ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಖಂಡ ಬೆಂಗಳೂರನ್ನು ಒಡೆಯಬೇಡಿ : ಬಿಜೆಪಿ ಒತ್ತಾಯ

|
Google Oneindia Kannada News

ಬೆಂಗಳೂರು, ಏ. 9 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಬಾರದು ಎಂದು ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ರಾಜ್ಯಪಾಲರನ್ನು ಭೇಟಿಯಾದ ಸಚಿವ ಟಿ.ಬಿ.ಜಯಚಂದ್ರ ಪಾಲಿಕೆ ವಿಭಜನೆ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡಿದರು. [ಬಿಬಿಎಂಪಿ ವಿಭಜನೆ, ನಿಮ್ಮ ಅನಿಸಿಕೆ ತಿಳಿಸಿ]

ಗುರುವಾರ ಬೆಳಗ್ಗೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಕೆಂಪೇಗೌಡ ಪ್ರತಿಮೆ ಬಳಿಯಿಂದ ರಾಜಭವನದ ತನಕ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರು ಅಖಂಡ ಬೆಂಗಳೂರನ್ನು ಒಡೆಯಬೇಡಿ ಎಂದು ಘೋಷಣೆ ಕೂಗಿದರು. [ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ]

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಉದ್ದೇಶವನ್ನು ಹೊಂದಿದೆ. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು. [ಬಿಬಿಎಂಪಿ ವಿಭಜನೆ ಪ್ರಸ್ತಾಪ ರಾಜಭವನಕ್ಕೆ]

ಬೆಂಗಳೂರನ್ನು ಒಡೆಯುವುದು ಬೇಡ, ಆದ್ದರಿಂದ ಪಾಲಿಕೆ ವಿಭಜನೆ ಸುಗ್ರೀವಾಜ್ಞೆಗೆ ಸಹಿ ಹಾಕಬಾರದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿದ್ದೇವೆ. ಪಾಲಿಕೆಯನ್ನು ಏಕೆ ವಿಭಜನೆ ಮಾಡಬಾರದು? ಎಂದು ಅವರಿಗೆ ವಿವರಣೆ ನೀಡಿದ್ದು, ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಬಿಬಿಎಂಪಿ ವಿಭಜನೆ ಮಾಡಬೇಡಿ

ಬಿಬಿಎಂಪಿ ವಿಭಜನೆ ಮಾಡಬೇಡಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸುವ ಸುಗ್ರೀವಾಜ್ಞೆಗೆ ಸಹಿ ಹಾಕಬಾರದು ಎಂದು ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಅಖಂಡ ಬೆಂಗಳೂರನ್ನು ಒಡೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ರಾಜಭವನಕ್ಕೆ ಬಿಜೆಪಿ ಪಾದಯಾತ್ರೆ

ರಾಜಭವನಕ್ಕೆ ಬಿಜೆಪಿ ಪಾದಯಾತ್ರೆ

ಗುರುವಾರ ಬೆಳಗ್ಗೆ ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಕೆಂಪೇಗೌಡ ಪ್ರತಿಮೆ ಬಳಿಯಿಂದ ರಾಜಭವನದ ತನಕ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿದ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸಕಾಲದಲ್ಲಿ ಚುನಾವಣೆಯನ್ನು ನಡೆಸಿ

ಸಕಾಲದಲ್ಲಿ ಚುನಾವಣೆಯನ್ನು ನಡೆಸಿ

ರಾಜ್ಯಪಾಲರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ಅಶೋಕ್ ಹೈಕೋರ್ಟ್ ಆದೇಶದಂತೆ ಮೇ.30ರೊಳಗೆ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ನಡೆಸಿ ಎಂದು ಒತ್ತಾಯಿಸಿದರು. ಚುನಾವಣೆಯನ್ನು ಮುಂದೂಡುವ ಪ್ರಯತ್ನವನ್ನು ಕೈಬಿಡಿ ಎಂದರು.

ಅಗತ್ಯ ದಾಖಲೆ ಸಲ್ಲಿಕೆ

ಅಗತ್ಯ ದಾಖಲೆ ಸಲ್ಲಿಕೆ

ಬೆಂಗಳೂರನ್ನು ಒಡೆಯುವುದು ಬೇಡ, ಆದ್ದರಿಂದ ಪಾಲಿಕೆ ವಿಭಜನೆ ಸುಗ್ರೀವಾಜ್ಞೆಗೆ ಸಹಿ ಹಾಕಬಾರದು ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಮಾಡಿದ ಬಿಜೆಪಿ ನಾಯಕರು, ಪಾಲಿಕೆಯನ್ನು ಏಕೆ ವಿಭಜನೆ ಮಾಡಬಾರದು? ಎಂದು ಅವರಿಗೆ ವಿವರಣೆ ನೀಡಿದ್ದು, ಅಗತ್ಯ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

ಬಿಬಿಎಂಪಿ ವಿಭಜನೆಗೆ ಸಂಪುಟ ಒಪ್ಪಿಗೆ

ಬಿಬಿಎಂಪಿ ವಿಭಜನೆಗೆ ಸಂಪುಟ ಒಪ್ಪಿಗೆ

198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಹಲವಾರು ತಿಂಗಳುಗಳ ಚರ್ಚೆಯ ಬಳಿಕ ಸಚಿವ ಸಂಪುಟ ಸಭೆ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಜಯಚಂದ್ರ

ರಾಜ್ಯಪಾಲರನ್ನು ಭೇಟಿ ಮಾಡಿದ ಜಯಚಂದ್ರ

ಬಿಬಿಎಂಪಿ ವಿಭಜನೆ ಸುಗ್ರೀವಾಜ್ಞೆ ವಿಚಾರದ ಬಗ್ಗೆ ರಾಜ್ಯಪಾಲರಿಗೆ ಕಾನೂನು ಸಚಿವ ಟಿ.ಬಿ.ಜಯಚಂದ್ರ ಗುರುವಾರ ಮಾಹಿತಿ ನೀಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆ ಬಗ್ಗೆ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಅಂಕಿತ ಹಾಕುವ ನಿರ್ಧಾರ ರಾಜ್ಯಪಾಲರಿಗೆ ಬಿಟ್ಟದ್ದು. ಪಾಲಿಕೆಯನ್ನು 3 ಭಾಗಗಳಾಗಿ ವಿಭಜನೆ ಮಾಡಬೇಕೆಂಬ ಚರ್ಚೆ ಹಲವು ವರ್ಷಗಳಿಂದಲೂ ಇದೆ ಎಂದು ಹೇಳಿದರು.

English summary
Karnataka BJP leaders on Thursday protest against government move to splitting Bruhat Bengaluru Mahanagara Palike (BBMP), leaders submitted memorandum to governor Vajubhai Vala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X