ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ವಿರುದ್ಧ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಗೆ ಬಿಜೆಪಿ ಮೊರೆ

|
Google Oneindia Kannada News

Recommended Video

How many complaint filed in ACB against cm siddaramaiah? | Oneindia Kannada

ಬೆಂಗಳೂರು, ಸೆಪ್ಟೆಂಬರ್ 23: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) 44 ದೂರುಗಳು ದಾಖಲಾಗಿದ್ದರೂ, ಅವುಗಳ ವಿರುದ್ಧ ಎಸಿಬಿಯು ಯಾವುದೇ ತನಿಖೆ ಕೈಗೊಳ್ಳದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಶನಿವಾರ, ಬಿಜೆಪಿ ನಾಯಕ ಹಾಗೂ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು, ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು.

Karnataka BJP decides to move high court seeking probe against CM siddamaiah by ACB

ಬಿಬಿಎಂಪಿಯಲ್ಲಿ ನಡೆಸಲಾಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನಾನೇ ಎಸಿಬಿಯಲ್ಲಿ 11 ದೂರುಗಳನ್ನು ಮುಖ್ಯಮಂತ್ರಿಗಳ ವಿರುದ್ಧ ದಾಖಲಿಸಿದ್ದೇನೆ. ಇವೂ ಸೇರಿದಂತೆ ಸಿಎಂ ವಿರುದ್ಧ 44 ಪ್ರಕರಣಗಳು ದಾಖಲಾಗಿವೆ. ಆದರೂ, ಎಸಿಬಿಯಿಂದ ಯಾವುದೇ ತನಿಖೆ ಆರಂಭವಾಗಿಲ್ಲ.

ತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ. ಇದನ್ನು ಯಾರೂ ಪ್ರಶ್ನಿಸುವವರೇ ಇಲ್ಲ ಎಂಬಂತಾಗಿದೆ. ಹಾಗಾಗಿ, ಇದರ ವಿರುದ್ಧ ಕಾನೂನು ಸಮರ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ಹಾಗಾಗಿ, ಮುಂದಿನ ಮೂರು ದಿನಗಳಲ್ಲಿ ಇದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮಾಜಿ ಗೃಹ ಸಚಿವ ಆರ್. ಅಶೋಕ್ ನೇತೃತ್ವದಲ್ಲಿ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಮೇಶ್ ತಿಳಿಸಿದರು.

ಇಷ್ಟು ದಿನ ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ರಾಜ್ಯ ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ, ರಾಜ್ಯ ಹೈಕೋರ್ಟ್ ಈ ತನಿಖೆಗೆ ಸೆ. 23ರಂದು ತಡೆಯಾಜ್ಞೆ ನೀಡಿತ್ತು. ಅದರ ಬೆನ್ನಲ್ಲೇ ಈಗ, ರಾಜ್ಯ ಬಿಜೆಪಿ ಸಿಎಂ ವಿರುದ್ಧ ಎಸಿಬಿ ತನಿಖೆಯಾಗಬೇಕೆಂದು ಕೋರಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿರುವುದು ಕುತೂಹಲ ತಂದಿದೆ.

English summary
Karnataka state BJP has decided file a petition urging that court should give directions to ACB to state investigation against Chief Minister Siddaramaiah as it has received 44 complaints against him so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X