ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಹಗರಣ, ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ನೀಡಿದ ಬಿಜೆಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರು. ಭೂಹಗರಣ ಮಾಡಿದ್ದಾರೆ ಎಂದು ಬಿಜೆಪಿ ಸೋಮವಾರ ಎಸಿಬಿಗೆ ದೂರು ನೀಡಿದೆ.

 ಸಿದ್ದರಾಮಯ್ಯ ಮೇಲೆ 300 ಕೋಟಿ ರು ಭೂಹಗರಣ ಹೊರಿಸಿದ ಬಿಜೆಪಿ ಸಿದ್ದರಾಮಯ್ಯ ಮೇಲೆ 300 ಕೋಟಿ ರು ಭೂಹಗರಣ ಹೊರಿಸಿದ ಬಿಜೆಪಿ

ಕರ್ನಾಟಕ ಬಿಜೆಪಿ ಓಬಿಸಿ ಮೋರ್ಚದ ಅಧ್ಯಕ್ಷ ಬಿ. ಜೆ ಪುಟ್ಟಸ್ವಾಮಿ ನೇತೃತ್ವದಲ್ಲಿ ಹಲವು ಬಿಜೆಪಿ ನಾಯಕರು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗೆ ತೆರಳಿ ದೂರು ನೀಡಿದರು.

Karnataka BJP Lodges corruption complaint filed against CM Siddaramaiah

ಬೆಂಗಳೂರಿನ ಭೂಪಸಂದ್ರದಲ್ಲಿ ಸರ್ವೇ ನಂಬರ್ 20ರಲ್ಲಿ 6.26 ಎರಕೆಯನ್ನು ಜಮೀನನ್ನು ಸಿದ್ದರಾಮಯ್ಯ ಅವರು 2016ರ ಜೂನ್ ನಲ್ಲಿ ಡಿನೋಟಿಫೈ ಮಾಡಿದ್ದು, ಈ ಹಿನ್ನಲೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 42,465, 468 ಮತ್ತು 120(ಬಿ) ಲಂಚ ವಿರೋಧ ಕಾಯ್ದೆ ಹಾಗೂ ಬೇನಾಮಿ ಆಸ್ತಿ ನಿಷೇದ ಕಾಯ್ದೆ ಅದರನ್ವಯ ಪ್ರಕರಣವನ್ನು ಕೂಡಲೇ ದಾಖಲಿಸಿಕೊಳ್ಳಬೇಕೆಂದು ಎಂದು ಬಿಜೆಪಿ ನಗರ ಮತ್ತು ನಗರ ಜಿಲ್ಲೆ ವಕ್ತಾರ ಎನ್.ಆರ್. ರಮೇಶ್ ಎಸಿಬಿಗೆ ಮನವಿ ಮಾಡಿದ್ದಾರೆ..

ಬಿಜೆಪಿಯ ಈ 300 ಕೋಟಿ ರು, ಭೂಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ.

English summary
The Karnataka BJP has lodged a complaint with the Anti-Corruption Bureau (ACB) on Monday, against Karnataka Chief Minister Siddaramaiah for denotifyng Rs 300 Crore worth land violating Supreme Court guidelines in Bhoopasandra village of Bengaluru North district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X