ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಬಜೆಟ್‌: ಮೆಟ್ರೋ 3ನೇ ಹಂತ ವಿಸ್ತರಣೆಗೆ ಸಾವಿರ ಕೋಟಿ

By Nayana
|
Google Oneindia Kannada News

ಬೆಂಗಳೂರು, ಜು.5: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚೊಚ್ಚಲ ಬಜೆಟ್ ಗುರುವಾರ ಮಂಡನೆ ಮಾಡಿದರು. 2,13,734 ಲಕ್ಷ ಕೋಟಿ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ಕೇವಲ ನಮ್ಮ ಮೆಟ್ರೋ ಅಭಿವೃದ್ಧಿಗೆ ಮೀಸಲಿಡಲಾಗಿದೆ.

ನಮ್ಮ ಮೆಟ್ರೋದಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಿದೆ, ಟ್ರಾಫಿಕ್ ಸಮಸ್ಯೆ ದೂರವಾಗಿದೆ. ಈಗಾಗಲೇ ನಮ್ಮ ಮೆಟ್ರೋ ಮೊದಲ 42.3 ಕಿ.ಮೀ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ. ಇನ್ನು ಎರಡನೇ ಹಂತದ ಕಾಮಗಾರಿ 2019ರಲ್ಲಿ ಮುಗಿಯಲಿದೆ.

ಕರ್ನಾಟಕ ಬಜೆಟ್‌: ಬೆಂಗಳೂರಿಗೆ ಏನೇನು ಸಿಕ್ಕಿದೆ?ಕರ್ನಾಟಕ ಬಜೆಟ್‌: ಬೆಂಗಳೂರಿಗೆ ಏನೇನು ಸಿಕ್ಕಿದೆ?

ಇದೀಗ ರಾಜ್ಯ ಬಜೆಟ್‌ನಲ್ಲಿ ಸಿಂಹಪಾಲನ್ನು ಬೆಂಗಳೂರಿಗೆ ಮೀಸಲಿರಿಸಲಾಗಿದೆ. ನಮ್ಮ ಮೆಟ್ರೋ ಅಭಿವೃದ್ಧಿ ಹಾಗೂ ಮೂರನೇ ಹಂತದ ಕಾಮಗಾರಿಗೆ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ.ಮೆಟ್ರೋ ಮೂರನೇ ಹಂತದಲ್ಲಿ ಜೆಪಿನಗರದಿಂದ ಕೆಆರ್‌ ಪುರಂಗೆ 42 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ.

Karnataka budget: HDK allots Thousand crore for Namma metro

ಟೋಲ್‌ಗೇಟ್‌-ಕಡಬಗೆರೆ 12.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ, 3 ಕಿ.ಮೀ ಮಾರ್ಗದ ಗೊಟ್ಟಿಗೆರೆ- ಬಸವಪುರ, 18.95 ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆ 10.6 ಕಿ.ಮೀ ಮಾರ್ಗ, ಇಬ್ಲೂರಿನಿಂದ ಒಟ್ಟು 6.67 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ.

English summary
Ahead of Karnataka Assembly Election 2018, Karnataka Chief Minister HD Kumaraswamy presented his first budget. HDK allots Thousand crore for Namma metro.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X