಬಳಕೆಗೆ ನಿರ್ಬಂಧ ಹೇರಲು ಮುಂದಾಗಿದ್ದು, ಸರ್ಕಾರಿ ವಾಹನಗಳ ಬಳಕೆಯನ್ನು ಬಿಟ್ಟು ಓಲಾ, ಊಬರ್, ಟ್ಯಾಕ್ಸಿಗಳಲ್ಲಿ ಓಡಾಡುವಂತೆ ಸಲಹೆ ನೀಡಿದ್ದು, ಮಿತವ್ಯಯ ಆಡಳಿತಕ್ಕೆ ಮುಖ್ಯ ಕಾರ್ಯದರ್ಶಿಯವರು ಮಹತ್ವದ ನಿರ್ಧಾರ ತೆಗೆದುಕೊಂಡಂತಾಗಿದೆ.

English summary
Karnataka Chief Secretary T.M. Vijay Bhaskar has issued an order to all the state government officials to use app based taxis rather hired one which is burdening on the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X