ಬೆಂಗಳೂರು ರಸ್ತೆಯೆಂದು ಮುಂಬೈ ರಸ್ತೆ ತೋರಿಸಿದ ಬಿಜೆಪಿ ಈಗ ವಿವಾದದಲ್ಲಿ!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 7: ಬೆಂಗಳೂರಿನಲ್ಲಿ ರಸ್ತೆಗಳು ಹದಗೆಟ್ಟಿವೆ ಎಂಬುದನ್ನು ಸಾಬೀತುಪಡಿಸಲು ಅತಿ ಉತ್ಸಾಹ ತೋರಿದ ರಾಜ್ಯ ಬಿಜೆಪಿ ಮುಂಬೈನಲ್ಲಿ ಹದಗೆಟ್ಟಿದ್ದ ರಸ್ತೆಯೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದೆ.

ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಹೀಗಿವೆ. ಇದನ್ನು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಒಪ್ಪಿಕೊಂಡಿದೆ ಎಂದು ಬಿಜೆಪಿ ಕರ್ನಾಟಕ ಐಟಿ ಸೆಲ್ ಟ್ವೀಟ್ ಮಾಡಿತ್ತು.

Karnataka BJP ITcell crates controversy by posting false picture of Bengaluru road

ಆದರೆ, ಇದಕ್ಕೆ ಟ್ವಿಟ್ಟಿಗರು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸೆಲ್ ಹಾಕಿದ್ದ ಫೋಟೋದಲ್ಲಿನ ರಸ್ತೆ ಪರಿಚಯವಿದ್ದವರು, ಇದು ಬೆಂಗಳೂರಿನ ರಸ್ತೆಯಲ್ಲ, ಮುಂಬೈನ ಅರೋಲಿ ಪ್ರಾಂತ್ಯದಲ್ಲಿರುವ 6ನೇ ಹಂತದಲ್ಲಿರುವ ರಸ್ತೆ ಎಂದು ತಿಳಿಸಿದ್ದರು.

ಈ ಬಗ್ಗೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್ಸಿಗರು ಬಿಜೆಪಿಯನ್ನು ಟೀಕಿಸಲಾರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡುವುದರಲ್ಲಿ ನಿಸ್ಸೀಮರು. ಹಾಗಾಗಿ, ಈ ರೀತಿ ಮಾಡಿದ್ದಾರೆಂದು ಹೇಳಿದ್ದಾರೆ.

ಅತ್ತ, ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿ, ಇಂಥ ಆಕ್ಷೇಪಾರ್ಹ ಸುಳ್ಳನ್ನು ಹರಡಿದ್ದಕ್ಕೆ ರಾಜ್ಯ ಬಿಜೆಪಿಯು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an effort to reflect the status of Bengaluru roads, the state BJP's IT Cell had posted false picture of damaged picture on Twitter. But, twitterati lashed out against it, saying that picture was of a road in Mumbai. Now, the state congress has urged BJP to beg opportunity.
Please Wait while comments are loading...