ಬಿಡಿಎ ಸೈಟು, ನಲ್ಲಿಯಲ್ಲಿ ನೀರು, ಬಿಟಿಎಂಸಿ ಬಸ್ ಬಜೆಟ್ ನಲ್ಲಿ ಗಿಟ್ಟಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಧಾನಿ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರೂ, ಹೊಸ ಘೋಷಣೆಗಳು, ನಾಗರಿಕ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿಲ್ಲ. ಬಿಬಿಎಂಪಿ, ಬಿಡಿಎ, ಬಿಎಂಆರ್ ಸಿಎಲ್, ಬಿಡಬ್ಲೂಎಸ್ಎಸ್ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನಿರೀಕ್ಷಿಸಲಾಗಿತ್ತು.

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ನೀರಿನ ತಾಂತ್ರಿಕ ಹಾಗೂ ವಾಣಿಜ್ಯ ಸೋರಿಕೆಯನ್ನು ತಡೆಗಟ್ಟುವುದು ದೊಡ್ಡ ಸಮಸ್ಯೆಯಾಗಿದ್ದರೆ, ಬಿಬಿಎಂಪಿಗೂ ಸಾಲದ ಹೊರೆ ತಗ್ಗಿಲ್ಲ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ವರ್ಷ ಕೂಡಾ ಕೆಂಪೇಗೌಡ ಬಡಾವಣೆ, ಫ್ಲಾಟ್ ನಿರ್ಮಾಣ ಹಂಚಿಕೆ ಹಾಗೂ ಟೌನ್ ಶಿಪ್ ನಿರ್ಮಾಣ, ಬಿಎಂಟಿಸಿಯಿಂದ ಹೊಸ ಬಸ್ ಖರೀದಿ ಇವೆ ಕಳೆದ ವರ್ಷದ ಬಜೆಟ್ ಪ್ರತಿಯ ಪುನಾರಾವರ್ತನೆಯಾಗಿದೆ.

ಇದರ ಜತೆಗೆ ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಮ್ಮ ಮೆಟ್ರೋ ವಿವಿಧ ಹಂತದ ಕಾಮಗಾರಿ ಚಾಲನೆಯಲ್ಲಿದೆ. ಉಳಿದಂತೆ ಬೆಂಗಳೂರಿನ ದಿಢೀರ್ ಮಳೆ, ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಟ್ರಾಫಿಕ್ ಸಮಸ್ಯೆಗಳಿಗೆ ಯಾವುದೆ ಪರಿಹಾರ ಸೂಚಿಸಿಲ್ಲ.. ಇನ್ನಷ್ಟು ವಿವರ ಮುಂದೆ ಓದಿ..

ಕಾಮಗಾರಿಯ ರೀಚ್-4ರ ವಿಸ್ತರಣೆ

ಕಾಮಗಾರಿಯ ರೀಚ್-4ರ ವಿಸ್ತರಣೆ

ಬಿಡಿಎ ಸಹಯೋಗದೊಂದಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್‌ಗಳ ಅಭಿವೃದ್ಧಿ.
ಕಾಮಗಾರಿಯ ರೀಚ್-4ರ ವಿಸ್ತರಣೆ (ಪುಟ್ಟೇನಹಳ್ಳಿಯಿಂದ ಅಂಜನಾಪುರ) ಮತ್ತು ರೀಚ್-2ರ
ವಿಸ್ತರಣೆಯು (ಮೈಸೂರು ರಸ್ತೆಯಿಂದ ಕೆಂಗೇರಿ) ಕಾಮಗಾರಿಗಳು ಪ್ರಗತಿಯಲ್ಲಿ.
* ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-20 ಅಡಿ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರಂ ಜಂಕ್ಷನ್ (17 ಕಿ.ಮೀ.ಉದ್ದ) ವರೆಗಿನ ಹೆಚ್ಚುವರಿ ಮಾರ್ಗಕ್ಕೆ ವಿನೂತನ
ವಿಧಾನಗಳಿಂದ ಅನುದಾನ, 4200 ಕೋಟಿ ರೂ. ಘಟಕ ವೆಚ್ಚದಲ್ಲಿ ಯೋಜನೆಗೆ ಚಾಲನೆ.

* ಹಂತ-3ರ ಕಾರ್ಯಸಾಧ್ಯತೆ ಅಧ್ಯಯನ ಪೂರ್ಣ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ
ನಿಲ್ದಾಣಕ್ಕೆ ಸೂಕ್ತ ಸಂಪರ್ಕ ಕಲ್ಪಿಸುವ ಮಾರ್ಗ ಶೀಘ್ರವೇ ಅಂತಿಮ.

ಬಿಬಿಎಂಪಿಗೆ ಬಜೆಟ್ ನಲ್ಲಿ ದಕ್ಕಿದ್ದು

ಬಿಬಿಎಂಪಿಗೆ ಬಜೆಟ್ ನಲ್ಲಿ ದಕ್ಕಿದ್ದು

690 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 80 ಕಿ.ಮೀ. ಉದ್ದದ ಆಯ್ದ 43 ಪ್ರಮುಖ ರಸ್ತೆಗಳ ಅಭಿವೃದ್ಧಿ;
* ಟೆಂಡರ್‌ಶ್ಯೂರ್ ಮಾದರಿಯ 25 ಕಿ.ಮೀ. ಉದ್ದದ 25 ಅಂತರ್ ಸಂಪರ್ಕ ರಸ್ತೆಗಳು ಮೇಲ್ದರ್ಜೆಗೆ- 250 ಕೋಟಿ ರೂ.
* ಸಂಚಾರ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 150 ಕೋಟಿ ರೂ.
* 200 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ 200 ಕೋಟಿ ರೂ..
*ತಡೆರಹಿತ ವಾಹನಗಳ ಸಂಚಾರಕ್ಕಾಗಿ ಆಯ್ದ 9 ವಾಹನ ದಟ್ಟಣೆ ಜಂಕ್ಷನ್‌ಗಳಲ್ಲಿ ಗ್ರೇಡ್ ಸಪರೇಟರ್‌ಗಳ ನಿರ್ಮಾಣಕ್ಕೆ 421 ಕೋಟಿ ರೂ.

ಬಿಬಿಎಂಪಿ -2

ಬಿಬಿಎಂಪಿ -2

* ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕಾಗಿ ಬಿಬಿಎಂಪಿಗೆ
150 ಕೋಟಿ ರೂ.

* ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೃಹತ್ ಮಳೆ ನೀರು ಚರಂಡಿಗಳ ಅಭಿವೃದ್ಧಿಗೆ
300 ಕೋಟಿ ರೂ.
* ಸಂಚಾರಿ ಇಂಜಿನಿಯರಿಂಗ್ ಕಾಮಗಾರಿಗಳಿಗೆ 200 ಕೋಟಿ ರೂ.
* ಖಾಸಗಿ ಸಹಭಾಗಿತ್ವದಲ್ಲಿ ಸ್ಕೈವಾಕ್‌ಗಳ ನಿರ್ಮಾಣ ಉತ್ತೇಜಿಸಲು ರೂಪದಲ್ಲಿ
ಬಿಬಿಎಂಪಿಗೆ 80 ಕೋಟಿ ರೂ. ಅನುದಾನ.
* 50 ಕೋಟಿ ರೂ. ವೆಚ್ಚದಲ್ಲಿ 1000 ಸಾರ್ವಜನಿಕ ಶೌಚಾಲಯ ನಿರ್ಮಾಣ.
* ಜನಸಾಮಾನ್ಯರಿಗೆ ಊಟ ಮತ್ತು ಉಪಹಾರವನ್ನು ಕೈಗೆಟುಕುವ
ದರದಲ್ಲಿ ಒದಗಿಸಲು ನಮ್ಮ ಕ್ಯಾಂಟೀನ್ ವಿನೂತನ ಯೋಜನೆಗೆ ಚಾಲನೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲಿ ತಲಾ ಒಂದು ಕ್ಯಾಂಟೀನ್ ಪ್ರಾರಂಭ; 100 ಕೋಟಿ.

 ನೀರು ಸರಬರಾಜು ಮತ್ತು ಒಳಚರಂಡಿ

ನೀರು ಸರಬರಾಜು ಮತ್ತು ಒಳಚರಂಡಿ

*ವಾಣಿಜ್ಯ ಸೋರಿಕೆಯನ್ನು ಶೇ.40ಕ್ಕೆ ಇಳಿಸುವ ಗುರಿ.
* ನಗರದ 110 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ- 1886 ಕೋಟಿ ರೂ.
* ಜೈಕಾ ಸಹಾಯದೊಂದಿಗೆ 5052 ಕೋಟಿ ರೂ.ಗಳ ವೆಚ್ಚದಲ್ಲಿ ಕಾವೇರಿ 5ನೇ ಹಂತ ಹಾಗೂ 110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಗೆ ಚಾಲನೆ;
* 775 ದಶಲಕ್ಷ ಲೀಟರ್ ಕುಡಿಯುವ ನೀರು ಕಾವೇರಿ ನದಿಯಿಂದ ಲಭ್ಯ.
ನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಸಾಮರ್ಥ್ಯ ಹೆಚ್ಚಿಸಲು ಮೆಗಾಸಿಟಿ ಹಾಗೂ ಅಮೃತ್ ಯೋಜನೆಯಡಿ ಒಟ್ಟು 1338 ಕೋಟಿ ರೂ. ವೆಚ್ಚದಲ್ಲಿ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಆರಂಭ.
* ಕೊಳಚೆ ಪ್ರದೇಶದ 30/20 ನಿವೇಶನಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಪ್ರತಿ ತಿಂಗಳು ಉಚಿತವಾಗಿ 10,000 ಲೀಟರ್ ನೀರು ಪೂರೈಕೆ ಹಾಗೂ ಈ ನಿವಾಸಿಗಳ ಬಾಕಿ ಬಿಲ್ಲು ಮನ್ನಾ.
ತಿಪ್ಪಗೊಂಡನಹಳ್ಳಿ ಜಲಾಶಯ ಪುನಶ್ಚೇತನಕ್ಕೆ ಕ್ರಮ.

*42 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 10 ಕೆರೆಗಳ ಸಮಗ್ರ ಅಭಿವೃದ್ಧಿ ಪೂರ್ಣ;
* ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ.

3 ಸಾವಿರ ಫ್ಲ್ಯಾಟ್‌ಗಳ ನಿರ್ಮಾಣ

3 ಸಾವಿರ ಫ್ಲ್ಯಾಟ್‌ಗಳ ನಿರ್ಮಾಣ

3 ಸಾವಿರ ಫ್ಲ್ಯಾಟ್‌ಗಳ ನಿರ್ಮಾಣ ಮತ್ತು ಹಂಚಿಕೆ ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ
5000 ನಿವೇಶನಗಳ ಹಂಚಿಕೆ.
* ಕೋನದಾಸಪುರ ಗ್ರಾಮದ 166 ಎಕರೆ ಭೂಮಿಯಲ್ಲಿ ನವೀನ ಮಾದರಿಯ ಟೌನ್‌ಶಿಪ್ ಅಭಿವೃದ್ಧಿ.
*350 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆಯ ಮೂಲಕ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿ.ಮೀ. ಪ್ರಮುಖ ಅರ್‍ಟೀರಿಯಲ್ ರಸ್ತೆ
ನಿರ್ಮಾಣ; ಈ ರಸ್ತೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆಯ್ದ 5 ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಕೇಂದ್ರಗಳ ಅಭಿವೃದ್ಧಿ.
*42 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 10 ಕೆರೆಗಳ ಸಮಗ್ರ ರಅಭಿವೃದ್ಧಿ ಪೂರ್ಣ; ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ.
* ಹೊರವರ್ತುಲ ರಸ್ತೆಯ ಹೆಬ್ಬಾಳ ಜಂಕ್ಷನ್ ನಲ್ಲಿ ಕೆಳಸೇತುವೆ ನಿರ್ಮಾಣ ಹಾಗೂ ಮೇಲು ಸೇತುವೆಯ ಅಗಲೀಕರಣ- 88 ಕೋಟಿ ರೂ.
* 44 ಕೋಟಿ ರೂ. ವೆಚ್ಚದ ಹೊರವರ್ತುಲ ರಸ್ತೆ ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಮೇಲು ಸೇತುವೆ ಜೂನ್ 2017ರಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತ.
* ಬಿ.ಎಂ.ಆರ್.ಸಿ.ಎಲ್ ಸಹಯೋಗದೊಂದಿಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಹಾಗೂ ಕೆ.ಆರ್.ಪುರ ಜಂಕ್ಷನ್‌ಗಳ ಅಭಿವೃದ್ಧಿ.

ಬಿಎಂಟಿಸಿ

ಬಿಎಂಟಿಸಿ

ಬಿ.ಎಂ.ಟಿ.ಸಿ.ಯಿಂದ 3000 ಹೊಸ ಬಸ್ಸುಗಳ ಸೇರ್ಪಡೆಗೆ ಕ್ರಮ; ಬಸ್‌ಗಳ ಖರೀದಿಗೆ ಬಿಎಂಟಿಸಿ ಪಡೆಯುವ ಸಾಲ ಮತ್ತು ಬಡ್ಡಿಯ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಬಸ್ ಖರೀದಿ ಪ್ರಕ್ರಿಯೆಗೆ ಬೆಂಬಲ.
* ಮೂರು ಸಾರಿಗೆ ನಿಗಮಗಳಿಂದ ಒಟ್ಟು 3,250 ಹೊಸ ಬಸ್‌ಗಳ ಖರೀದಿ.
* ಮಹಿಳಾ ಪ್ರಯಾಣಿಕರ ಹೆಚ್ಚಿನ ಸುರಕ್ಷತೆಗಾಗಿ ಬಿ.ಎಂ.ಟಿ.ಸಿ.
ಮೊಬೈಲ್ ಅಪ್ಲಿಕೇ/ನ್‌ನಲ್ಲಿ ಹೊಸದಾಗಿ ಎಸ್‌ಒಎಸ್ ಬಟನ್ ಮತ್ತು ಟ್ರಾಕಿಂಗ್ ಸೌಲಭ್ಯ ಅಳವಡಿಕೆ.
* ಉಚಿತ ಹಾಗೂ ರಿಯಾಯಿತಿ ದರದ ಪಾಸ್‌ಗಳನ್ನು ಹೊಂದಿರುವ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ.
* ಚಾಲಕರು ಮತ್ತು ಮೆಕ್ಯಾನಿಕ್‌ಗಳಿಗೆ ಸಾಮರ್ಥ್ಯವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಪ್ರತಿವರ್ಷ 25,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಈಗಿರುವ ಕೇಂದ್ರಗಳು ಮೇಲ್ದರ್ಜೆಗೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Chief Minister Siddaramaiah presented the State budget for 2017-18 on Wednesday, March 1, 2017. What did BDA, BBMP, BWSSB, Namma Metro, BMTC get. Here are the details.
Please Wait while comments are loading...