ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ

By Vanitha
|
Google Oneindia Kannada News

ಬೆಂಗಳೂರು, ಮಾರ್ಚ್ 18 : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದಲ್ಲಿ 2016-17ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಆರೋಗ್ಯವಲಯಕ್ಕೆ ಕೆಲವು ವಿಶೇಷ ಕೊಡುಗೆ ನೀಡಿದ್ದಾರೆ.

ಮೈಸೂರಲ್ಲಿ ಜಿಲ್ಲಾಸ್ಪತ್ರೆ ನಿರ್ಮಾಣ, ಕಲಬುರಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ, 'ಸಮಗ್ರ ಮಾತೃ ಆರೋಗ್ಯ ಪಾಲನಾ ಯೋಜನೆ' ಯಡಿ ಗರ್ಭಿಣಿ ಸ್ತ್ರೀಯರಿಗೆ ಸೊಳ್ಳೆ ಪರದೆ ಹೀಗೆ ಹಲವಾರು ಯೋಜನೆಗಳಿಗೆ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ಮಾನ್ಯತೆ ನೀಡಿದ್ದಾರೆ. [ಸಿದ್ದರಾಮಯ್ಯ ಬಜೆಟ್: ಯಾವುದು ಏರಿಕೆ? ಯಾವುದು ಇಳಿಕೆ?]

Karnataka budget 2016-17 benefits for health sector

ಆರೋಗ್ಯ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಗಳು:

* ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಮಗ್ರ ಆರೋಗ್ಯ ಸೇವೆ ಒದಗಿಸಲು 'ಇಂದಿರಾ ಸುರಕ್ಷಾ ಯೋಜನೆ'

* ಜಿಲ್ಲಾ ಆಸ್ಪತ್ರೆ ಮತ್ತು ಶಿಶು ಮತ್ತು ತಾಯಿ ಆಸ್ಪತ್ರೆಗಳಲ್ಲಿ ಶುಚಿತ್ವವುಳ್ಳ ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಕ್ರಮ

* 52.96 ಕೋಟಿ ರೂ 'ಆಪತ್ಭಾಂದವ ಯೋಜನೆ'ಯಡಿ ಹೆದ್ದಾರಿಗಳಲ್ಲಿ ಅಪಘಾತಕ್ಕೊಳಗಾದವರ ತುರ್ತು ಚಿಕಿತ್ಸೆಗೆ 5 ಸ್ಥಳಗಳಲ್ಲಿ ಅಪಘಾತ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ

* 4.49 ಕೋಟಿ ರೂ 'ಡಯಾಲಿಸಿಸ್ ಯೋಜನೆ' ಅಡಿಯಲ್ಲಿ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳ ಡಯಾಲಿಸಿಸ್ ಘಟಕ ಸ್ಥಾಪನೆ

* 'ಸಮಗ್ರ ಮಾತೃ ಆರೋಗ್ಯ ಪಾಲನಾ ಯೋಜನೆ' ಯಡಿ ಗರ್ಭಿಣಿ ಸ್ತ್ರೀಯರಿಗೆ ಸೊಳ್ಳೆ ಪರದೆ

* ಆಸ್ಪತ್ರೆ ಹಾಗೂ ಸಂಚಾರ ವ್ಯವಸ್ಥೆ ಇಲ್ಲದ ಹಳ್ಳಿಗಳಲ್ಲಿ ಸಂಚಾರಿ ಆರೋಗ್ಯ ಹಾಗೂ 'ಮೊಬೈಕ್ ಕ್ಲಿನಿಕ್ ಸೇವೆ'

* ಉಚಿತ ಪ್ರಯೋಗ ಶಾಲೆ ಸೇವೆ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ರೋಗ ನಿರ್ಣಯ ಘಟಕ ಸ್ಥಾಪನೆ

* ಶಿಶು, ಬಾಲವಾಡಿ, ಅಂಗನವಾಡಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಅಭಯ ಯೋಜನೆ

* 6 ಕೋಟಿ ರೂ ವೆಚ್ಚದಲ್ಲಿ ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ 50 ಹಾಸಿಗೆಗಳ ಹಾಗೂ ದಾಂಡೇಲಿ, ಚಿಂಚೋಳಿ ಹಾಗೂ ಟಿ.ನರಸೀಪುರದಲ್ಲಿ 10 ಹಾಸಿಗೆಗಳ ಜಿಲ್ಲಾ ಇಂಟಿಗ್ರೇಟೆಡ್ ಆಸ್ಪತ್ರೆಗಳ ಪ್ರಾರಂಭ

* 3 ಕೋಟಿ ವೆಚ್ಚದಲ್ಲಿ ಆರ್.ಎಂ.ಎಸ್. ವೈದ್ಯಕೀಯ ವಿಜ್ಞಾನ, ಹುಲಿಕೋಟೆ ನಡೆಸುವ ಪ್ರಕೃತಿ ಚಿಕಿತ್ಸಾ ಸಂಸ್ಥೆಗೆ ಒಂದಾವರ್ತಿ ಅನುದಾನ

* 8 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯ ನಿರ್ಮಾಣ

* 60 ಕೋಟಿ ರೂ ವೆಚ್ಚದಲ್ಲಿ ಮೈಸೂರು ನಗರದಲ್ಲಿ ಜಿಲ್ಲಾ ಆಸ್ಪತ್ರೆ ಸ್ಥಾಪನೆ

* 'ಜೀವ ಸಾರ್ಥಕತೆ ಯೋಜನೆ'ಯಡಿ ಅಂಗದಾನ ಸೌಲಭ್ಯ ಒದಗಿಸುವ ಕೋಶದ ಸ್ಥಾಪನೆ

ವೈದ್ಯಕೀಯ ಶಿಕ್ಷಣ

* ಕಾರವಾರ, ಚಾಮರಾಜನಗರ ಮತ್ತು ಮಡಿಕೇರಿಗಳಲ್ಲಿ ವೈದ್ಯಕೀಯ ಕಾಲೇಜುಗಳ ಪ್ರಾರಂಭ

* 50 ಕೋಟಿ ರೂ: ಕಲಬುರಗಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಉನ್ನತೀಕರಣ

* 35 ಕೋಟಿ ರೂ: ವೆಚ್ಚದಲ್ಲಿ ರಾಯಚೂರು ರಾಜೀವ್‌ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಮೇಲ್ದರ್ಜೆಗೆ

* ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ 150 ಸೀಟುಗಳ ಮಿತಿಯ ಒಂದು ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ

* 46.35 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಧಾರವಾಡದ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ನಿಮ್ಹಾನ್ಸ್ ಆಸ್ಪತ್ರೆಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಕ್ರಮ

* ಕಲಬುರಗಿಯಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ

* ರಾಮನಗರದ ಅರ್ಚಕರ ಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕಟ್ಟಡ ನಿರ್ಮಾಣ

* 10 ಕೋಟಿ ರೂ ವೆಚ್ಚದಲ್ಲಿ ಬೆಂಗಳೂರಿನ ಎಸ್‌ಡಿಎಸ್ ಟಿಬಿ ಕೇಂದ್ರದ ಆವರಣದಲ್ಲಿ ಗ್ಯಾಸ್ಟ್ರೊ ಎಂಟರೋಲಜಿ ಸಂಸ್ಥೆಯ ನಿರ್ಮಾಣ

English summary
Karnataka budget 2016-17 benefits for health sector.Karnataka Budget 2016-17 : Chief Minister and Finance Minister Siddaramaiah preset 2016-17 budget on Friday, March 18, 2016. Here is the list of benefits for health sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X