100 ಕೋಟಿ ವೆಚ್ಚದಲ್ಲಿ ಕೆರೆ ಕಾಯಕಲ್ಪಕ್ಕೆ ಸಂಪುಟ ಸಭೆ ನಿರ್ಧಾರ

Subscribe to Oneindia Kannada

ಬೆಂಗಳೂರು, ಮೇ 17: ಸತತ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಅತಿ ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಕೆರೆಗಳ ಹೂಳೆತ್ತುವ ಯೋಜನೆಗೆ 100 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದು, ಒಂದೆರಡು ದಿನಗಳಲ್ಲಿ ಹಣಕಾಸಿನ ಇಲಾಖೆಯ ಅನುಮತಿ ಪಡೆದು ಅಂತಿಮ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

Karnataka Cabinet decided to desilting lakes with Rs 100 crores

ಮಳೆಗಾಲಕ್ಕೂ ಮೊದಲೇ ಹೂಳೆತ್ತಲಾಗುವುದು. ಮಳೆಗಾಲ ಆರಂಭದ ಮುನ್ನವೇ ಕೆರೆಗಳ ಹೂಳೆತ್ತುವುದರಿಂದ ಹೆಚ್ಚು ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

100 ಕೋಟಿ ವೆಚ್ಚದಲ್ಲಿ ಕರಾವಳಿಯಲ್ಲಿ ವೆಂಟೆಡ್ ಡ್ಯಾಂ
ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು ಹಾಗೂ ಉತ್ತರ ಕನ್ನಡದಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನು ದಾಸ್ತಾನು ಮಾಡಲು 100 ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸಲಾಗುವುದು. ಮೇಲ್ಮೈ ನೀರನ್ನು ಹೆಚ್ಚು ಸಂಗ್ರಹ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಜಯಚಂದ್ರ ಮಾಹಿರಿ ನೀಡಿದ್ದಾರೆ.

ಬಡ್ತಿ ಮೀಸಲಾತಿ

ಬಡ್ತಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯ ಸರ್ಕಾರದ ಮೇಲ್ಮನವಿ ಜೊತೆಗೆ ಹಲವಾರು ಖಾಸಗಿ ಅರ್ಜಿಗಳು ನ್ಯಾಯಲಯದ ಮುಂದೆ ಸಲ್ಲಿಕೆಯಾಗಿದೆ. ನ್ಯಾಯಾಲಯ ಯಾವುದೇ ಸಂದರ್ಭದಲ್ಲಿ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಈಗಾಗಲೇ ಸುಪ್ರಿಂಕೋರ್ಟ್‍ನ ನಿರ್ದೇಶನದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಸಮಿತಿ ವರದಿ ನೀಡಿದೆ. ಇದನ್ನು ಆಡಳಿತ, ಸಿಬ್ಬಂದಿ ಸುಧಾರಣಾ ಇಲಾಖೆ ಶೀಘ್ರದಲ್ಲಿ ಅನುಷ್ಠಾನಗೊಳಿಸುವ ಸಿದ್ದತೆ ಮಾಡಿ ಕೊಂಡಿದೆ ಎಂದು ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka cabinet meeting decided to desilting of 5 lakes in every talluk with the cost of 100 crores said minister TB Jayachandra.
Please Wait while comments are loading...