ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಗದಿಯಾಯ್ತು ಸಂಪುಟ ವಿಸ್ತರಣೆಗೆ ಮುಹೂರ್ತ: ಆಕಾಂಕ್ಷಿಗಳಲ್ಲಿ ಉತ್ಸಾಹ

|
Google Oneindia Kannada News

ಬೆಂಗಳೂರು, ನವೆಂಬರ್ 17: ಸರ್ಕಾರ ರಚನೆಯಾದ ಸಂದರ್ಭದಿಂದಲೂ ಕಗ್ಗಂಟಾಗಿಯೇ ಉಳಿದಿರುವ ಸಚಿವ ಸಂಪುಟದ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರ ನಡುವೆ ಶನಿವಾರ ಸಭೆ ನಡೆದು ಈ ಬಗ್ಗೆ ಚರ್ಚಿಸಲಾಯಿತು.

ಎಂ.ಬಿ.ಪಾಟೀಲ್‌-ವೇಣುಗೋಪಾಲ್ ಭೇಟಿ: ಚುರುಕಾದ ಸಚಿವ ಸ್ಥಾನ ಆಕಾಂಕ್ಷಿಗಳುಎಂ.ಬಿ.ಪಾಟೀಲ್‌-ವೇಣುಗೋಪಾಲ್ ಭೇಟಿ: ಚುರುಕಾದ ಸಚಿವ ಸ್ಥಾನ ಆಕಾಂಕ್ಷಿಗಳು

ನವೆಂಬರ್ 28ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್‌ಗೆ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

karnataka congress jds coalition government cabinet expansion date fixed

ಸಂಪುಟ ವಿಸ್ತರಣೆಯ ಧರ್ಮ ಸಂಕಟವನ್ನು ನಿಭಾಯಿಸುವ ಹೊಣೆಗಾರಿಕೆಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವಗೌಡ ಅವರಿಗೇ ಬಿಟ್ಟುಬಿಡಲಾಗಿದೆ. ವೇಣುಗೋಪಾಲ್ ಅವರು ದೇವೇಗೌರೊಂದಿಗೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ನಡೆಸಿದರು.

ಸಂಪುಟ ವಿಸ್ತರಣೆ ಆಗುತ್ತಿದ್ದಂತೆಯೇ ನಿಗಮ ಮಂಡಳಿಗಳಿಗೂ ನೇಮಕ ಪ್ರಕ್ರಿಯೆ ನಡೆಯಲಿದೆ. ಇದರಿಂದ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಮತ್ತೆ ಅತೃಪ್ತಿ ತಲೆದೋರಿದರೂ, ಅದನ್ನು ಕೂಡಲೇ ಶಮನಗೊಳಿಸಲು ಸಾಧ್ಯ ಎಂದು ಯೋಜನೆ ರೂಪಿಸಲಾಗಿದೆ.

ಧನುರ್ ಮಾಸ ಎಫೆಕ್ಟ್ : ಕೈ-ತೆನೆ ಸಂಪುಟ ವಿಸ್ತರಣೆ ಹೊಸ ವರ್ಷಕ್ಕೆಧನುರ್ ಮಾಸ ಎಫೆಕ್ಟ್ : ಕೈ-ತೆನೆ ಸಂಪುಟ ವಿಸ್ತರಣೆ ಹೊಸ ವರ್ಷಕ್ಕೆ

ಶುಕ್ರವಾರ ದಿನೇಶ್ ಗುಂಡೂರಾವ್ ಅವರು ದೇವೇಗೌಡರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆ ಕಾಲ ಸಮಾಲೋಚನೆ ನಡೆಸಿದ್ದರು.

ಸಂಪುಟ ವಿಸ್ತರಣೆ ವಿವಿಧ ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇದೆ. ಈಗ ವಿಧಾನಸಭೆ ಉಪ ಚುನಾವಣೆಯೂ ಮುಗಿದಿರುವುದರಿಂದ ಈಗಲೂ ವಿಸ್ತರಣೆ ಆಗದೆ ಇದ್ದರೆ ಪಕ್ಷದಲ್ಲಿ ಮತ್ತೆ ಅಸಮಾಧಾನ ಭುಗಿಲೇಳುವ ಸೂಚನೆಗಳು ಕಾಣಿಸುತ್ತಿದೆ.

ಅಂತೂ ಇಂತೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ದಿನೇಶ್ ಘೋಷಣೆ ಅಂತೂ ಇಂತೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್: ದಿನೇಶ್ ಘೋಷಣೆ

ಹೀಗಾಗಿ ಅತೃಪ್ತ ಶಾಸಕರನ್ನು ತಣಿಸಲು ತ್ವರಿತವಾಗಿ ಸಂಪುಟ ವಿಸ್ತರಣೆ ಅತ್ಯಗತ್ಯ ಎಂದು ಹೈಕಮಾಂಡ್‌ಗೆ ವೇಣುಗೋಪಾಲ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಸಚಿವ ಸ್ಥಾನದ ಆಕಾಂಕ್ಷಿಗಳು ಅವರ ಮೇಲೆ ಸಂಪುಟ ವಿಸ್ತರಣೆಗೆ ಒತ್ತಡ ಹಾಕಿದ್ದರು.

English summary
Karnataka Congress Incharge KC Venugopal informed the High command to expand the cabinet on November 28, after the meeting with congress and JDS leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X