ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಮಾರ್ಚ್ 18) 11ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.

ಬಿಬಿಎಂಪಿ ಸಾಲದ ಹೊರೆ, ಮೂಲ ಸೌಕರ್ಯ ಅಭಿವೃದ್ಧಿ, ಕಸ ವಿಲೇವಾರಿ, ಮೆಟ್ರೋ, ಟ್ರಾಫಿಕ್ ಜಾಮ್ ಸಮಸ್ಯೆ, ಜಲಮಂಡಳಿ ಮುಂತಾದವುಗಳಿಗೆ ಬಜೆಟ್‌ನಲ್ಲಿ ಸಾಕಷ್ಟು ಅನುದಾನ ನಿರೀಕ್ಷಿಸಲಾಗಿತ್ತು. ಬಿಬಿಎಂಪಿ, ಬಿಡಿಎ, ಬಿಎಂಆರ್ ಸಿಎಲ್, ಬಿಡಬ್ಲೂಎಸ್ಎಸ್ ಸಂಸ್ಥೆಗೆ ಎಷ್ಟು ಸಿಕ್ಕಿದೆ. ಮುಂದೆ ಓದಿ...[ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

ರಸ್ತೆ
* 4 ಪ್ರಮುಖ ಸಿಗ್ನಲ್ ಫ್ರೀ ಕಾರಿಡಾರ್ ಒಟ್ಟು 51.65 ಕಿ.ಮೀ
* 12 ಟೆಂಡರ್ ಶ್ಯೂರ್ ರಸ್ತೆ
* ವಾರ್ಡ್ ಮಟ್ಟದಲ್ಲಿ ರಸ್ತೆ ಅಭಿವೃದ್ಧಿಗಾಗಿ 112 ರಸ್ತೆ ಅಭಿವೃದ್ಧಿಗೆ 797 ಕೋಟಿ ರು ಅನುದಾನ

ಕೆರೆ [Live : ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]
* ಕೆರೆ ಅಭಿವೃದ್ಧಿ ಹಾಗೂ ಸ್ವಚ್ಛತೆಗಾಗಿ 90.85 ಕೋಟಿ ರು
* ಮಳೆ ಚರಂಡಿ ನಿರ್ಮಾಣಕ್ಕೆ 800 ಕೋಟಿ ರು
* ಬಿಬಿಎಂಪಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ 250 ಕೋಟಿ ರು

ಆರೋಗ್ಯ
* ಕೆಸಿ ಜನರಲ್ ಆಸ್ಪತ್ರೆಯಲ್ಲಿ ವಿಶೇಷ ಡಯಾಲಿಸಿಸ್ ಘಟಕ ಸ್ಥಾಪನೆ

ವಸತಿ:
* 2016-17ರ ಅವಧಿಯಲ್ಲಿ ಬಿಡಿಎಯಿಂದ 300 ಫ್ಲಾಟ್ ಗಳ ನಿರ್ಮಾಣ.
* ಕೆಂಪೇಗೌಡ ಬಡಾವಣೆ ಅಡಿಯಲ್ಲಿ ಮಾರ್ಚ್ 2017ರೊಳಗೆ 10ಸಾವಿರ ನಿವೇಶನ ಹಂಚಿಕೆ.

ಸಾರಿಗೆ
* ನಗರದ ಆಯ್ದ ಸ್ಥಳಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್
* ಬಿಎಂಟಿಸಿಯಿಂದ 660 ಹೊಸ ಬಸ್ ಖರೀದಿ. ಒಟ್ಟಾರೆ ಬಿಎಂಟಿಸಿ, ಬಿಎಂಆರ್ ಡಿಎ, ಬಿಡಿಎ, ಬಿಬಿಎಂಪಿಗೆ ಏನು ದಕ್ಕಿದೆ ಮುಂದೆ ಓದಿ...

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ

* 110 ಹಳ್ಳಿಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ಒದಗಿಸಲು 5,108 ಕೋಟಿ ರು
* 4 ವರ್ಷಗಳಲ್ಲಿ ವೃಷಭಾವತಿ, ಹೆಬ್ಬಾಳ, ಕೋರಮಂಗಲ, ಚಲ್ಲಘಟ್ಟ, ದೊಡ್ಡಬೆಲೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ.
* ಜಿಕೆವಿಕೆ ಜಲ ಸಂಗ್ರಹಾಲಯದಿಂದ ಎಚ್ ಬಿಆರ್ ಗೆ ಕೊಳವೆ ಮಾರ್ಗ.
* ರಾಜರಾಜೇಶ್ವರಿ ಮತ್ತು ಕೆಂಗೇರಿ ಉಪನಗರಗಳಲ್ಲಿ 110 ಕಿ.ಮೀ ಒಳಚರಂಡಿ.
* ಹುಳಿಮಾವು, ಬೇಗೂರು, ಸಾರಕ್ಕಿ, ಅಗರ, ಕೆ.ಆರ್ ಪುರಂ ಕೆರೆ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕ.
* ಕೋರಮಂಗಲ ಕ್ರೀಡಾಸಂಕೀರ್ಣ ಬಳಿ ಪಂಪ್ ಹೌಸ್ ನಿರ್ಮಾಣ
* 22 ಕೊಳಗೇರಿಗಳಿಗೆ ನೀರು ಸರಬರಾಜು ಯೋಜನೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಕ್ಕಿದ್ದು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಿಕ್ಕಿದ್ದು

* ಮಧ್ಯಮ, ಕಡಿಮೆ ಆದಾಯ ಗುಂಪಿಗಾಗಿ ಕಡಿಮೆದರದಲ್ಲಿ 3,000 ಫ್ಲಾಟ್ ಗಳ ನಿರ್ಮಾಣ, ಹಂಚಿಕೆ
* ಕೆಂಪೇಗೌಡ ಬಡಾವಣೆಯಿಂದ 10,000 ನಿವೇಶನ ಮಾರ್ಚ್ 2017ರೊಳಗೆ ಹಂಚಿಕೆ
* ಇಂದಿರಾನಗರ, ಆಸ್ಟಿನ್ ಟೌನ್, ಆರ್ ಟಿ ನಗರಗಳ ವಾಣಿಜ್ಯ ಸಂಕೀರ್ಣ ಪುನರ್ ನಿರ್ಮಾಣ.
* ಸಿಲ್ಕ್ ಬೋರ್ಡ್ -ಹೆಬ್ಬಾಳ, ಕೆ.ಆರ್ ಪುರಂನಿಂದ ತುಮಕೂರು ರಸ್ತೆ, ವರ್ತೂರು ಕೆರೆಯಿಂದ ಮೈಸೂರು ರಸ್ತೆ ತನ್ಕ 100 ಕಿ.ಮೀ ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ 18,000 ಕೋಟಿ ರು ಯೋಜನೆ.

ಬಿಬಿಎಂಪಿಗೆ ಬಜೆಟ್ ನಲ್ಲಿ ದಕ್ಕಿದ್ದಿಷ್ಟು-1

ಬಿಬಿಎಂಪಿಗೆ ಬಜೆಟ್ ನಲ್ಲಿ ದಕ್ಕಿದ್ದಿಷ್ಟು-1

* ನಾಲ್ಕು ಸಿಗ್ನಲ್ ಫ್ರೀ ಕಾರಿಡಾರ್ 51.65 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ 440 ಕೋಟಿ ರು.
* 12 ಟೆಂಡರ್ ಶ್ಯೂರ್ ರಸ್ತೆ, 16.57 ಕಿ.ಮೀ ನಿರ್ಮಾಣ, 200 ಕೋಟಿ ರು.
* ಪ್ರಮುಖ 112 ರಸ್ತೆಗಳನ್ನು 260 ಕೋಟಿ ರು ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ವಾರ್ಡ್ ಮಟ್ಟದ ರಸ್ತೆ ಕಾಮಗಾರಿ 797 ಕೋಟಿ ರು ವೆಚ್ಚದಲ್ಲಿ ಪಾಲಿಕೆ ಅಭಿವೃದ್ಧಿ ಪಡಿಸಲಿದೆ.
* 300 ಕಿ.ಮೀ ಉದ್ದದ ರಸ್ತೆಗಳಿಗೆ ವೈಟ್ ಟ್ಯಾಪಿಂಗ್.

ಕ್ರಿಯಾ ಯೋಜನೆಗೆ ಅನುಮೋದನ

ಕ್ರಿಯಾ ಯೋಜನೆಗೆ ಅನುಮೋದನ

* ಬೆಂಗಳೂರು ನಗರ ಅಭಿವೃದ್ಧಿ ಕಾಮಗಾರಿಗೆ 1,976 ಕೋಟಿ ರು ಕ್ರಿಯಾ ಯೋಜನೆಗೆ ಅನುಮೋದನೆ.
* ಕೆ.ಆರ್ ಮಾರುಕಟ್ಟೆ, ರಸೆಲ್ ಮಾರ್ಕೆಟ್, ಜಾನ್ಸನ್ ಮಾರ್ಕೆಟ್ ಅಭಿವೃದ್ಧಿ.
* ಆಯ್ದ ಸ್ಥಳಗಳಲ್ಲಿ ಬಹುಮಹಡಿ ಕಾರ್ ಪಾರ್ಕಿಂಗ್ ವ್ಯವಸ್ಥೆ.
* ಪ್ರಮುಖ ಜಂಕ್ಷನ್ ಗಳಲ್ಲಿ ಗ್ರೇಡ್ ಸೆಪರೇಟರ್ ಗಳ ನಿರ್ಮಾಣ.
* ಘನತ್ಯಾಜ್ಯ ನಿರ್ವಹಣೆಗೆ 500 ಕೋಟಿ ರು
* ಬಿಬಿಎಂಪಿ ವ್ಯಾಪ್ತಿ 110 ಗ್ರಾಮಗಳ ಅಭಿವೃದ್ಧಿಗೆ 250 ಕೋಟಿ ರು.

ಬಿಎಂಟಿಸಿ ಹಾಗೂ ಇತರೆ ಸಂಸ್ಥೆಗೆ

ಬಿಎಂಟಿಸಿ ಹಾಗೂ ಇತರೆ ಸಂಸ್ಥೆಗೆ

ಬಿಎಂಆರ್ ಡಿಎ: ಎಸ್ ಟಿ ಆರ್ ಆರ್ ಮತ್ತು ಬೃಹತ್ ಬೆಂಗಳೂರು -ಬಿಡದಿ ಸ್ಮಾರ್ಟ್ ಸಿಟಿ- ಎಲ್ ಪಿಎ ಮಾಸ್ಟರ್ ಪ್ಲಾನ್ ವರದಿ ಸಿದ್ಧಪಡಿಸಲಾಗುವುದು.
* ಬೆಂಗಳೂರಿನಲ್ಲಿ ಜಿಟಿಟಿಸಿ ಉಪಕೇಂದ್ರ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ.
* ಬೆಂಗಳೂರಿನಲ್ಲಿ ಜನವರಿ 2017 ರಲ್ಲಿ ಪ್ರತಿಷ್ಠಿತ ಪ್ರವಾಸಿ ಭಾರತೀಯ ದಿವಸ ಆಯೋಜನೆ.
* 33 ಹೊಸ ಬೆಂಗಳೂರು ಒನ್ ಕೇಂದ್ರಗಳ ಸ್ಥಾಪನೆ.
* ಬೆಂಗಳೂರಿನಲ್ಲಿ ಮೂರು ಸಿ.ಎ ಆರ್ ಪಡೆ ಸ್ಥಾಪನೆ
* ಬಿಎಂಟಿಸಿಯಿಂದ 1000 ಬಸ್ ಖರೀಪಿ, ಇಂಟೆಲಿಜೆಂಟ್ ಸಾರಿಗೆ, ಸ್ಮಾರ್ಟ್ ಕಾರ್ಡ್ ಟಿಕೆಟ್ ವ್ಯವಸ್ಥೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah presented the State budget for 2016-17 on Friday, March 18, 2016. What did Bengaluru (Bangalore) get. Here are the details.
Please Wait while comments are loading...