ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಂದ್ : ಹೋಟೆಲ್ ಸಂಘದ ಮಹತ್ವದ ನಿರ್ಧಾರ

|
Google Oneindia Kannada News

ಬೆಂಗಳೂರು, ಜ 23: ಮಹಾದಾಯಿ ನದಿನೀರು ಹಂಚಿಕೆ ವಿಚಾರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಗಳುರು ಹೋಟೆಲ್ ಅಸೋಸಿಯೇಷನ್ ಬೆಂಬಲ ನೀಡದಿರಲು ನಿರ್ಧರಿಸಿದೆ.

ಗುರುವಾರ, ಜನವರಿ 25ಕ್ಕೆ ಕರೆ ನೀಡಿರುವ ಬಂದ್ ಗೆ ನಮ್ಮ ಬೆಂಬಲವಿಲ್ಲ. ಬಂದ್ ನಡೆಯುವುದರಿಂದ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದು ಅಸೋಸಿಯೇಷನ್ ತಿಳಿಸಿದೆ. ಫೆಬ್ರವರಿ ನಾಲ್ಕರಂದು ಬೆಂಗಳೂರು ಬಂದ್ ಗೆ ಅಸೋಸಿಯೇಷನ್ ನಿರ್ಧಾರ ಏನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಜನವರಿ 25ರಂದು ಸರ್ಕಾರಿ ಬಸ್‌ಗಳು ರಸ್ತೆಗಿಳಿಯವುಜನವರಿ 25ರಂದು ಸರ್ಕಾರಿ ಬಸ್‌ಗಳು ರಸ್ತೆಗಿಳಿಯವು

ಕರ್ನಾಟಕ ರಾಜ್ಯ ರಸ್ತೆಸಾರಿಗೆ ಮತ್ತು ಬಿಎಂಟಿಸಿ ನೌಕರರ ಸಂಘ ಈಗಾಗಲೇ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿವೆ. 25ರಂದು ರಾಜ್ಯಾದ್ಯಂತ ಯಾವುದೇ ಕೆಎಸ್‌ಆರ್‌ಟಿಸಿ ಮತ್ತು ನಗರದಲ್ಲಿ ಬಿಎಂಟಿಸಿ ಬಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗಿಳಿಯುವುದಿಲ್ಲ.

Karnataka bundh on Jan 25: Bengaluru Hotels Association decided not to support bundh

ಗುರುವಾರದ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ, ನಾರಾಯಣ ಗೌಡರ ಬಣ ಬೆಂಬಲ ನೀಡಬೇಕೋ, ಬೇಡವೋ ಎನ್ನುವುದನ್ನು ಸಂಘದ ಸದಸ್ಯರ ಜೊತೆ ಮಾತುಕತೆ ನಡೆಸಿ ಬುಧವಾರ ನಿರ್ಧರಿಸಲಾಗುವುದು ಎಂದು ನಾರಾಯಣ ಗೌಡರು 'ಒನ್ ಇಂಡಿಯಾ' ಗೆ ತಿಳಿಸಿದ್ದಾರೆ.

ಬಂದ್ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಖಡಕ್ ಉತ್ತರಬಂದ್ ಕುರಿತ ಬಿಜೆಪಿ ಟೀಕೆಗೆ ಸಿದ್ದರಾಮಯ್ಯ ಖಡಕ್ ಉತ್ತರ

ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘಟನೆ ಕೂಡಾ ಬಂದ್ ಗೆ ಬೆಂಬಲ ನೀಡುವ ವಿಚಾರವಾಗಿ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ನಮ್ಮನ್ನು ಯಾವುದೇ ಸಂಘಟನೆಗಳು ಸಂಪರ್ಕಿಸಲಿಲ್ಲ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.

English summary
Mahadayi water sharing issue, Karnataka bundh on Jan 25: Bengaluru Hotels Association decided not to support bundh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X